ನವದೆಹಲಿ (ಡಿ. 02): ಕೋವಿಡ್‌ ಮಹಾಮಾರಿಯ ಕಾರಣದಿಂದಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಹಲವು ತಿಂಗಳುಗಳ ಕಾಲ ಬಹುತೇಕ ಎಲ್ಲಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದಾಗಿತ್ತು. ರೈಲುಗಳ ಸಂಚಾರ ಕೂಡ ಸ್ಥಬ್ದಗೊಂಡಿತ್ತು. ಇತ್ತೀಚೆಗೆ ಕೆಲ ದಿನಗಳಿಂದ ರೈಲುಗಳ ನಿಯಮಿತ ಸಂಚಾರ ಆರಂಭವಾಗಿದೆ.

Fact Check : 2024 ರ ಚುನಾವಣೆಯಲ್ಲಿ ಮತ ಹಾಕದಿದ್ರೆ 350 ರೂ ದಂಡ?

ಇನ್ನೂ ರೈಲುಗಳ ಪೂರ್ಣ ಪ್ರಮಾಣದ ಸಂಚಾರ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸಾಕಷ್ಟುನಷ್ಟಅನುಭವಿಸಿದೆ. ಈ ನಷ್ಟವನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ರೈಲ್ವೆ ಉದ್ಯೋಗಳ ಪ್ರಯಾಣ ಭತ್ಯೆಯಲ್ಲಿ ಶೇ.50ರಷ್ಟನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಓಟಿ(ಓವರ್‌ ಟೈಮ್‌) ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಗುತ್ತಿದ್ದು, ಈ ನಿಯಮ ಸುಮಾರು 13 ಲಕ್ಷ ಉದ್ಯೋಗಿಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.

 

ಹಲವಾರು ಮುಖ್ಯವಾಹಿನಿ ಮಾಧ್ಯಮಗಳೂ ಇದನ್ನು ವರದಿ ಮಾಡಿವೆ. ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪ್ರೆಸ್‌ ಇನ್ಫಾಮೇಶನ್‌ ಬ್ಯೂರೋ(ಪಿಐಬಿ) ಸಹ ಇದು ಸುಳ್ಳುಸುದ್ದಿ, ರೈಲ್ವೆ ಸಚಿವಾಲಯ ಇಂತಹ ಯಾವುದೇ ಆದೇಶವನ್ನೂ ಹೊರಡಿಸಿಲ್ಲ ಎಂದು ಹೇಳಿದೆ. ಹಾಗಾಗಿ ರೈಲ್ವೆ ಉದ್ಯೋಗಿಗಳ ಪ್ರಯಾಣ ಭತ್ಯೆ ಕಡಿತ ಮಾಡಲಾಗುತ್ತಿದೆ ಎಂಬುದು ಸುಳ್ಳುಸುದ್ದಿ.

- ವೈರಲ್ ಚೆಕ್