Fact Check: ಜಿಯೋದಿಂದ 349 ರು. ಫ್ರೀ ರೀಚಾರ್ಜ್..?
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ 6ನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಈ ಸಂತೋಷವನ್ನು ಹಂಚಿಕೊಳ್ಳಲು ಪ್ರತಿ ಜಿಯೋ ಗ್ರಾಹಕರಿಗೂ 349 ರುಪಾಯಿಯ ಉಚಿತ ರೀಚಾಜ್‌ರ್ ಮಾಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ 6ನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಈ ಸಂತೋಷವನ್ನು ಹಂಚಿಕೊಳ್ಳಲು ಪ್ರತಿ ಜಿಯೋ ಗ್ರಾಹಕರಿಗೂ 349 ರುಪಾಯಿಯ ಉಚಿತ ರೀಚಾಜ್‌ರ್ ಮಾಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Fact Check: ಕೊರೊನಾ ನಿರ್ವಹಣೆಗಾಗಿ ಕೇಂದ್ರದಿಂದ ಪಾಲಿಕೆಗೆ 1.5 ಲಕ್ಷ!
99000 ಜಿಯೋ ಗ್ರಾಹಕರಿಗೆ ಈ ಉಡುಗೊರೆ ನೀಡಲಾಗುತ್ತಿದೆ. ನಿಮ್ಮ ಮೊಬೈಲ್‌ಗೂ ಉಚಿತ ರೀಚಾರ್ಜ್ ಮಾಡಬೇಕೆಂದಿದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂದು ವೆಬ್‌ಸೈಟ್ ಲಿಂಕ್‌ವೊಂದನ್ನು ನೀಡಲಾಗಿದೆ. ಜೊತೆಗೆ ಈ ಆಫರ್ ಯಾವುದೇ ಕ್ಷಣದಲ್ಲಿ ಕೊನೆಗೊಳ್ಳಬಹುದು ಎಂಬ ವಿಶೇಷ ಸೂಚನೆಯನ್ನೂ ನೀಡಲಾಗಿದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಜಿಯೋ ಹೆಸರಿನ ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಕೆಲವು ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ 10 ಜನರುಗೆ ಈ ಸಂದೇಶವನ್ನು ಫಾರ್ವರ್ಡ್ ಮಾಡುವುದು ಕಡ್ಡಾಯ ಎಂಬ ಸೂಚನೆ ಕಾಣಿಸುತ್ತದೆ.
ಆದರೆ ನಿಜಕ್ಕೂ ಜಿಯೋ ಈ ಆಫರ್ ನೀಡಿದೆಯೇ ಎಂದು ಬೂಮ್‌ಲೈವ್ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೋ ವಕ್ತಾರರೊಬ್ಬರು ಜಿಯೋ ಕಂಪನಿಗಳಿಗೂ ಆ ವೆಬ್‌ಸೈಟ್‌ಗಳಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೂ ಜಿಯೋ ಹೆಸರಿನಲ್ಲಿ ಇಂಥದ್ದೇ ಸುಳ್ಳುಸುದ್ದಿಗಳು ಹರಿದಾಡಿದ್ದವು.
- ವೈರಲ್ ಚೆಕ್