ಕೆಜಿಎಫ್ ರಿಲೀಸ್‌ಗೆ ಶುರುವಾಗಿದೆ ದಿನಗಣನೆ | ಕೆಜಿಎಫ್ ಹಿಂದಿದೆಈ ವಿಡಿಯೋ | ಯಶ್ ಹೇಳಿದ್ದೇನು? ಇಲ್ಲಿದೆ ನೋಡಿ
ಬೆಂಗಳೂರು (ಡಿ. 17): ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಡಿಸಂಬರ್ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಟಿಕೆಟ್ ಗಾಗಿ ಭಾರೀ ಬೇಡಿಕೆ ಶುರುವಾಗಿದೆ.
ಕೆಜಿಎಫ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ
ಕನ್ನಡ ಸಿನಿಮಾವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಚಿತ್ರ ಯಶಸ್ಸಿಗಾಗಿ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ ಯಶ್. ಚಿತ್ರ ಯಶಸ್ಸಿಗಾಗಿ ಕೊಲ್ಲೂರು, ಧರ್ಮಸ್ಥಳ, ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೆಜಿಎಫ್ ಯಶಸ್ಸಿಗಾಗಿ ಯಶ್ ಟೆಂಪಲ್ ರನ್!
ಕೆಜಿಎಫ್ ಚಿತ್ರದ ಮೇಕಿಂಗ್ ವಿಡಿಯೋವನ್ನು ಯಶ್ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ಹಿಂದಿದೆ ಇಷ್ಟೆಲ್ಲಾ ಶ್ರಮ. ಸತತ ಎರಡು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಎಲ್ಲರೂ ಶ್ರಮಿಸಿದ್ದಾರೆ. ಕೆಜಿಎಫ್ ಹಿಂದಿದೆ ಇಷ್ಟೆಲ್ಲಾ ಶ್ರಮ.

