Fact Check : ಇಮ್ರಾನ್ ಖಾನ್ ಸರ್ಕಾರ ವಿರುದ್ಧ ನಡೆದ ರ್ಯಾಲಿಯಲ್ಲಿ ಭಾರತದ ರಾಷ್ಟ್ರಧ್ವಜ?
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ವಿರುದ್ಧ ನಡೆದ ರ್ಯಾಲಿಯೊಂದರಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತ್ತು ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ನವದೆಹಲಿ (ಅ. 23): ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳೆಲ್ಲಾ ಸೇರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ರಾರಯಲಿಗಳನ್ನು ನಡೆಸುತ್ತಿವೆ. ಇದರ ಮಧ್ಯೆ ಕರಾಚಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ವಿರುದ್ಧ ನಡೆದ ರಾರಯಲಿಯೊಂದರಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತ್ತು ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫೋಟೋದಲ್ಲಿ ಕಿಕ್ಕಿರಿದ ಜನಜಂಗುಳಿ ನಡುವೆ ಭಾರತದ ತ್ರಿವರ್ಣ ಧ್ವಜದಂತೆ ಭಾಸವಾಗುವ ಧ್ವಜದ ದೃಶ್ಯವಿದೆ. ಇದು ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ‘ಕರಾಚಿಯಲ್ಲಿ ಪಾಕ್ ಸೇನೆ ವಿರುದ್ಧ ಭಾರತ ರಾಷ್ಟ್ರ ಧ್ವಜದ ವಿಜೃಂಭಣೆ. ಕಾರಣ ಏನಿರಬಹುದು’ ಎಂದು ಚರ್ಚಿಸುತ್ತಿದ್ದಾರೆ.
ಆದರೆ ನಿಜಕ್ಕೂ ಕರಾಚಿ ರಾರಯಲಿಯಲ್ಲಿ ಭಾರತ ಧ್ವಜ ಹಾರಾಡಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಸುದ್ದಿಸಂಸ್ಥೆಯೊಂದು ನ.18ರಂದು ಕರಾಚಿಯಲ್ಲಿ ನಡೆದ ಪ್ರತಿಭಟನಾ ರ್ಯಾಲಿಯ ಫೋಟೋ ಸಮೇತ ಬಗ್ಗೆ ವರದಿ ಮಾಡಿದ್ದು ಕಂಡುಬಂದಿದೆ.
Fact Check : ನೀಟ್ ಪರೀಕ್ಷೆಯ ಮೊದಲ ಐದೂ ಸ್ಥಾನಗಳು ಮುಸ್ಲಿಮರಿಗೆ?
ಅದರ ಜಾಡು ಹಿಡಿದು ಪರಿಶೀಲಿಸಿದಾಗ ಆ ಫೋಟೋಗಳಲ್ಲಿ ಭಾರತದ ರಾಷ್ಟ್ರಧ್ವಜವೇ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಭಾರತ ರಾಷ್ಟ್ರಧ್ವಜವೆಂದು ಹೇಳಲಾದ ಧ್ವಜ ಪಾಕಿಸ್ತಾನ ಅವಾಮಿ ತೆಹ್ರೀಕ್ ಅಥವಾ ಪಿಎಟಿ ಸಂಘಟನೆಯ ಧ್ವಜ. ಈ ಧ್ವಜ ದೂರದಿಂದ ಭಾರತ ರಾಷ್ಟ್ರಧ್ವಜದಂತೆಯೇ ಭಾಸವಾಗುತ್ತದೆ.
- ವೈರಲ್ ಚೆಕ್