Fact Check: ಕೊರೋನಾ ನಿರ್ವಹಣೆಗಾಗಿ ಕೇಂದ್ರದಿಂದ ಪಾಲಿಕೆಗೆ 1.5 ಲಕ್ಷ!
ಪ್ರತೀ ಕೊರೋನಾ ಪ್ರಕರಣಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಪುರಸಭೆಗೆ 1.5 ಲಕ್ಷ ಹಣ ನೀಡುತ್ತಿದೆ. ಇದರ ಲಾಭ ಪಡೆಯುತ್ತಿರುವ ಪುರಸಭೆ ಮತ್ತು ಖಾಸಗಿ ಆಸ್ಪತ್ರೆಗಳು ಕೊರೋನಾ ಪರೀಕ್ಷೆ ಮಾಡಿಸಿದ ಪ್ರತಿಯೊಬ್ಬರೂ ಕೊರೋನಾ ಸೋಂಕಿತರು ಎಂದು ಹೇಳುವ ಮೂಲಕ ಹೆಚ್ಚೆಚ್ಚು ಕೊರೋನಾ ಪ್ರಕರಣಗಳ ಲೆಕ್ಕ ಹೇಳುತ್ತಿವೆ. ಸಾಮಾನ್ಯ ಜ್ವರ, ನೆಗಡಿ ಇರುವ ರೋಗಿಗಳಿಗೂ ಕೊರೋನಾ ದೃಢಪಟ್ಟಿದೆ ಎಂದು ಹೇಳುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ಬೆಂಗಳೂರು (ಜು. 25): ಪ್ರತೀ ಕೊರೋನಾ ಪ್ರಕರಣಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಪುರಸಭೆಗೆ 1.5 ಲಕ್ಷ ಹಣ ನೀಡುತ್ತಿದೆ. ಇದರ ಲಾಭ ಪಡೆಯುತ್ತಿರುವ ಪುರಸಭೆ ಮತ್ತು ಖಾಸಗಿ ಆಸ್ಪತ್ರೆಗಳು ಕೊರೋನಾ ಪರೀಕ್ಷೆ ಮಾಡಿಸಿದ ಪ್ರತಿಯೊಬ್ಬರೂ ಕೊರೋನಾ ಸೋಂಕಿತರು ಎಂದು ಹೇಳುವ ಮೂಲಕ ಹೆಚ್ಚೆಚ್ಚು ಕೊರೋನಾ ಪ್ರಕರಣಗಳ ಲೆಕ್ಕ ಹೇಳುತ್ತಿವೆ.
Fact Check: ಭಾರತದಲ್ಲಿ ಕೆಸರು ಗದ್ದೆಯೇ ಶಾಲೆ!
ಸಾಮಾನ್ಯ ಜ್ವರ, ನೆಗಡಿ ಇರುವ ರೋಗಿಗಳಿಗೂ ಕೊರೋನಾ ದೃಢಪಟ್ಟಿದೆ ಎಂದು ಹೇಳುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂದೇಶವೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಪುರಸಭೆಗಳಿಗೆ ಕೊರೋನಾ ನಿರ್ವಹಣೆಗೆ ಪ್ರತೀ ಪ್ರಕರಣಕ್ಕೆ 1.5 ಲಕ್ಷ ನೀಡುವುದಾಗಿ ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು ಕೇಂದ್ರ ಸರ್ಕಾರ ಇಂಥ ಯೋಜನೆ ಘೋಷಿಸಿಲ್ಲ ಎಂಬುದು ಖಚಿತವಾಗಿದೆ.
ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿಲ್ಲ. ಒಬ್ಬ ವ್ಯಕ್ತಿ ಕೊರೋನಾ ಸೋಂಕಿತ ಎಂದು ಘೋಷಿಸಲು ಆತ/ಆಕೆಯ ಗಂಟಲು ಮಾದರಿಯನ್ನು ಪಡೆದು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ. ಅನಂತರವಷ್ಟೇ ಸೋಂಕು ದೃಢಪಟ್ಟಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ. ಹಾಗಾಗಿ ಪ್ರತೀ ಸೋಂಕಿತ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಪಾಲಿಕೆಗಳಿಗೆ 1.5 ಲಕ್ಷ ನೀಡುತ್ತಿದೆ ಎಂಬುದು ಸತ್ಯಕ್ಕೆ ಸಂಪೂರ್ಣ ವಿರುದ್ಧವಾದುದು.
- ವೈರಲ್ ಚೆಕ್