Fact Check: ಕೊರೊನಾಗೆ ಬೇರೆ ಔಷಧಿ ಇಲ್ಲ, ಬಿಸಿ ಹಬೆಯೇ ಚೀನಾದಲ್ಲಿ ಕೋವಿಡ್ ಮದ್ದು?
ಚೀನಾದಲ್ಲಿ ಜನರು ಕೊರೊನಾಗೆ ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಬಿಸಿ ಹಬೆಯಿಂದಲೇ ವೈರಸ್ಸನ್ನು ಕೊಲ್ಲುತ್ತಿದ್ದಾರೆ. ದಿನಕ್ಕೆ 4 ಬಾರಿ ಬಿಸಿ ಬಿಸಿ ಟೀ, 4 ಬಾರಿ ಬಿಸಿ ನೀರಿನಿಂದ ಬಾಯಿಮುಕ್ಕಳಿಸುತ್ತಾರೆ, 4 ಬಾರಿ ಬಿಸಿ ನೀರಿನ ಹಬೆ ಪಡೆಯುತ್ತಾರಂತೆ. ನಿಜನಾ ಈ ಸುದ್ದಿ?
ಬೆಂಗಳೂರು (ಅ. 13): ಕೊರೋನಾ ಉಗಮಸ್ಥಳ ಚೀನಾವಾದರೂ ಮಹಾಮಾರಿಯ ಆರ್ಭಟಕ್ಕೆ ನಲುಗಿರುವ ದೇಶಗಳು ಮಾತ್ರ ಬೇರೆ. ಚೀನಾದಲ್ಲಿ ಈವರೆಗೆ ಕೇವಲ 84,557 ಜನರಿಗೆ ಸೋಂಕು ತಗುಲಿ, 4634 ಜನರು ಮಾತ್ರ ಬಲಿಯಾಗಿದ್ದಾರೆ. ಇದರ ನಡುವೆ ‘ಚೀನೀಯರು ಕೊರೋನಾ ರೋಗಕ್ಕೆ ಯಾವುದೇ ಔಷಧ ಅಥವಾ ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಅವರು ಆಸ್ಪತ್ರೆಗೆ ಹೋಗುವುದನ್ನೂ ನಿಲ್ಲಿಸಿದ್ದಾರೆ.
Fact Check : ರಾಜಸ್ಥಾನದಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ಅಂಬೇಡ್ಕರ್ ಫೋಟೋ ಕಡ್ಡಾಯ?
ಬಿಸಿ ಹಬೆಯಿಂದಲೇ ವೈರಸ್ಸನ್ನು ಕೊಲ್ಲುತ್ತಿದ್ದಾರೆ. ದಿನಕ್ಕೆ 4 ಬಾರಿ ಬಿಸಿ ಬಿಸಿ ಟೀ, 4 ಬಾರಿ ಬಿಸಿ ನೀರಿನಿಂದ ಬಾಯಿಮುಕ್ಕಳಿಸುತ್ತಾರೆ, 4 ಬಾರಿ ಬಿಸಿ ನೀರಿನ ಹಬೆ ಪಡೆಯುತ್ತಾರೆ. ಪರಿಣಾಮವಾಗಿ ನಾಲ್ಕೇ ನಾಲ್ಕು ದಿನದಲ್ಲಿ ವೈರಸ್ ಸಾಯುತ್ತದೆ. 5ನೇ ದಿನದ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬರುತ್ತದೆ’ ಎಂದು ಹೇಳಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವುಹಾನ್‌ನಲ್ಲಿ ನೆಲೆಸಿರುವ ಭಾರತೀಯರೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಆದರೆ ನಿಜಕ್ಕೂ ಈ ಮದ್ದಿನಿಂದಲೇ ಚೀನೀಯರು ಕೊರೋನಾದಿಂದ ಗುಣಮುಖರಾಗುತ್ತಿದ್ದಾರೆಯೇ ಎಂದು ಪರಿಶೀಲಿಸಿದಾಗ ಚೀನಾದ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ಲೇಖನಗಳು ಲಭ್ಯವಾಗಿಲ್ಲ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯು ಬಿಸಿ ಹಬೆಯಂಥ ಮನೆ ಮದ್ದುಗಳು ಕೋರೋನಾಗೆ ಔಷಧ ಅಲ್ಲ ಎಂದಿದೆ. ಹಾಗಾಗಿ ಚೀನೀಯರು ಬಿಸಿ ಹಬೆ, ಟೀ ಕುಡಿದು ಕೊರೋನಾದಿಂದ ಗುಣಮುಖರಾಗುತ್ತಿದ್ದಾರೆ ಎಂಬ ಸುದ್ದಿ ಸುಳ್ಳು.
- ವೈರಲ್ ಚೆಕ್