ಬೆಂಗಳೂರು(ಜೂ. 05)   ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಸುದ್ದಿಯೊಂದು ಹರಿದಾಡಿತು. ಇದು ಕಿರುತೆರಗೆ ಸಂಬಂಧಿಸಿದ ಕತೆ. #JusticeForChutki ಎಂಬ ಹ್ಯಾಷ್ ಟ್ಯಾಗ್ ಸಹ ಟ್ರೆಂಡ್ ಆಯಿತು.   

ಮಕ್ಕಳ ಮನಗೆದ್ದಿರುವ ಅನಿಮೇಟೇಡ್ ಟಿವಿ ಶೋದ ನಾಯಕ ಛೋಟಾ ಭೀಮ್ ರಾಜಕುಮಾರಿ ಇಂದುಮತಿ ಜತೆ ಮದುವೆಯಾಗಿದ್ದಾರೆ.  ಇದರಿಂದ ಛೋಟಾ ಭೀಮ್ ಬೆಸ್ಟ್ ಫ್ರೆಂಡ್ ಚುಟ್ಕಿಗೆ ಅನ್ಯಾಯವಾಗಿದೆ ಎಂಬುದು ನೆಟ್ಟಿಗರ ಆರೋಪವಾಗಿತ್ತು.

#JusticeForChutki ಹ್ಯಾಷ್ ಟ್ಯಾಗ್ ಗೆ ಪ್ರತಿಕ್ರಿಯೆ ನೀಡಿರುವ ಛೋಟಾ ಭೀಮ್ ನಿರ್ಮಾಪಕರು ಈ ಸುದ್ದಿ ಸತ್ಯಕ್ಕೆ ಸಂಪೂರ್ಣ ದೂರವಾಗಿದೆ ಎಂದು ತಿಳಿಸಿದ್ದಾರೆ.

Fack Check: ಕೊರೋನಾ ಮೂಲ ಚೀನಾ ಲ್ಯಾಬ್

ಛೋಟಾ ಭೀಮ್ ಆಫೀಶಿಯಲ್ ಪೇಜ್ ನಲ್ಲಿ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಜವಾಬ್ದಾರಿ ಹೊತ್ತಿರುವ ಗ್ರೀನ್ ಗೋಲ್ಡ್ ಅನಿಮೇಶನ್, ಛೋಟಾ ಭೀಮ್ ನಲ್ಲಿ ಪಾತ್ರವಾಗಿರುವ ಛೋಟಾ ಭೀಮ್, ಚುಟ್ಕಿ ಮತ್ತು ಇಂದುಮತಿ ಮಕ್ಕಳು. ಪಾತ್ರಧಾರಿಗಳು ಮದುವೆಯಾಗಿದ್ದಾರೆ ಎಂಬ ಸುದ್ದಿಗೆ ಯಾವುದೇ ಆಧಾರ ಇಲ್ಲ. ಈ ಬಗ್ಗೆ ದಯವಿಟ್ಟು ಕಮೆಂಟ್ ಮಾಡುವುದದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದೆ.

ಅವರು ಮಕ್ಕಳಾಗಿಯೇ ಇರಲಿ ಎಂದು ಹೇಳಿರುವ ಸಂಸ್ಥೆ ನಿಮ್ಮ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದೆ.  ಇಷ್ಟೆಲ್ಲಾ ಆದರೂ ಕಮೆಂಟ್ ಮಾಡುವುದು ಮಾತ್ರ ನಿಂತಿಲ್ಲ.