- ರೆಮ್‌ಡಿಸಿವಿರ್‌ ಕೊರತೆ, ಅದನ್ನೇ ಹೋಲುವ ಕೋವಿಪ್ರಿ ಇಂಜೆಕ್ಷನ್‌ ಮಾರುಕಟ್ಟೆಗೆ-  ಇದನ್ನು ಭಾರತದಲ್ಲೇ ನಿರ್ಮಿಸಲಾಗಿದ್ದು, ಅದರ ಬೆಲೆ 5400 ರೂ.?- ಇದು ಸುರಕ್ಷಿತವಾ.?

ಭಾರತದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಭಾರೀ ಆತಂಕಕಾರಿಯಾಗಿದೆ. ಹಾಸಿಗೆ, ವೆಂಟಿಲೇಟರ್‌, ಆಮ್ಲಜನಕ ಗಂಭೀರ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್‌ ಇಂಜೆಕ್ಷನ್‌ಗೆ ಹಾಹಾಕಾರ ಉಂಟಾಗಿದೆ. ಏತನ್ಮಧ್ಯೆ, ನಕಲಿ ಔಷಧಗಳ ದಂಧೆಯೂ ಆರಂಭವಾಗಿದೆ.

ಇದೇ ವೇಳೆ ‘ಕೋವಿಪ್ರಿ’ ಹೆಸರಿನಲ್ಲಿ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಮಾರುಕಟ್ಟೆಗೆ ಬಂದಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ರೆಮ್‌ಡಿಸಿವಿರ್‌ ಅಭಾವದ ವೇಳೆ ಅದನ್ನೇ ಹೋಲುವ ಕೋವಿಪ್ರಿ ಇಂಜೆಕ್ಷನ್‌ ಪರ್ಯಾಯ ಆಗಬಲ್ಲದು ಎಂದು ಹೇಳಲಾಗುತ್ತಿದೆ. ವೈರಲ್‌ ಪೋಸ್ಟ್‌ನಲ್ಲಿ ಇದು ಭಾರತದಲ್ಲೇ ನಿರ್ಮಿಸಲಾಗಿದ್ದು, ಅದರ ಬೆಲೆ 5400 ಎಂದು ಬರೆಯಲಾಗಿದೆ.

12 ವರ್ಷ ಮೇಲಿನ ಮಕ್ಕಳಿಗೆ ಕೋವ್ಯಾಕ್ಸಿನ್ ಪಡೆಯಲು ಅನುಮತಿ? ಇದು ನಿಜನಾ?

ಆದರೆ ನಿಜಕ್ಕೂ ಕೋವಿಪ್ರಿ ರೆಮ್‌ಡಿಸಿವಿರ್‌ಗೆ ಪರ್ಯಾಯವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಇದು ನಕಲಿ ಔಷಧ ಎಂದು ಸರ್ಕಾರವೇ ಖಚಿತಪಡಿಸಿದೆ. ಹಾಗೆಯೇ ಅನಧಿಕೃತ ಮೂಲಗಳಿಂದ ಔಷಧ ಖರೀದಿಸದಂತೆ ಕೇಂದ್ರ ಸರ್ಕಾರ ನೋಡಲ್‌ ಸಂಸ್ಥೆಯಾಗಿರುವ ಪಿಐಬಿ ಸ್ಪಷ್ಟನೆ ನೀಡಿದೆ. ಹಾಗಾಗಿ ಈ ವೈರಲ್‌ ಸುದ್ದಿ ಸುಳ್ಳು ಎಂಬುದು ದೃಢವಾಗಿದೆ.

- ವೈರಲ್ ಚೆಕ್