Fact Check : ಬಂಗಾಳಕ್ಕೆ ಶಾ ಭೇಟಿ, ಸೋಲುವ ಭೀತಿಯಲ್ಲಿ ಕಣ್ಣೀರಿಟ್ರಾ ಮಮತಾ ಬ್ಯಾನರ್ಜಿ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಬಂಗಾಳಕ್ಕೆ ಭೇಟಿ ನೀಡಿ ವಾಪಸ್ ಹೋದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ ಕಣ್ಣೀರು ಹಾಕಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ನವದೆಹಲಿ (ಡಿ. 28): ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಬಂಗಾಳಕ್ಕೆ ಭೇಟಿ ನೀಡಿ ವಾಪಸ್ ಹೋದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ ಕಣ್ಣೀರು ಹಾಕಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಮತಾ ಬ್ಯಾನರ್ಜಿ ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಅಮಿತ್ ಶಾ ಭೇಟಿ ನೀಡಿ ವಾಪಸ್ಸಾದ ಬಳಿಕ ಚುನಾವಣೆ ಸೋಲುವ ಭೀತಿಯಲ್ಲಿ ಮಮತಾ ಕಣ್ಣೀರಿಟ್ಟರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಜನವರಿ 8, 2020ರಂದು ಪ್ರಕಟವಾದ ಇದೇ ರೀತಿಯ ವಿಡಿಯೋ ಯುಟ್ಯೂಬ್‌ನಲ್ಲಿ ಪತ್ತೆಯಾಗಿದೆ.
Fact Check : ಮೋದಿ ಸೋದರರೆಲ್ಲಾ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರಾ?
2019 ರ ಜು.2ರಂದು ಮತ್ತೊಂದು ಯುಟ್ಯೂಬ್ ಚಾನಲ್ ಸಹ ಇದೇ ವಿಡಿಯೋವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ 2006ರಲ್ಲಿ ಸಿಂಗೂರ್‌ಗೆ ಭೇಟಿ ನೀಡಲು ಅವಕಾಶ ಸಿಗದಿದ್ದಾಗ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಗದ್ಗದಿತರಾಗಿ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
- ವೈರಲ್ ಚೆಕ್