ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ತಮ್ಮ ಬಲಗಿವಿಯನ್ನು ಮುಚ್ಚಿಕೊಳ್ಳುವುದು ಏಕೆ? ಫೋಟೋಗೆ ಪೋಸ್ ಕೊಡುವಾಗ ಎಡಭಾಗದಲ್ಲಷ್ಟೇ ಪೋಸ್ ಕೊಡುವುದು ಏಕೆ? ಗುಟ್ಟನ್ನು ರಿವೀಲ್ ಮಾಡಿದ್ದಾರೆ ನಟಿ ಮಲೈಕಾ ಅರೋರಾ!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳೆದ ಸೆಪ್ಟೆಂಬರ್ 8ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ದೀಪಿಕಾ ತಾವು ವಹಿಸಿಕೊಂಡಿರುವ ಎಲ್ಲಾ ಚೀತ್ರಗಳನ್ನೂ ಪೂರ್ಣಗೊಳಿಸಿ ಭೇಷ್ ಎನ್ನಿಸಿಕೊಂಡವರು. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದಲ್ಲಿ ನಟಿಸಿದ್ದರು. ಇದಾಗ ಬಳಿಕ ಈಗ ಸಂಪೂರ್ಣ ಮಗಳ ಜೊತೆ ಕಳೆಯುವುದಾಗಿ ಹೇಳಿಕೊಂಡಿರೋ ದೀಪಿಕಾ ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಹೇಳಿಕೊಂಡಿದ್ದರು. ಫೀಡ್, ಬರ್ಪ್, ಸ್ಲೀಪ್, ರಿಪೀಟ್ (Feed, Burp, Sleep, Repeat) ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಳ್ಳುವ ಮೂಲಕ ಇನ್ನು ಸದ್ಯ ಮಗುವಿನ ಆರೈಕೆಯಷ್ಟೇ ತಮ್ಮ ಕೆಲಸ ಎನ್ನುವುದನ್ನು ಹೇಳಿದ್ದರು. ಇದೀಗ ಮತ್ತೆ ಅವರು ನಟನೆಗೆ ಮರಳುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಒಂದು ಇಂಟರೆಸ್ಟಿಂಗ್ ವಿಷ್ಯ ರಿವೀಲ್ ಆಗಿದೆ. ಅದೇನಪ್ಪಾ ಎಂದ್ರೆ ಅವರ ಬಲಗಿವಿಯ (Right Ear) ರಹಸ್ಯ!
ಹೌದು. ನೀವು ದೀಪಿಕಾ ಪಡುಕೋಣೆ ಅವರ ಫೋಟೋಶೂಟ್ ಅಥವಾ ಇನ್ನಾವುದೇ ಸಾಮಾನ್ಯ ದಿನಗಳಲ್ಲಿ ನೋಡಿದರೆ, ಅವರು ಬಲಗಿವಿಯನ್ನು ಮುಚ್ಚಿಕೊಂಡೇ ಇರುತ್ತಾರೆ. ಇಲ್ಲದೇ ಹೋದರೆ ಫೋಟೋಗೇ ಪೋಸ್ ಕೊಡುವಾಗ ಎಡಗಿವಿಯನ್ನಷ್ಟೇ ತೋರಿಸುತ್ತಾರೆ. ಅವರ ಬಲಗಿವಿ ಕೂದಲಿನಿಂದ ಮುಚ್ಚಿರುತ್ತದೆ.ಒಂದು ವೇಳೆ ಕೂದಲನ್ನು ಕಟ್ಟಿದ್ದರೆ, ಅಂಥ ಸಮಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಬಲಕಿವಿಯನ್ನು ತೋರಿಸುವುದಿಲ್ಲ. ಫೋಟೋ ಕ್ಲಿಕ್ಕಿಸಲು ಯಾರಾದರೂ ಬಂದರೆ ಎಡಗಡೆ ಪೋಸ್ ಕೊಡುತ್ತಾರೆ. ಹಾಗಿದ್ದರೆ ಏನಿದು ಬಲಕಿವಿಯ ರಹಸ್ಯ? ಯಾಕೆ ನಟಿ ಈ ಕಿವಿಯನ್ನು ತೋರಿಸುವುದಿಲ್ಲ/
