Fact Check: ಸಾಲ ಮಾಡಿ ತೆಗೆದುಕೊಂಡಿದ್ದ ರಿಕ್ಷಾ ಅಧಿಕಾರಿಗಳ ವಶ, ಬಡವರಿಗಿದು ಕಾಲವಲ್ಲ!
ರಿಕ್ಷಾವನ್ನು ಅಧಿಕಾರಿಗಳು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದರೆ, ಇತ್ತ ಬಡ ರಿಕ್ಷಾ ಚಾಲಕ ಸಾಲ ಮಾಡಿ ತೆಗೆದುಕೊಂಡಿದ್ದ ರಿಕ್ಷಾ ಕಣ್ಣೆದುರೇ ಇಲ್ಲವಾಯಿತಲ್ಲ ಎಂದು ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅರೇ, ಏನಪ್ಪಾ ಇದು ಬಡವರ ಕಥೆ?
ರಿಕ್ಷಾವನ್ನು ಅಧಿಕಾರಿಗಳು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದರೆ, ಇತ್ತ ಬಡ ರಿಕ್ಷಾ ಚಾಲಕ ಸಾಲ ಮಾಡಿ ತೆಗೆದುಕೊಂಡಿದ್ದ ರಿಕ್ಷಾ ಕಣ್ಣೆದುರೇ ಇಲ್ಲವಾಯಿತಲ್ಲ ಎಂದು ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮನಕಲಕುವ ದೃಶ್ಯ ಭಾರತದ್ದು ಎಂದೂ ಹೇಳಲಾಗುತ್ತಿದೆ.
ನೆಟ್ಟಿಗರು ಈ ಫೋಟೋವನ್ನು ಹಂಚಿಕೊಂಡು, ‘ದೇಶದ ಕಾನೂನು ಬಡವರಿಗೆ ಮಾತ್ರ. ಇದು ಭಾರತದ ಸ್ಥಿತಿ’ ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪುರಸಭೆಯ ಸಿಬ್ಬಂದಿ ಸೈಕಲ್ ರಿಕ್ಷಾವನ್ನು ವಾಹನವೊಂದರಲ್ಲಿ ತುಂಬಿಕೊಂಡು ಹೋಗುತ್ತಿದ್ದರೆ, ರಿಕ್ಷಾ ಮಾಲಿಕ ವಾಹನವನ್ನು ವಶಕ್ಕೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕಣ್ಣೀರಿಡುತ್ತಾ ತನ್ನ ನೋವನ್ನು ಮಾಧ್ಯಮಗಳೆದುರು ಹಂಚಿಕೊಂಡ ದೃಶ್ಯವಿದೆ.
Fact Check: ಕೊರೊನಾಗೆ ಬೇರೆ ಔಷಧಿಯೇ ಇಲ್ಲ, ಬಿಸಿ ಹಬೆಯೇ ಚೀನಾದಲ್ಲಿ ಕೋವಿಡ್ ಮದ್ದು?
ಆದರೆ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಈ ವಿಡಿಯೋ ಭಾರತದ್ದಲ್ಲ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ದೃಶ್ಯ ಎಂದು ತಿಳಿದುಬಂದಿದೆ. ಕೊರೋನಾ ಸೋಂಕಿನಿಂದ ಕೆಲಸ ಕಳೆದುಕೊಂಡಿದ್ದ ಫಜ್ಲುರ್ ಎಂಬಾತ 80,000 ರು. ಸಾಲ ಪಡೆದು ಬ್ಯಾಟರಿ ಚಾಲಿತ ರಿಕ್ಷಾ ಖರೀದಿಸಿದ್ದ. ಆದರೆ ಅದೇ ವೇಳೆಗೆ ಢಾಕಾ ನಗರಾಡಳಿತ ಬ್ಯಾಟರಿ ಚಾಲಿತ ವಾಹನಗಳನ್ನು ನಿಷೇಧಿಸಿತ್ತು. ಆದರೂ ಬ್ಯಾಟರಿ ಚಾಲಿತ ವಾಹನ ಓಡಿಸುತ್ತಿದ್ದ ಫಜ್ಲುರ್‌ನ ವಾಹನವನ್ನು ನಗರಾಡಳಿತ ವಶಕ್ಕೆ ಪಡೆದಿತ್ತು. ಆಗ ಆತ ಕಣ್ಣೀರಿಟ್ಟಿದ್ದ. ರಿಕ್ಷಾ ಚಾಲಕನ ಕರುಣಾಜನಕ ಪರಿಸ್ಥಿತಿಯನ್ನು ಕಂಡು ಶ್ವಪ್ನೋ ಎಂಬ ರೀಟೆಲ್ ಸಂಸ್ಥೆ ನೆರವಿಗೆ ಧಾವಿಸಿ 2 ರಿಕ್ಷಾಗಳನ್ನು ಉಡುಗೊರೆಯಾಗಿ ನೀಡಿತ್ತು.
- ವೈರಲ್ ಚೆಕ್