ಅಭರಣ ಕಂಪನಿ ತನಿಷ್ಕ್ ಜ್ಯುವೆಲ್ಲರಿ ಅದರ ಏಕತ್ವಂ ಜಾಹೀರಾತನ್ನು ಹಿಂಪಡೆದಿದೆ. ಹಿಂದೂ ಮತ್ತು ಮುಸ್ಲಿಂ ಕುಟುಂಬದ ಕುರಿತ ಜಾಹೀರಾತಿಗೆ ಮೆಚ್ಚುಗೆಗಿಂತ ಹೆಚ್ಚು ವಿರೋಧ ವ್ಯಕ್ತವಾಗಿತ್ತು. ಇದೀಗ ನಟಿ ಕಂಗನಾ ರಣಾವತ್ ಕೂಡಾ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

45 ಸೆಕುಂಡಿನ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬ ಹಿಂದೂ ಸೊಸೆಗೆ ಸಂಪ್ರದಾಯಿಕ ದಕ್ಷಿಣ ಭಾರತ ಶೈಲಿಯಲ್ಲಿ ಸೀಮಂತ ಮಾಡುವುದನ್ನು ತೋರಿಸಲಾಗಿತ್ತು. ಜಾಹೀರಾತು ವೈರಲ್ ಆಗುವುದರ ಜೊತೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಈ ಜಾಹೀರಾತು ವಿವಿಧ ಹಂತದಲ್ಲಿ ತಪ್ಪಾಗಿ ತೋರಿಸಲಾಗಿದೆ. ಬಹಳಷ್ಟು ಸಮಯ ಮುಸ್ಲಿಂ ಕುಟುಂಬದ ಜೊತೆ ಇದ್ದ ಹಿಂದೂ ಹುಡುಗಿಗೆ ಅಂಗೀಕಾರ ಸಿಗುವುದು ಆಕೆ ಗರ್ಭಿಣಿಯಾದಾಗ. ಇದು ಲವ್ ಜಿಹಾದ್ ಮತ್ತು ಲಿಂಗ ತಾರತಮ್ಯವನ್ನೂ ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ ನಟಿ.

ನಟಿ ಕಂಗನಾಗೆ ಟಾಂಗ್ ಕೊಟ್ಟ ಬಾಲಿವುಡ್ ನಿರ್ದೇಶಕಿ ಮಿನಿ ಮಾತುರ್, ನಾನು ಬೇರೆ ಧರ್ಮದ ವಿವಾಹವನ್ನು ಅನುಭವಿಸಿದ್ದೇನೆ. ಕೆಲವರು ಲವ್ ಜಿಹಾದ್‌ನಂತಹ ಪದ ಬಳಸಿದ್ದರಿಂತ ಒಳ್ಳೆಯ ಜಾಹೀರಾತು ಹಿಂತೆಗೆಯಲಾಯಿತು ಎಂದಿದ್ದಾರೆ.