ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂವಿಧಾನ ನಿರ್ಮಾತೃ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪೋಟೋ ಇರುವುದನ್ನು ರಾಜಸ್ಥಾನ ಸರ್ಕಾರ ಕಡ್ಡಾಯ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

fact Check: ಹತ್ರಾಸ್ ಅತ್ಯಾಚಾರ: ಠಾಕೂರರದ್ದು ಬಿಸಿ ರಕ್ತ ಎಂದರಾ ಯೋಗಿ ಆದಿತ್ಯನಾಥ್?

ಪತ್ರಿಕೆಯೊಂದರ ತುಣುಕನ್ನು ಪೋಸ್ಟ್‌ ಮಡಿ ಹೀಗೆ ಹೇಳಲಾಗುತ್ತಿದೆ. ಅದರಲ್ಲಿ ಸರ್ಕಾರಿ ಶಾಲಾ-ಕಾಲೇಜು, ಆಸ್ಪತ್ರೆ ಮತ್ತು ಕಚೇರಿಗಳಲ್ಲಿ ಅಂಬೇಡ್ಕರ್‌ ಫೋಟೋ ಕಟ್ಟಾಯ ಎಂದು ರಾಜಸ್ಥಾನ ಸರ್ಕಾರ ಆದೇಶಿಸಿ ಸುತ್ತೋಲೆ ಹೊರಡಿಸಿದೆ’ ಎಂದು ಹೇಳಲಾಗಿದೆ. ಈ ಪೋಸ್ಟ್‌ ಬುಕ್‌ನಲ್ಲಿ ಸಾವಿರಾರು ಬಾರಿ ಶೇರ್‌ ಆಗಿದೆ. ಆಜ್‌ ಸಮಾಜ್‌ ದಿನಪತ್ರಿಕೆ ಹೆಸರಿನಲ್ಲಿ ಈ ಸುದ್ದಿ ವೈರಲ್‌ ಆಗುತ್ತಿದೆ.

ಆರೆ ನಿಜಕ್ಕೂ ರಾಜಸ್ಥಾನ ಸರ್ಕಾರ ಅಂಬೇಡ್ಕರ್‌ ಫೋಟೋ ಕಡ್ಡಾಯ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಈ ಸುದ್ದಿಯ ಜಾಡು ಹಿಡಿದು ರಿವರ್ಸ್‌ ಇಮೇಜ್‌ ಪರಿಶೀಲಿಸಿದಾಗ 2018 ರ ಮಾಚ್‌ರ್‍ನಲ್ಲಿ ಸುದ್ದಿಸಂಸ್ಥೆಯೊಂದರಲ್ಲಿ ಪ್ರಕಟವಾದ ಈ ಕುರಿತ ವರದಿ ಪತ್ತೆಯಾಗಿದೆ.

ಅದರಲ್ಲಿ ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಏಪ್ರಿಲ್‌ 1, 2018ರ ವರೆಗೆ ಅಂಬೇಡ್ಕರ್‌ ಫೋಟೋ ಇರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ ಬಗ್ಗೆ ವರದಿ ಇದೆ. ಅದರ ಹೊರತಾಗಿ ರಾಜಸ್ಥಾನ ಸರ್ಕಾರ ಈ ಬಗ್ಗೆ ಆದೇಶಿಸಿದ ಬಗ್ಗೆ ಯಾವುದೇ ವರದಿಗಳೂ ಲಭ್ಯವಾಗಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್