Asianet Suvarna News Asianet Suvarna News

ಕೆಜಿಎಫ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಬಿಡುಗಡೆಗೆ ಇನ್ನೇನು ನಾಲ್ಕೇ ದಿನ ಬಾಕಿಯಿದೆ. ಆಗಲೇ ಚಿತ್ರದ ಪ್ರದರ್ಶನಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಾರೀ ಬೇಡಿಕೆ ಸೃಷ್ಟಿಯಾಗಿದೆ.

 

Advance ticket booking for KGF film begins
Author
Bengaluru, First Published Dec 17, 2018, 9:58 AM IST

ಅದ್ಧೂರಿ ವೆಚ್ಚದ ಸಿನಿಮಾ ಎನ್ನುವುದರ ಜತೆಗೆ ಮಲ್ಟಿಸ್ಟಾರ್ಸ್ ಸಿನಿಮಾ= ಅಂತಲೇ ಕುತೂಹಲ ಹುಟ್ಟಿಸಿರುವ ಕೆಜಿಎಫ್ ಡಿಸೆಂಬರ್ 21ಕ್ಕೆ ತೆರೆ ಕಾಣುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ.

ಕನ್ನಡದ ಸಿನಿಮಾವೊಂದು ಇದೇ ಮೊದಲು ಆಯಾ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಎನ್ನುವ ಖ್ಯಾತಿಯೂ ಈ ಚಿತ್ರಕ್ಕಿದೆ. ಅದೇ ಅಬ್ಬರದೊಂದಿಗೆ ತೆರೆಗೆ ಬರುತ್ತಿರುವ ‘ಕೆಜಿಎಫ್’ಗೆ ಬೆಂಗಳೂರಿನಲ್ಲಿ ಭಾನುವಾರ ( ಡಿಸೆಂಬರ್ 21) ಬೆಳಗ್ಗೆಯಿಂದಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

ಗೋಪಾಲನ್ ಮಾಲ್, ಎಸ್.ಪಿ. ರಸ್ತೆಯ ಶಾರದಾ, ಮಾಗಡಿ ರಸ್ತೆಯ ವೀರೇಶ್, ಕಾಮಾಕ್ಷಿಪಾಳ್ಯ ವಿಶಾಲ್, ಗಿರಿನಗರದ ವೆಂಕಟೇಶ್ವರ, ವಿದ್ಯಾಪೀಠ ಸರ್ಕಲ್ ಚಂದ್ರೋದಯ, ಸುಂಕದಕಟ್ಟೆ ಮೋಹನ್, ಬನಶಂಕರಿ ಮಹದೇಶ್ವರ, ರಾಜಾಜಿನಗರ ನವರಂಗ್, ಕಮಲಾನಗರ ವೀರಭದ್ರೇಶ್ವರ, ಸಂಜಯ್ ನಗರ ವೈಭವ್, ಅಗರ ತಿರುಮಲ, ಮಾರತ್ತಹಳ್ಳಿ ತುಳಸಿ ಹಾಗೂ ವರ್ತೂರು ಶ್ರೀವಿನಾಯಕ ಚಿತ್ರ ಮಂದಿರಗಳಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿತ್ತು.

ಮಧ್ಯಾಹ್ನದ ಹೊತ್ತಿಗೆ ’ಕೆಜಿಎಫ್’ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಶೇಕಡಾ 80ರಷ್ಟು ಬುಕ್ಕಿಂಗ್ ನಡೆದಿತ್ತು. ದಾಖಲೆ ಎನ್ನುವ ಹಾಗೆ ಸಂಜೆ ಆರು ಗಂಟೆಯ ಹೊತ್ತಿಗೆ ಎಲ್ಲಾ ಚಿತ್ರ ಮಂದಿರಗಳಲ್ಲೂ ನೂರರಷು ಬುಕ್ಕಿಂಗ್ ಆಗಿತ್ತು. ಅಷ್ಟೇ ಅಲ್ಲ, ಮೊದಲ ದಿನದ ಮ್ಯಾಟ್ನಿ ಹಾಗೂ ಸಂಜೆ 4-30 ರ ಪ್ರದರ್ಶನಕ್ಕೆ ಟಿಕೆಟ್ ಬುಕ್ಕಿಂಗ್ ಮುಗಿದು ಹೋಗಿತ್ತು. 

 

Follow Us:
Download App:
  • android
  • ios