Fact Check: ಅದಾನಿ ಗ್ರೂಪ್‌ಗೆ ರೈಲ್ವೆ ಮಾರಾಟ!

ಕೇಂದ್ರ ಸರ್ಕಾರ ಕೆಲವೊಂದು ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಅದಾನಿಗೆ ರೈಲ್ವೇ ಮಾರಾಟವಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಈ ಕುರಿತಾದ ಫ್ಯಾಕ್ಟ್‌ ಚೆಕ್ ಇಲ್ಲಿದೆ ನೋಡಿ.

Fact Check of Adani Group Purchase Indian Railway kvn

ಬೆಂಗಳೂರು(ಜ.01): ಸರ್ಕಾರಿ ಸಂಸ್ಥೆಗಳ ಖಾಸಗೀಕರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತೀಯ ರೈಲ್ವೆಯನ್ನು ಅದಾನಿ ಗ್ರೂಪ್‌ ಖರೀದಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

‘ಅದಾನಿ ರೈಲ್ವೆ’ ಎಂದು ಬರೆದಿರುವ ರೈಲ್ವೆ ಪ್ಲಾಟ್‌ಫಾರ್ಮ್‌ ಟಿಕೆಟ್‌ವೊಂದರ ಫೋಟೊ ಹಂಚಿಕೊಂಡು ಹೀಗೆ ಹೇಳಲಾಗುತ್ತಿದೆ. ‘ರೈಲ್ವೆ ಈಗ ನಮ್ಮ ಖಾಸಗಿ ಸ್ವತ್ತು’ ಎಂದು ಟಿಕೆಟ್‌ನಲ್ಲಿ ಹೇಳಲಾಗಿದೆ. ಪುಣೆ ರೈಲ್ವೆ ನಿಲ್ದಾಣದ ಈ ಟಿಕೆಟ್‌ ದಿನಾಂಕ, ಸಮಯ ಸೇರಿದಂತೆ ಇತರೆ ಮಾಹಿತಿಗಳನ್ನು ಒಳಗೊಂಡಿದೆ. ಟಿಕೆಟ್‌ ದರವನ್ನು 50 ರು. ಎಂದು ನಮೂದಿಸಲಾಗಿದೆ. ಈ ಟಿಕೆಟ್‌ ಫೋಟೊವನ್ನು ಹಂಚಿಕೊಂಡಿರುವ ನೆಟ್ಟಿಗರು ರೈಲ್ವೆಯನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

Fact Check : ಬಂಗಾಳಕ್ಕೆ ಶಾ ಭೇಟಿ, ಸೋಲುವ ಭೀತಿಯಲ್ಲಿ ಕಣ್ಣೀರಿಟ್ರಾ ಮಮತಾ ಬ್ಯಾನರ್ಜಿ?

ಆದರೆ ನಿಜಕ್ಕೂ ರೈಲ್ವೆಯನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ ಹಳೆಯ ಟಿಕೆಟ್‌ ಎಡಿಟ್‌ ಮಾಡಿ ಈ ರೀತಿಯ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂಬುದು ಖಚಿತವಾಗಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಪುಣೆಯಲ್ಲಿ ರೈಲ್ವೆ ಪ್ಲಾಟ್‌ಫಾಮ್‌ರ್‍ ಟಿಕೆಟ್‌ ದರವನ್ನು ಕಳೆದ ಆಗಸ್ಟ್‌ನಲ್ಲಿಯೇ ಹೆಚ್ಚಿಸಲಾಗಿತ್ತು.

 

ಆಗ ನೆಟ್ಟಿಗರೊಬ್ಬರು ಟಿಕೆಟ್‌ ದರ ಏರಿಕೆ ಪ್ರಶ್ನಿಸಿ ಟಿಕೆಟ್‌ ಚಿತ್ರವನ್ನು ಹಂಚಿಕೊಂಡಿದ್ದರು. ಸದ್ಯ ಈಗ ಅದೇ ಫೋಟೊವನ್ನು ಎಡಿಟ್‌ ಮಾಡಿ ಮೇಲ್ಭಾಗದಲ್ಲಿ ಅದಾನಿ ರೈಲ್ವೇಸ್‌ ಎಂದು ತಿದ್ದಲಾಗಿದೆ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು.
 

Latest Videos
Follow Us:
Download App:
  • android
  • ios