Fact Check : ಕೇರಳದಲ್ಲಿ ಜಿಯೋ ಸೇವೆಯನ್ನು ನಿಷೇಧಿಸಲಾಗಿದೆಯಂತೆ!

ಕೇರಳ ಸರ್ಕಾರ ಇಡೀ ರಾಜ್ಯಾದ್ಯಂತ ಜಿಯೋ ಇಂಟರ್‌ನೆಟ್‌ ಸೇವೆಯನ್ನೇ ನಿಷೇಧಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೊತೆಗೆ ರಿಲಯನ್ಸ್‌ ಜಿಯೋದ ಅರ್ಧ ದರಕ್ಕೆ ಸರ್ಕಾರವೇ ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಸೇವೆಯನ್ನು ನೀಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ತೀರ್ಮಾನಿಸಿದೆ ಎಂದೂ ಹೇಳಲಾಗುತ್ತಿದೆ.ನಿಜನಾ ಇದು?

Fact check of kerala banned jio internet service in the state hls

ಬೆಂಗಳೂರು (ಜ. 02): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟಿಸುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರ ಉದ್ಯಮಿ ಮುಕೇಶ್‌ ಅಂಬಾನಿಗೆ ನೆರವಾಗಲು ಇಂತಹ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿ ಪಂಜಾಬ್‌, ಹರಾರ‍ಯಣ ರೈತರು ಜಿಯೋ ಟವರ್‌ಗಳನ್ನು ಗುರಿಯಾಗಿಸಿಕೊಂಡು ಮೊಬೈಲ್‌ ಟವರ್‌ಗಳನ್ನು ನಾಶಪಡಿಸುತ್ತಿದ್ದಾರೆ.

ಈ ಮಧ್ಯೆ ಕೇರಳ ಸರ್ಕಾರ ಇಡೀ ರಾಜ್ಯಾದ್ಯಂತ ಜಿಯೋ ಇಂಟರ್‌ನೆಟ್‌ ಸೇವೆಯನ್ನೇ ನಿಷೇಧಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೊತೆಗೆ ರಿಲಯನ್ಸ್‌ ಜಿಯೋದ ಅರ್ಧ ದರಕ್ಕೆ ಸರ್ಕಾರವೇ ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಸೇವೆಯನ್ನು ನೀಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ತೀರ್ಮಾನಿಸಿದೆ ಎಂದೂ ಹೇಳಲಾಗುತ್ತಿದೆ.

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ಇಂಥದ್ದೊಂದು ಸುದ್ದಿ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟವಾಗಿ ಭಾರೀ ಚರ್ಚೆಗೊಳಪಡಬೇಕಿತ್ತು. ಆದರೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲೂ ವರದಿಯಾಗಿಲ್ಲ.

Fact Check : ಅದಾನಿ ಗ್ರೂಪ್‌ಗೆ ರೈಲ್ವ ಮಾರಾಟ!

ಅಲ್ಲಿಗೆ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗುತ್ತದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಕೇರಳ ಸರ್ಕಾರ ‘ಕೇರಳ ಫೈಬರ್‌ ಆಪ್ಟಿಕ್‌ ನೆಟ್‌ವರ್ಕ್’ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ 2 ಲಕ್ಷ ಕುಟುಂಬಕ್ಕೆ ಉಚಿತ ಇಂಟರ್‌ನೆಟ್‌ ಸೇವೆ ನೀಡಲು ಚಿಂತಿಸುತ್ತಿದೆ’ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು ಪತ್ತೆಯಾಗಿದೆ. ಅದರ ಹೊರತಾಗಿ ಜಿಯೋ ನಿಷೇಧಿಸುವ ಯಾವುದೇ ವರದಿ ಲಭ್ಯವಾಗಿಲ್ಲ.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios