Asianet Suvarna News Asianet Suvarna News

Fact Check: ಎನ್‌ಪಿಆರ್‌ ಮಾಹಿ​ತಿ ಕೊಡ​ದಿದ್ರೆ ಬ್ಯಾಂಕ್‌ ಅಕೌಂಟ್‌ ಬ್ಲಾಕ್?

ಮಾರ್ಚ್ 31 ರ ಒಳ​ಗಾಗಿ ಬ್ಯಾಂಕು​ಗ​ಳಿಗೆ ನಿಮ್ಮ ಎನ್‌​ಪಿ​ಆರ್‌ (ರಾ​ಷ್ಟ್ರೀಯ ಜನ​ಸಂಖ್ಯಾ ನೋಂದ​ಣಿ​) ಮಾಹಿ​ತಿ​ಯನ್ನು ನೀಡ​ದಿ​ದ್ದರೆ ಬ್ಯಾಂಕು​ಗಳು ನಿಮ್ಮ ಖಾತೆ​ಯನ್ನು ಬ್ಲಾಕ್‌ ಮಾಡು​ತ್ತವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿ​ದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of bank account will block if not provide NPR details before march 31
Author
Bengaluru, First Published Mar 13, 2020, 12:12 PM IST

ಮಾರ್ಚ್ 31 ರ ಒಳ​ಗಾಗಿ ಬ್ಯಾಂಕು​ಗ​ಳಿಗೆ ನಿಮ್ಮ ಎನ್‌​ಪಿ​ಆರ್‌ (ರಾ​ಷ್ಟ್ರೀಯ ಜನ​ಸಂಖ್ಯಾ ನೋಂದ​ಣಿ​) ಮಾಹಿ​ತಿ​ಯನ್ನು ನೀಡ​ದಿ​ದ್ದರೆ ಬ್ಯಾಂಕು​ಗಳು ನಿಮ್ಮ ಖಾತೆ​ಯನ್ನು ಬ್ಲಾಕ್‌ ಮಾಡು​ತ್ತವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿ​ದೆ.

ಹಿಂದಿ​ಯ​ಲ್ಲಿ​ರುವ ಈ ಪ್ರಕ​ಟ​ಣೆ​ಯಲ್ಲಿ, ‘ ಪ್ರಮುಖ ಪ್ರಕ​ಟ​ಣೆ: ಮಾರ್ಚ್‌ 31ರ ಒಳ​ಗಾಗಿ ನಿಮ್ಮ ಬ್ಯಾಂಕ್‌ ಖಾತೆ​ಯ​ಲ್ಲಿ​ರುವ ಎಲ್ಲಾ ಹಣ ವಾಪಸ್‌ ತೆಗೆ​ದು​ಕೊಳ್ಳಿ. ಏಕೆಂದರೆ ಏಪ್ರಿಲ್‌ 1 ರ ಒಳ​ಗಾಗಿ ಬ್ಯಾಂಕು​ಗ​ಳಿಗೆ ನಿಮ್ಮ ಎನ್‌​ಪಿ​ಆರ್‌ ದಾಖಲೆ ನೀಡು​ವುದು ಕಡ್ಡಾಯ. ಇಲ್ಲ​ದಿ​ದ್ದರೆ ನಿಮ್ಮ ಖಾತೆ​ಯನ್ನು ಬ್ಲಾಕ್‌ ಮಾಡ​ಲಾ​ಗು​ತ್ತದೆ. ಈ ಮಾಹಿತಿ​ಯನ್ನು ಸಾಧ್ಯ​ವಾ​ದಷ್ಟುಶೇರ್‌ ಮಾಡಿ’ ಎಂದು ಹೇಳ​ಲಾ​ಗಿ​ದೆ. ನೆಟ್ಟಿ​ಗರು ಸಾವಿ​ರಾರು ಸಂಖ್ಯೆ​ಯಲ್ಲಿ ಇದನ್ನು ಶೇರ್‌ ಮಾಡಿ​ದ್ದಾ​ರೆ.

#FactCheck: ಜ್ಯೋತಿರಾಜ್ ಏಂಜೆಲ್ ಫಾಲ್ಸ್ ಹತ್ತಿದ್ದು ಹೌದಾ?

ಆದರೆ ನಿಜಕ್ಕೂ ಬ್ಯಾಂಕು​ಗಳು ಎನ್‌​ಪಿ​ಆರ್‌ ದಾಖಲೆ ಕಡ್ಡಾಯ ಎಂದು ಕೇಳಿ​ವೆಯೇ ಎಂದು ಬೂಮ್‌ ಲೈವ್‌ ಪರಿ​ಶೀ​ಲಿ​ಸಿ​ದಾಗ ಇದೊಂದು ಸುಳ್ಳು​ಸುದ್ದಿ ಎಂಬುದು ಖಚಿ​ತ​ವಾ​ಗಿದೆ. ಆರ್‌​ಬಿಐ ವಕ್ತಾ​ರ​ರೊಬ್ಬರು ಈ ಬಗ್ಗೆ ಸ್ಪಷ್ಟೀ​ಕ​ರಣ ನೀಡಿ, ‘ವೈ​ರಲ್‌ ಸಂದೇಶ ಸುಳ್ಳು. ಆರ್‌​ಬಿಐ ಏಪ್ರಿಲ್‌ 1ರ ಒಳ​ಗಾಗಿ ಎನ್‌​ಪಿ​ಆರ್‌ ದಾಖಲೆ ಕಡ್ಡಾ​ಯ​ವಾಗಿ ಒದ​ಗಿ​ಸ​ಬೇಕು ಎಂದು ಎಲ್ಲೂ ಹೇಳಿಲ್ಲ. ಜನರು ಇಂಥ ವದಂತಿ​ಗ​ಳಿಗೆ ಕಿವಿ​ಗೊ​ಡ​ಬಾರದು ’ ಎಂದಿ​ದ್ದಾ​ರೆ.

Fact Check: ದೆಹಲಿ ಸಿಎಂ ಕೇಜ್ರಿ​ವಾ​ಲ್‌ಗೆ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ!

ಹಾಗೆಯೇ ಈ ಬಗ್ಗೆ ಯಾವುದೇ ಮುಖ್ಯ​ವಾ​ಹಿನಿ ಮಾಧ್ಯ​ಮ​ಗಳೂ ವರದಿ ಮಾಡಿಲ್ಲ. ಅಲ್ಲದೆ ಬೂಮ್‌ ಮೂರು ಬ್ಯಾಂಕು​ಗ​ಳನ್ನು ಸಂಪ​ರ್ಕಿಸಿ, ಎನ್‌​ಪಿ​ಆರ್‌ ದಾಖಲೆ ಕಡ್ಡಾ​ಯವೇ ಎಂದು ಕೇಳಿ​ದಾಗ ಯಾವುದೇ ಬ್ಯಾಂಕು ಈ ಬಗ್ಗೆ ಸ್ಪಷ್ಟ​ವಾಗಿ ಉತ್ತ​ರಿ​ಸಿಲ್ಲ. ಆರ್‌​ಬಿಐ ಮಾರ್ಗ​ಸೂಚಿ ಪ್ರಕಾರ ವೋಟರ್‌ ಐಡಿ, ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌​ನಂತಯೇ ಎನ್‌​ಪಿ​ಆರ್‌ ಕೂಡ ಒಂದು ದಾಖಲೆ ಎಂದು ಹೇಳಿ​ವೆ.

- ವೈರಲ್ ಚೆಕ್ 

Follow Us:
Download App:
  • android
  • ios