Fact Check: ಹಿಂದೂಗಳಿಗೆ ಮಕ್ಕಳಾಗದಂತೆ ಬಿರಿಯಾನಿಯಲ್ಲಿ ಮಾತ್ರೆ?
ತಮಿಳುನಾಡಿನ ಕೊಯಿಮತ್ತೂರ್ನಲ್ಲಿರುವ ಹೋಟೆಲ್ನಲ್ಲಿ ಹಿಂದುಗಳಿಗೆ ಮಕ್ಕಳಾಗದಂತೆ ಊಟದಲ್ಲಿ ಮಾತ್ರೆ ಹಾಕಿ ನೀಡಲಾಗುತ್ತಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ತಮಿಳುನಾಡಿನ ಕೊಯಿಮತ್ತೂರ್ನಲ್ಲಿರುವ ಹೋಟೆಲ್ನಲ್ಲಿ ಹಿಂದುಗಳಿಗೆ ಮಕ್ಕಳಾಗದಂತೆ ಊಟದಲ್ಲಿ ಮಾತ್ರೆ ಹಾಕಿ ನೀಡಲಾಗುತ್ತಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯೊಬ್ಬರು ಬಿರಿಯನಿ ಬಡಿಸುತ್ತಿರುವ ಫೋಟೋ, ಇನ್ನೊಂದೆಡೆ ಮಾತ್ರೆಗಳ ರಾಶಿ ಇರುವ ಫೋಟೋವನ್ನು ಪೋಸ್ಟ್ ಮಾಡಿ, ‘ಮುಸ್ಲಿಮರು ಮತ್ತು ಹಿಂದುಗಳಿಗೆ ಇಲ್ಲಿ ಪ್ರತ್ಯೇಕವಾಗಿ ಬಿರಿಯಾನಿ ತಯಾರಿಸಲಾಗುತ್ತದೆ. ಹಿಂದುಗಳಿಗೆ ನೀಡುವ ಬಿರಿಯಾನಿಗೆ ಶಕ್ತಿಹೀನರನ್ನಾಗಿಸುವ ಟ್ಯಾಬ್ಲೆಟ್ ಬೆರೆಸಲಾಗುತ್ತಿದೆ.
ಕೊಯಿಮತ್ತೂರಿನ ಮಾಷಾ ಅಲ್ಲಾ ಆಫ್ ರೆಹ್ಮಾನ್ ಬಿಸ್ಮಿಲ್ಲಾ ಎಂಬುವವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಿಮ್ಮ ಊರಿನಲ್ಲೂ ಹೀಗೆ ಮಾಡುವ ಸಾಧ್ಯತೆ ಇದೆ ಎಚ್ಚರದಿಂದಿರಿ’ ಎಂದು ಆರ್‌ಡಿ ಸಿಂಗ್ ಎನ್ನುವ ಟ್ವೀಟರ್ ಖಾತೆಯಲ್ಲಿ ಮೊದಲಿಗೆ ಇದನ್ನು ಪೋಸ್ಟ್ ಮಾಡಲಾಗಿತ್ತು. ಅದೀಗ ಫೇಸ್ಬುಕ್, ವಾಟ್ಸ್ಆ್ಯಪ್ನಲ್ಲೂ ವೈರಲ್ ಆಗಿದೆ.
Fact Check: 3 ಮಕ್ಕಳನ್ನು ಅವುಚಿ ಕೂತ ಮಹಿಳೆ ಚಿತ್ರ ದೆಹಲಿಯದ್ದಾ?
ಆದರೆ ಬೂಮ್‌ಲೈವ್ ಸುದ್ದಿಸಂಸ್ಥೆ ಈ ಸುದ್ದಿಯ ಸತ್ಯಾಸತ್ಯಾ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಬಿರಿಯಾನಿ ಬಡಿಸುತ್ತಿರುವ ವ್ಯಕ್ತಿಯ ಚಿತ್ರವು ಯುಟ್ಯೂಬ್ನಲ್ಲಿ ಜೂನ್ 30, 2016ರಲ್ಲಿ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ‘ಮುಸ್ಲಿಮರ ಹಬ್ಬಕ್ಕಾಗಿ ದಮ್ ಬಿರಿಯಾನಿ ರೆಡಿಯಾಗುತ್ತಿದೆ’ ಎಂದು ಒಕ್ಕಣೆ ಬರೆಯಲಾಗಿದೆ.
ಇನ್ನು ಮಾತ್ರೆಗಳಿರುವ ಫೋಟೋವು ಡೈಲಿ ಮಿರರ್ ಶ್ರೀಲಂಕಾ ವೆಬ್ಸೈಟ್ನಲ್ಲಿ ಲೇಖನವೊಂದರಲ್ಲಿ ಪ್ರಕಟವಾಗಿದ್ದು ಕಂಡುಬಂದಿದೆ. ಅದರಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದ ತಂದೆ, ಮಗನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲದೆ, ಕೊಯಿಮತ್ತೂರು ಸಿಟಿ ಪೊಲೀಸ್ ಕೂಡ ವೈರಲ್ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ಫೋಟೋವನ್ನು ಎಡಿಟ್ ಮಾಡಿ ಹೀಗೆ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂಬುದು ಸ್ಪಷ್ಟ.
-ವೈರಲ್ ಚೆಕ್