ಇತ್ತೀಚೆಗಷ್ಟೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯ 2020ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಒಡಿಶಾದ ಸೋಯೆಬ್‌ ಅಫ್ತಾಬ್‌ ಅವರು 720ಕ್ಕೆ 720 ಅಂಕ ಗಳಿಸಿ ಮೊದಲ ಸ್ಥಾನ ದಾಖಲಿಸಿದ್ದರು.

Fact Check : ರಾಹುಲ್ 7 ನೇ ವಿದ್ಯಾವಂತ ನಾಯಕನಾ?

ಈ ಮಧ್ಯೆ ನೀಟ್‌ ಪರೀಕ್ಷೆಯ ಮೊದಲ ಐದೂ ಸ್ಥಾನಗಳಲ್ಲಿ ಮುಸ್ಲಿಮರೇ ಇದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೇಸ್‌ಬುಕ್‌ ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿಯ ಪ್ರಕಾರ, ನೀಟ್‌ನ ಮೊದಲ ಐದು ಸ್ಥಾನಗಳಲ್ಲಿ ಮುಸ್ಲಿಮರೇ ಇದ್ದಾರೆ. ಇವರ ಪಟ್ಟಿಇಂತಿದೆ; ಸೋಯೆಬ… ಅಫ್ತಾಬ… ಮೊದಲ ಸ್ಥಾನ, ಝೀಷನ್‌ ಅರ್ಷಫ್‌ 2ನೇ ಸ್ಥಾನ, ಯಾಸಿರ್‌ ಹಮೀದ್‌ 3ನೇ ಸ್ಥಾನ, ಸಾಜಿದ್‌ ಮೆಹಮೂದ್‌ 4ನೇ ಸ್ಥಾನ ಹಾಗೂ ಸನಾ ಮಿರ್‌ 5ನೇ ಸ್ಥಾನ.

 

ಆದರೆ ಈ ಸುದ್ದಿಯ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ನೀಟ್‌ ಯುಜಿ ಪರೀಕ್ಷೆಯಲ್ಲಿ ಸೋಯೆಬ್ ಅಫ್ತಾಬ್‌ ಮೊದಲ ಸ್ಥಾನ ಪಡೆದಿರುವುದು ಸತ್ಯ. ಆದರೆ, ಉಳಿದ ನಾಲ್ಕು ಸ್ಥಾನಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. 2ನೇ ಸ್ಥಾನ ಆಕಾಂಕ್ಷಾ ಸಿಂಗ್‌, 3ನೇ ಸ್ಥಾನ ತುಮ್ಮಲಾ ಸ್ನಿಕಿತಾ, 4ನೇ ಸ್ಥಾನ ವಿನೀತ್‌ ಶರ್ಮಾ ಹಾಗೂ 5ನೇ ಸ್ಥಾನ ಅಮ್ರಿಶಾ ಖೈತಾನ್‌ ಅವರು ಪಡೆದಿದ್ದಾರೆ. ಹಾಗಾಗಿ 2020ರ ನೀಟ್‌ ಪರೀಕ್ಷೆಯ ಎಲ್ಲಾ ಮೊದಲ 5 ಸ್ಥಾನಗಳನ್ನೂ ಮುಸ್ಲಿಮರೇ ಗಳಿಸಿದ್ದಾರೆ ಎನ್ನುವುದು ಸುಳ್ಳುಸುದ್ದಿ.

- ವೈರಲ್ ಚೆಕ್