ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಜಮ್ಮು-ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಜಮ್ಮು-ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Scroll to load tweet…

ಬೃಹತ್‌ ವಸತಿ ನಿಲಯದ ಫೋಟೋವನ್ನು ಪೋಸ್ಟ್‌ ಮಾಡಿ, ‘2012ರಲ್ಲಿ ಕಾಂಗ್ರೆಸ್‌ ಜೆಎನ್‌ಯುದಲ್ಲಿ 400 ಕೋಣೆಗಳ ವಸತಿ ನಿಲಯ ಕಟ್ಟಿಸ್ತಿತ್ತು. ಈ ಹಾಸ್ಟೆಲ್‌ನಲ್ಲಿ ಹಿಂದು ಅಥವಾ ಬೇರಾವುದೇ ಧರ್ಮದ ವಿದ್ಯಾರ್ಥಿಗಳು ಉಳಿದುಕೊಳ್ಳಲು ಅವಕಾಶವಿಲ್ಲ. ಜಮ್ಮು-ಕಾಶ್ಮಿರದ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಉಳಿದುಕೊಳ್ಳಬಹುದು. ದುರದೃಷ್ಟವಶಾತ್‌ ಈ ವಿದ್ಯಾರ್ಥಿಗಳು ಓದು ಮುಗಿದ ನಂತರ ಭಾರತದ ವಿರುದ್ಧವೇ ಘೋಷಣೆ ಕೂಗುತ್ತಾರೆ’ ಎಂದು ಹೇಳಲಾಗಿದೆ.

Fact Check: ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ?

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಚಿತ್ರದಲ್ಲಿ ಕಾಣುವಂತೆ ಹಾಸ್ಟೆಲ್‌ ಕಟ್ಟಡದ ಮೇಲೆ ‘ಜೆ​​-ಕೆ ಹಾಸ್ಟೆಲ್‌, ಜೆಎನ್‌ಯು’ ಎಂದು ಬರೆದಿಲ್ಲ, ಬದಲಾಗಿ ‘ಜಾಮಿಯಾ ಮಿಲಿಯಾ ಇಸ್ಲಾಮಿಕ್‌’ ಎಂದು ಬರೆದಿದೆ.

2017ರಲ್ಲಿ ಈ ಮಹಿಳಾ ವಸತಿ ನಿಲಯದ ಉದ್ಘಾಟನೆಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮತ್ತು ಆಗಿನ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೋಗಿದ್ದರು. ಇದು 135 ಕೋಣೆಗಳನ್ನು ಒಳಗೊಂಡಿದ್ದು, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿನಿಯರು ಇಲ್ಲಿ ಉಳಿದುಕೊಳ್ಳಬಹುದು. ಉಳಿದ ವಿದ್ಯಾರ್ಥಿನಿಯರೂ ಉಳಿದುಕೊಳ್ಳಬಹುದು. ಆದರೆ ಉಚಿತ ಅಲ್ಲ. ವೈರಲ್‌ ಆಗಿರುವ ಫೋಟೋ ಜಾಮಿಯಾ ಮಿಲಿಯಾ ವಿವಿಯದ್ದೇ ಹೊರತು ಜೆಎನ್‌ಯುದಲ್ಲ ಎಂಬುದು ಸ್ಪಷ್ಟವಾಗಿದೆ.