ಕೊರೋನಾ ವೈರಸ್‌ ವಿಶ್ವದಾದ್ಯಂತ ರೌದ್ರನರ್ತನ ಮುಂದುವರೆಸಿದೆ. ಈ ವೈರಸ್ಸಿಗೆ ಬಲಿಯಾದವರ ಸಂಖ್ಯೆ 4 ಲಕ್ಷ ಗಡಿ ಸಮೀಪಿಸಿದೆ. ಆದರೆ ಮಾರಕ ಕೊರೋನಾ ವೈರಸ್‌ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಲಭ್ಯವಾಗಿಲ್ಲ. ಈ ನಡುವೆ ಜಪಾನಿನ ನೋಬೆಲ್‌ ಪ್ರಶಸ್ತಿ ಪುರಸ್ಕೃತ ಪ್ರೊ.ಡಾ.ತಸುಕು ಹೊಂಜೋ ಕೊರೋನಾ ವೈರಸ್‌ ನೈಸರ್ಗಿಕವಾಗಿ ಹುಟ್ಟಿದ್ದಲ್ಲ ಅಥವಾ ಬಾವಲಿಗಳಿಂದಲೂ ಹಬ್ಬಿದ್ದಲ್ಲ. ಕೊರೋನಾ ವೈರಸ್‌ ಹುಟ್ಟಿನ ಮೂಲ ಚೀನಾದ ಪ್ರಯೋಗಾಲಯ ಎಂದು ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಜೊತೆಗೆ ವೈರಸ್‌ ನೈಸರ್ಗಿಕವಾಗಿ ಹುಟ್ಟಿದ್ದರೆ ಅದು ವಿಶ್ವದಾದ್ಯಂತ ಹರಡುತ್ತಿರಲಿಲ್ಲ. ಏಕೆಂದರೆ ದೇಶದಿಂದ ದೇಶಕ್ಕೆ ಹವಾಮಾನ ಬದಲಾಗುತ್ತದೆ. ಒಂದು ವೇಳೆ ವೈರಸ್‌ ಹುಟ್ಟು ನೈಸರ್ಗಿಕವೇ ಆಗಿದ್ದರೆ ಚೀನಾದ ತಾಪಮಾನ ಹೋಲುವ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಕೊರೋನಾ ವೈರಸ್‌ ವಿಶ್ವದಾದಯಂತ ಹರಡುತ್ತಿದೆ. ನಾನು 40 ವರ್ಷ ಪ್ರಾಣಿಗಳು ಮತ್ತು ವೈರಸ್‌ಗಳ ಮೇಲೆ ಅಧ್ಯಯನ ನಡೆಸಿದ್ದು, ಅದರ ಆಧಾರದ ಮೇಲೆ ಕೊರೋನಾ ನೈಸರ್ಗಿಕ ವೈರಸ್‌ ಅಲ್ಲ ಎಂದು ಹೇಳಬಲ್ಲೆ ಎಂದಿದ್ದಾರೆ ಎಂದೂ ಹೇಳಲಾಗಿದೆ. ಸದ್ಯ ಈ ಸಂದೇಶ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

Fact Check: 50-60 ದಿನ ಸ್ಯಾನಿಟೈಸರ್‌ ಬಳಸಿದ್ರೆ ಕ್ಯಾನ್ಸರ್‌!

ಆದರೆ ಈ ಸುದ್ದಿ ನಿಜವೇ ಎಂದುಪರಿಶೀಲಿಸಿದಾಗ  ಹೊಂಜೋ ಅವರ ಹೆಸರಿನಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇವರ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಜಪಾನಿನ ಕ್ಯೋಟೋ ಯುನಿವರ್ಸಿಟಿ ವೈರಲ್‌ ಸುದ್ದಿ ಸುಳ್ಳು ಎಂದು ತನ್ನ ಅಧಿಕೃತ ವೆಬ್‌ಸೈನಲ್ಲಿ ಪ್ರಕಟಿಸಿದೆ.

- ವೈರಲ್ ಚೆಕ್