ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಅಂದರೆ 1961ರವರೆಗೂ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಇತ್ತು. ಆ ಕಾಲಘಟ್ಟದ ಕಥೆ ಸಿನಿಮಾದ್ದು ಎಂಬ ಅಂಶ ರಿವೀಲ್‌ ಆಗಿದೆ. ಗೋವಾದಲ್ಲಿ ನಡೆಯುವ ಭೂಗತ ಚಟುವಟಿಕೆಗಳು..

ಯಶ್‌ ಅವರ ‘ಟಾಕ್ಸಿಕ್‌’ ತಂಡ ಸಿನಿಮಾವನ್ನು ಗ್ಲೋಬಲ್‌ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಅಮೆರಿಕಾದ ಲಾಸ್‌ ವೇಗಾಸ್‌ನಲ್ಲಿ ನಡೆಯುತ್ತಿರುವ ‘ಸಿನಿಮಾಕಾನ್‌’ನಲ್ಲಿ ಜಾಗತಿಕ ಸಿನಿಮಾರಂಗದವರಿಗೆ ‘ಟಾಕ್ಸಿಕ್’ನ ಒಂಭತ್ತು ನಿಮಿಷಗಳ ಪ್ರಿವ್ಯೂ ಅನ್ನು ತೋರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾದ ಪವರ್‌ಫುಲ್‌ ಮೇಕಿಂಗ್‌ ಹಾಗೂ ಕಥೆಯ ಫೀಲ್‌ ಅನ್ನು ಸಮರ್ಥವಾಗಿ ಜಾಗತಿಕ ಸಿನಿಮಾ ತಜ್ಞರ ಮುಂದಿಡಲು ಇದರಿಂದ ಸಾಧ್ಯವಾಗಿದೆಯಂತೆ. ಇದು ಚಿತ್ರವನ್ನು ವರ್ಲ್ಡ್‌ ಲೆವೆಲ್‌ಗೆ ಕೊಂಡೊಯ್ಯುವ ಯಶ್‌ ಕನಸಿನ ಮಹತ್ವದ ಮೈಲಿಗಲ್ಲು ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಅಂದರೆ 1961ರವರೆಗೂ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಇತ್ತು. ಆ ಕಾಲಘಟ್ಟದ ಕಥೆ ಸಿನಿಮಾದ್ದು ಎಂಬ ಅಂಶ ರಿವೀಲ್‌ ಆಗಿದೆ. ಗೋವಾದಲ್ಲಿ ನಡೆಯುವ ಭೂಗತ ಚಟುವಟಿಕೆಗಳು, ಕರಾಳ ಜಗತ್ತಿನಿಂದ ಎದ್ದು ಬಂದು ಶಕ್ತಿಯುತವಾಗಿ ಬೆಳೆಯುವ ವ್ಯಕ್ತಿಯ ಕಥೆ ಇದು ಎಂದು ತಿಳಿದುಬಂದಿದೆ.

ಈ ಪ್ರದರ್ಶನ ನೋಡಿದ ವ್ಯಕ್ತಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಒಂಭತ್ತು ನಿಮಿಷಗಳ ವೀಡಿಯೋ ಈ ಹಿಂದೆ ನೋಡಿದ ಗ್ಲಿಂಪ್ಸ್‌ಗಳ ಮುಂದುವರಿದ ಭಾಗದಂತಿತ್ತು. ಆದರೆ ಇನ್ನಷ್ಟು ಶ್ರೀಮಂತವಾಗಿದ್ದು, ವರ್ಲ್ಡ್‌ ಲೆವೆಲ್‌ನಲ್ಲಿ ಮಿಂಚಲು ಸಿನಿಮಾಕ್ಕೆ ಎಲ್ಲ ಅರ್ಹತೆ ಇರುವುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಯಿತು. ಕತ್ತಿಯಂಚಿನ ನಡಿಗೆ ಅಂತೀವಲ್ಲ, ಆ ಥರದ ಕಥೆಯ ಹರಿವನ್ನು ಬ್ಯಾಲೆನ್ಸ್‌ ಮಾಡಿದ ರೀತಿ ವಿಶಿಷ್ಠವಾಗಿತ್ತು.

1970ರ ನಡುವೆ ನಡೆಯುವ ಕಥೆ

ಪಾತ್ರಗಳು ಗಾಢವಾಗಿವೆ. ಈ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ವೀಡಿಯೋ ನೋಡಿ ಹೊರಬಂದ ಮೇಲೆ ಎಲ್ಲರೂ ಅದರ ಬಗ್ಗೆಯೇ ಮಾತನಾಡುತ್ತಿದ್ದರು’ ಎಂದಿದ್ದಾರೆ. ‘ಇದು 1940 ರಿಂದ 1970ರ ನಡುವೆ ನಡೆಯುವ ಕಥೆ. ದೊಡ್ಡವರಿಗಾಗಿ ಮಾಡಿರುವ ಫ್ಯಾಂಟಸಿ ಲೋಕದ ಹಾಗೆ ಇತ್ತು. ಇದನ್ನು ನೋಡಿದವರು ಕುತೂಹಲದಿಂದ ಸಿನಿಮಾಕ್ಕೆ ಎದುರು ನೋಡುವಂತಾಗಿದೆ’ ಎಂದೂ ಹೇಳಿದ್ದಾರೆ.