Fact Check: ರೈಲ್ವೆ: ಅರ್ಜಿ ಹಾಕಿದವರಿಗೆಲ್ಲಾ 'ಗುಮಾಸ್ತ' ಹುದ್ದೆ!

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ನಿಜನಾ ಈ ಸುದ್ದಿ..?

Fact Check of Job offer letter issued in name of Railway Ministry hls

ಬೆಂಗಳೂರು (ಅ. 29): ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ಈ ಕುರಿತು ಆದೇಶಪತ್ರವನ್ನೂ ನೀಡಲಾಗಿದೆ. ನಿಮ್ಮ ಕೌಶಲ ಮತ್ತು ಹಿನ್ನೆಲೆ ನಮ್ಮ ತಂಡಕ್ಕೆ ಆಸ್ತಿಯಾಗಬಲ್ಲದು ಎಂಬ ನಂಬಿಕೆ ನಮಗಿದೆ ಎಂದು ಪತ್ರದ ಆರಂಭದಲ್ಲಿ ಹೇಳಲಾಗಿದೆ. ಪತ್ರದ ಒಂದು ಬದಿಗೆ ರೈಲ್ವೆ ಸಚಿವಾಲಯ, ಭಾರತ ಸರ್ಕಾರ ಬೆಂಗಳೂರು ಎಂದು ಅಚ್ಚು ಮಾಡಲಾಗಿದೆ.

Fact Check: ಪಶ್ಚಿಮ ಬಂಗಾಳ: ದುರ್ಗಾಪೂಜೆ ಪೆಂಡಾಲ್‌ನಲ್ಲಿ ನಮಾಜ್ ಮಾಡಲಾಯ್ತಾ.?

ಈ ಪತ್ರ ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ ಇದು ನಕಲಿ ಪತ್ರ ಎಂದು ಸ್ಪಷ್ಟನೆ ನೀಡಿದೆ.

 

ರೈಲ್ವೆ ಇಲಾಖೆಗೆ ನೇಮಕಾತಿಗಾಗಿ ರೈಲ್ವೆಎಂಇಂಡಿಯಾ ವಿವಿಧ ಹಂತದಲ್ಲಿ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ನೇಮಕಾತಿ ನಡೆಯುತ್ತದೆ. ಈ ನೇಮಕಾತಿ ಕುರಿತ ಸೂಚನೆಗಳನ್ನು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೈಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.

- ವೈರಲ್ ಚೆಕ್

Latest Videos
Follow Us:
Download App:
  • android
  • ios