ಈ ಬಗ್ಗೆ ನಟಿ ಮಲೈಕಾ ಅರೋರಾ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ನಟಿ ದೀಪಿಕಾ ಪಡುಕೋಣೆ ಅವರ ಬಲಕಿವಿ ತುಂಬಾ ದೊಡ್ಡದಿದೆ. ಕೆಲವೊಂದು ವಿಡಿಯೋ ಅಥವಾ ಫೋಟೋಗಳಲ್ಲಿ ಅಚಾನಕ್ ಆಗಿ ಈ ಕಡೆಯಿಂದ ಕ್ಲಿಕ್ಕಿಸಲು ಸಿಕ್ಕಿದ್ದರೆ, ಅದನ್ನು ನೋಡಬಹುದಾಗಿದೆ. ಇದನ್ನೇ ಮಲೈಕಾ ಹೇಳಿದ್ದಾರೆ. ದೀಪಿಕಾ ಬಲಗಿವಿ ದೊಡ್ಡದಿದೆ ಎಂದಿದ್ದಾರೆ. ಅಷ್ಟಕ್ಕೂ, ಕಿವಿ ದೊಡ್ಡದು ಇದ್ದರೆ ಅದನ್ನು ಅದೃಷ್ಟದ ಸಂಕೇತ ಎಂದೂ ಕರೆಯುತ್ತಾರೆ. ಆದರೆ ದೀಪಿಕಾ ಪಡುಕೋಣೆಯವರ ಎಡಗಿವಿಗಿಂತಲೂ ಬಲಗಿವಿ ದೊಡ್ಡದಿದ್ದು ಸ್ವಲ್ಪ ಡೊಂಕಾಗಿದೆ. ಇದೇ ಕಾರಣಕ್ಕೆ ಆಕೆ ಅದನ್ನು ರಿವೀಲ್ ಮಾಡುವುದಿಲ್ಲ ಎನ್ನುವ ಮಾತಿದೆ. ಇದರ ವಿಡಿಯೋ ವೈರಲ್ ಆಗುತ್ತಲೇ, ಹಲವರು ದೀಪಿಕಾ ಕಂಡರೆ ಮಲೈಕಾಗೆ ಆಗಲ್ಲ, ಹೊಟ್ಟೆ ಉರಿ. ಅದಕ್ಕೇ ಹಾಗೆ ಹೇಳುತ್ತಿದ್ದಾಳೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಅಮ್ಮನಾದ ಬಳಿಕ, ಸದ್ಯ ದೀಪಿಕಾ ಪಡುಕೋಣೆ ಸದ್ಯ ಸದ್ದು ಮಾಡ್ತಿರೋದು ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದ ಕಥೆಯನ್ನು ಲೀಕ್ ಮಾಡಿರುವ ಆರೋಪದ ಮೇಲೆ. ‘ಸ್ಪಿರಿಟ್’ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ಸಂದೀಪ್ ಅವರು ದೀಪಿಕಾಗೆ ಹೇಳಿದ್ದರು. ಅವರು ಕಥೆಯನ್ನು ಒಪ್ಪಿದ್ದರು. ಆದರೆ, ದೀಪಿಕಾ ಇಟ್ಟ ಡಿಮ್ಯಾಂಡ್ ಪೂರೈಸಲಾಗದ ಕಾರಣ ಅವರನ್ನು ಚಿತ್ರದಿಂದ ಕೈ ಬಿಡಲಾಯಿತು. ಇದಾದ ಬಳಿಕ ಈ ಸ್ಥಾನಕ್ಕೆ ತೃಪ್ತಿ ದಿಮ್ರಿ ಆಯ್ಕೆ ಆದರು. ಆದರೆ ದೀಪಿಕಾ ಕಥೆಯನ್ನು ಲೀಕ್ ಮಾಡಿ ಸಣ್ಣ ಬುದ್ಧಿ ತೋರಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಿವೆ. ಆದ್ದರಿಂದ ಇದಕ್ಕೆ ಎಡಲ್ಟ್ ಪ್ರಮಾಣ ಪತ್ರ (A Certificate) ಸಿಗತ್ತೆ ಎಂದಿದ್ದಾರಂತೆ. ಇದರ ಬಗ್ಗೆ ನಟಿ ಇನ್ನಷ್ಟೇ ಬಾಯಿ ಬಿಡಬೇಕಿದೆ. ಆದರೆ ಸದ್ಯ ಕಿವಿಯ ಬಗ್ಗೆ ಚರ್ಚೆ ಆಗ್ತಿದೆ.
