ಪೊಲೀಸ್ ಇನ್‌ಸ್ಪೆಕ್ಟರ್ ಜೊತೆಗೆ ಹಲವಾರು ಬುರ್ಕಾಧಾರಿ ಮಹಿಳೆಯರು ನಿಂತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ‘ಬುರ್ಕಾ ಧರಿಸಿ ನಿಂತವರು ಕೇರಳದ ಮಹಿಳಾ ಪೊಲೀಸ್ ಸಿಬ್ಬಂದಿ’ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ?
ಬೆಂಗಳೂರು (ನ. 24): ಪೊಲೀಸ್ ಇನ್‌ಸ್ಪೆಕ್ಟರ್ ಜೊತೆಗೆ ಹಲವಾರು ಬುರ್ಕಾಧಾರಿ ಮಹಿಳೆಯರು ನಿಂತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ‘ಬುರ್ಕಾ ಧರಿಸಿ ನಿಂತವರು ಕೇರಳದ ಮಹಿಳಾ ಪೊಲೀಸ್ ಸಿಬ್ಬಂದಿ’ ಎಂದು ಹೇಳಲಾಗಿದೆ.
ಕೆಲವರು ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ‘ಇದನ್ನು ನೋಡಿ ಅಚ್ಚರಿ ಪಡಬೇಡಿ. ಇದು ಸೌದಿ ಅರೇಬಿಯಾದ ದೃಶ್ಯವಲ್ಲ. ಕೇರಳದ ಮಹಿಳಾ ಪೊಲೀಸ್ ಸಿಬ್ಬಂದಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಟ್ವೀಟರ್ ಮತ್ತು ವಾಟ್ಸ್‌ಆ್ಯಪ್‌ನಲ್ಲೂ ಇದು ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಬುರ್ಕಾಧಾರಿಗಳು ಕೇರಳದ ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ಆಂಗ್ಲ ಸುದ್ದಿಸಂಸ್ಥೆಯೊಂದರಲ್ಲಿ ಇದೇ ಫೋಟೋ 2017 ಅಕ್ಟೋಬರ್ 24ರಂದು ವರದಿಯಾಗಿರುವುದು ಕಂಡುಬಂದಿದೆ. ಅದರಲ್ಲಿ ‘ವಿದ್ಯಾರ್ಥಿಗಳೊಂದಿಗೆ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಜಿ.ಸಿಮೋನ್’ ಎಂಬ ಫೋಟೋ ಶೀರ್ಷಿಕೆ ಇದೆ.
Fact check : ಭಾರತದಲ್ಲಿ ಕೊರೊನಾ ಲಸಿಕೆ ಇಲ್ಲಿ ಸಿಗುತ್ತದೆ?
ವರದಿಯಲ್ಲಿ ಬುರ್ಕಾಧಾರಿಗಳು ಕೇರಳದ ಉಲಿಯತಡುಕದ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳು ಎಂದಿದೆ. ಕಾಲೇನಲ್ಲಿ ಆಯೋಜಿಸಲಾಗಿದ್ದ ಕಾರ‍್ಯಕ್ರಮವೊಂದಕ್ಕೆ ಕೆ.ಜಿ.ಸಿಮೋನ್ ಅವರನ್ನು ಆಹ್ವಾನಿಸಲಾಗಿತ್ತು. ಕಾರ‍್ಯಕ್ರಮ ಮಗಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಪೋಟೋ ತೆಗೆಸಿಕೊಂಡಿದ್ದರು. ಹಾಗಾಗಿ ವೈರಲ್ ಸುದ್ದಿಸುಳ್ಳು ಎಂಬುದು ಸ್ಪಷ್ಟ.
- ವೈರಲ್ ಚೆಕ್
