ಕಛ್(ಅ. 14) )  ಗುಜರಾತ್ ನ  ಗಾಂಧಿಧಾಮದಲ್ಲಿರು ತನಿಷ್ಕ ಆಭರಣ ಮಳಿಗೆ ಮೇಲೆ  ದುಷ್ಕರ್ಮಿಗಳು ದಾಳಿ ಮಾಡಿದ್ದರು ಎಂದು ಎನ್ ಡಿಟಿವಿ ವರದಿ ಮಾಡಿತ್ತು. ಜಾಹೀರಾತಿನ ಸಂಬಂಧ ಈ ದಾಳಿಯಾಗಿತ್ತು ಎಂದು ಹೇಳಲಾಗಿತ್ತು.

ಆದರೆ ಈ ವರದಿ ಪ್ರಸಾರವಾಗಿ ಗಂಟೆಗಳಲ್ಲೇ ಮತ್ತೊಂದು ಸತ್ಯ ಬಹಿರಂಗವಾಗಿದೆ.  ಎನ್ ಡಿಟಿವಿ  ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ನೆಟ್ಟಿಗರು ಸಾಕ್ಷಿ ಸಮಮೇತ ಬಹಿರಂಗ ಮಾಡಿದ್ದಾರೆ.

ಅಷ್ಟಕ್ಕೂ ತನಿಷ್ಕ ಜಾಹೀರಾತಿನಲ್ಲಿ ಅಂಥದ್ದೇನಿತ್ತು?

ಆಭರಣ ಅಂಗಡಿಯ ಮ್ಯಾನೇಜರ್ ಮತ್ತು ಪೊಲೀಸರು ಸಹ ತಪ್ಪು ವರದಿ ಪ್ರಸಾರವಾಗಿದ್ದನ್ನು ಸ್ಪಷ್ಟಪಡಿಸಿದ್ದಾರೆ.  ಈ ಬಗ್ಗೆ ಹೇಳಿಕೆ ನೀಡಿರುವ ಅಂಗಡಿಯ ಮ್ಯಾನೇಜರ್ ರಾಹುಲ್ ಮಂಜ್ವಾ, ಅಂಗಡಿಯ ಮೇಲೆ ಯಾವುದೆ ದಾಳಿಯಾಗಿಲ್ಲ, ಕೆಲ ಬೆದರಿಕೆ ಕರೆಗಳು ಬಂದಿದ್ದು, ಈ ವಿಚಾರವನ್ನು ಪೊಲೀಸರಿಗೆ ತಿಳಸಿದ್ದೇನೆ ಎಂದಿದ್ದಾರೆ.

ಅಕ್ಟೋಬರ್ 12  ರಂದು ಮಳಿಒಗೆಗೆ ಬಂದ ಇಬ್ಬರು ಮಾಲೀಕರ ಬಳಿ ಕ್ಷಮೆಯಾಚನೆ ಪತ್ರ ಪರೆದುಕೊಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಮಾಲೀಕರು ಮಾಡಿದ್ದಾರೆ. ಆದರೆ ಇದಾದ ಮೇಲೆ ಕಛ್ ಪ್ರದೇಶದಿಂದ ಬೆದರಿಕೆ ಕರೆಗಳು ಬರತೊಡಗಿವೆ ಎಂದು ಕಛ್ ಎಸ್‌ಪಿ ಮಯೂರ್ ಪಟೇಲ್ ತಿಳಿಸಿದ್ದಾರೆ.

ಇಂಗ್ಲಿಷ್ ನಲ್ಲಿಯೂ ಓದಿ