ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಮಹಿಳೆಯ ಫೋಟೋವನ್ನು ಪೋಸ್ಟ್‌ ಮಾಡಿ, ‘ಈ ಮಹಿಳೆ ಉತ್ತರ ಪ್ರದೇಶದ ವೈದ್ಯೆ. ಇಸ್ಲಾಮಿಕ್‌ ಜಿಹಾದಿಗಳ ಆಕ್ರಮಣದಿಂದ ಈಕೆ ಮೃತಪಟ್ಟಿದಾರೆ ಎಂದು ಹೇಳಲಾದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಉತ್ತರ ಪ್ರದೇಶದಲ್ಲಿ ವೈದ್ಯೆ ಮೇಲೆ ಹಲ್ಲೆ ಮಾಡಲಾಗಿತ್ತೇ ಎಂದು ಆಲ್ಟ್‌ನ್ಯೂಸ್‌ ಪರಿಶೀಲಿಸಿದಾಗ ಈ ಫೋಟೋ ಹಿಂದಿನ ವಾಸ್ತವ ತಿಳಿದುಬಂದಿದೆ. ‘ಭೋಪಾಲ್‌ ಸಮಾಚಾರ್‌’ ನಲ್ಲಿ ಈ ಕುರಿತ ವರದಿ ಏಪ್ರಿಲ್‌ 7ರಂದು ಪ್ರಕಟವಾಗಿದೆ.

Fact Check: ಸಮುದ್ರಕ್ಕೆ ಕೊರೋನಾ ಸೋಂಕಿತರ ಹೆಣ, ಮೀನು ತಿನ್ಬೇಡಿ!

 

ಅದರಲ್ಲಿ ಮಧ್ಯಪ್ರದೇಶದ ಶಿವಪುರ ಮೆಡಿಕಲ್‌ ಕಾಲೇಜಿನ ವೈದ್ಯೆ ವಂದನಾ ತಿವಾರಿ ಕೊರೋನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿ ಏಪ್ರಿಲ್‌ 1ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅನಂತರ ಆರೋಗ್ಯ ಹದಗೆಟ್ಟಹಿನ್ನೆಲೆ ಬಿಹಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತಿವಾರಿ ಅವರಿಗೆ ಬ್ರೈನ್‌ ಹ್ಯೂಮರೇಜ್‌ ಇರುವುದಾಗಿ ವೈದ್ಯರು ದೃಢಪಡಿಸಿದ್ದರು. ಅನಂತರ ತಿವಾರಿ ಕೋಮಾದಲ್ಲಿದ್ದು, ಶಸ್ತ್ರಚಿಕಿತ್ಸೆ ವಿಫಲವಾಗಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಇದೇ ವರದಿಗೆ ಧರ್ಮದ ಬಣ್ಣ ಬಳಿದು ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಲಾಗುತ್ತಿದೆ.

ಈ ಬಗ್ಗೆ ಉತ್ತರ ಪ್ರದೇಶ ವೈದ್ಯರೂ ಸ್ಪಷ್ಟನೆ ನೀಡ್ದಿ, ‘ಇದು ಸುಳ್ಳು ಸುದ್ದಿ. ತಿವಾರಿ ಅವರು ಅನಾರೋಗ್ಯದಿಂದ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದು. ಇವರ ಮೇಲೆ ಹಲ್ಲೆ ನಡೆದಿಲ್ಲ’ ಎಂದಿದ್ದಾರೆ. ಹಾಗಾಗಿ ಮುಸ್ಲಿಮರ ದಾಳಿಯಿಂದ ವೈದ್ಯೆ ಮೃತಪಟ್ಟಿದ್ದಾರೆ ಎನ್ನಲಾದ ಸುದ್ದಿ ಸುಳ್ಳು.

- ವೈರಲ್ ಚೆಕ್