Fact Check: ಮಹಾರಾಷ್ಟ್ರದಲ್ಲಿದೆ ಬೋಟ್ ಆ್ಯಂಬುಲೆನ್ಸ್!
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆಯೇ ರಾಜ್ಯ ನೌಕಾ ಆ್ಯಂಬುಲೆನ್ಸ್‌ನಂತ ವಿನೂತನ ಸೇವೆಯನ್ನು ಆರಂಭಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆಯೇ ರಾಜ್ಯ ನೌಕಾ ಆ್ಯಂಬುಲೆನ್ಸ್‌ನಂತ ವಿನೂತನ ಸೇವೆಯನ್ನು ಆರಂಭಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಆರೋಗ್ಯ ಸಮಿತಿಯ ಮುಖ್ಯಸ್ಥ ಅಮೇಯ್ ಘೋಲೆ ಅವರೇ ಇದನ್ನು ಪೋಸ್ಟ್ ಮಾಡಿ,‘ ಮಹಾರಾಷ್ಟ್ರ ಸರ್ಕಾರ ಬೋಟ್ ಆ್ಯಂಬುಲೆನ್ಸ್ ಸೇವೆ ಆರಂಭಿಸುವ ಮೂಲಕ ವಿಭಿನ್ನವಾದ, ಮಹತ್ವದ ಹೆಜ್ಜೆ ಇಟ್ಟಿದೆ. ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.
ಮತ್ತು ಮುಖ್ಯಮಂತ್ರಿ ಕಾರಾರಯಲಯದ ಅಧಿಕೃತ ಟ್ವೀಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಬಳಿಕ ಶಿವಸೇನೆಯ ರಾಜ್ಯಸಭಾ ಸದಸ್ಯ ಪ್ರಿಯಾಂಕಾ ಚತುರ್ವೇಸಿ ಕೂಡ ಇದನ್ನು ಶೇರ್ ಮಾಡಿ, ಮಹತ್ವದ ಹೆಜ್ಜೆ ಎಂದು ಬರೆದುಕೊಂಡಿದ್ದಾರೆ. ಅನಂತರ ಹಲವಾರು ಟ್ವೀಟರ್ ಬಳಕೆದಾರರು ಬೋಟ್ ಆ್ಯಂಬುಲೆನ್ಸ್ ಚಿತ್ರವೊಂದನ್ನು ಪೋಸ್ಟ್ ಮಾಡಿ ಇದೇ ರೀತಿ ಬರೆದುಕೊಂಡಿದ್ದಾರೆ.
Fact Check: ಮೋದಿಯ ಐಷಾರಾಮಿ ವಿಮಾನವಿದು!
ಆದರೆ ನಿಜಕ್ಕೂ ಮಹಾರಾಷ್ಟ್ರದಲ್ಲಿ ಬೋಟ್ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ವೈರಲ್ ಫೋಟೋ ಮಹಾರಾಷ್ಟ್ರದ್ದಲ್ಲ, ಫ್ರೆಂಚ್ ಕೋಸ್ಟ್‌ನ ಗ್ಯುರೆನ್ಸಿಯ ಫ್ಲೈಯಿಂಗ್ ಕ್ರಿಸ್ಟೇನ್ -3 ಹೆಸರಿನ ನೌಕಾ ಆ್ಯಂಬುಲೆನ್ಸ್ ಎಂದು ತಿಳಿದುಬಂದಿದೆ. ಬಿಬಿಸಿ ಸುದ್ದಿಸಂಸ್ಥೆ ಏಪ್ರಿಲ್ 3, 2014ರಲ್ಲಿ ಈ ಬಗ್ಗೆ ವರದಿ ಮಾಡಿದ್ದು ಲಭ್ಯವಾಗಿದೆ. ಗೇರ್ ಬಾಕ್ಸ್ ಕೆಟ್ಟುಹೋಗು ಗ್ಯುರೆನ್ಸಿಯ ನೌಕಾ ಆ್ಯಂಬುಲೆನ್ಸ್ ಕಾರ‍್ಯ ನಿಲ್ಲಿಸಿದೆ ಎಂದು ಅದರಲ್ಲಿ ವರದಿಯಾಗಿತ್ತು.
- ವೈರಲ್ ಚೆಕ್