ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.
ತ್ರಿಷಾರನ್ನು ಹನಿ ಅಂತ ಕರೆಯೋದು ಯಾರು ಗೊತ್ತಾ?
ದಕ್ಷಿಣ ಭಾರತದ ಸುಂದರಿ ನಟಿ ತ್ರಿಷಾ ಕೃಷ್ಣನ್ (Trisha Krishnan) ಅಂದರೆ ಯಾರಿಗೆ ಗೊತ್ತಿಲ್ಲ? ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ತ್ರಿಶಾ, ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸೆನ್ಸೇಷನ್ ಸೃಷ್ಟಿಸುತ್ತಿರುವ ನಟಿ. ಇತ್ತೀಚೆಗೆ ತಮಿಳುನಾಡು ಸಿಎಂ ಆಗಿರುವ ನಟ ದಳಪತಿ ವಿಜಯ್ ಅವರ ಆಪ್ತ ಸ್ನೇಹಿತೆ ಎಂದೇ ನಟಿ ತ್ರಿಷಾ ಅವರನ್ನು ಬಿಂಬಿಸಲಾಗುತ್ತಿದೆ. ಈ ವಿಷಯವನ್ನು ತ್ರಿಷಾ ಆಗಲಿ ಅಥವಾ ವಿಜಯ್ ಆಗಲೀ ಅಧಿಕೃತ ಎಂದು ಯಾವತ್ತೂ ದೃಢೀಕರಿಸಿಲ್ಲ. ಆದರೆ, ಅವರಿಬ್ಬರ ಆಪ್ತರು ಎನಿಸುವ ಒಡನಾಟ ಹಾಗೂ ವಿಜಯ್ ಪತ್ನಿ ಸಂಗೀತಾ ಕೊಟ್ಟಿರುವ ಡಿವೋರ್ಸ್ ಅರ್ಜಿ ವಿಜಯ್-ತ್ರಿಷಾ ಸಂಬಂಧಕ್ಕೆ ಪುಷ್ಟಿ ಕೊಡುವ ಸಂಗತಿ ಎಂದೇ ಎಲ್ಲರೂ ಭಾವಿಸಿದ್ದಾರೆ.
ಗೆಸ್ ಮಾಡ್ತೀರಾ?
ಅದಿರಲಿ, ನಟಿ ತ್ರಿಷಾ ಅವರಿಗೆ ಇನ್ನೊಂದು ಹೆಸರಿದೆ. ಅದು ಏನು ಗೊತ್ತಾ? ನಿಮಗೆ ಅಚ್ಚರಿ ಆಗಬಹುದು, ತ್ರಿಷಾರಿಗೆ 'ಹನಿ' ಎಂದು ಒಬ್ಬರು ಕರೆಯುತ್ತಾರೆ. ಯಾರು ಎಂದು ಕೆಲವರು ತಿಳಿದಿರಬಹುದು, ಕೆಲವರು ಗೆಸ್ ಮಾಡಬಹುದು. ಆದರೆ, ಬಹಳಷ್ಟು ತ್ರಿಷಾರನ್ನು 'Honey' ಎಂದು ಕರೆಯುವವರು 'ಅವರೇ' ಆಗಿರುತ್ತಾರೆ ಎಂದು ಅರ್ಥೈಸಬಹುದು. ಆದರೆ, ಈ ಸಂಗತಿಯನ್ನು ಸ್ವತಃ ನಟಿ ತ್ರಿಷಾ ಕೃಷ್ಣನ್ ಒಪ್ಪಿಕೊಂಡಿದ್ದಾರೆ. ಜೊತೆಗೆ, 'ಹೌದು' ಅವರು ನನ್ನನ್ನು 'ಹನಿ' ಎಂದು ಕರೆಯುತ್ತಾರೆ ಎಂದು ಕಪಲ್ ಶೋ ಶರ್ಮಾ ಶೋದಲ್ಲಿ ಎಲ್ಲರೆದುರು ಹೇಳಿಕೊಂಡಿದ್ದಾರೆ.
ಜೊತೆಗೆ, ಇನ್ನೂ ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಮದ ಕರೆಯುತ್ತಾರೆ. ಅದು ಅಚ್ಚರಿ ಎನ್ನಿಸುವಂತಿದ್ದರೂ ನಿಜ. ಅದೇನು ಗೊತ್ತಾ?
ಇದು ಅಚ್ಚರಿ, ಆದ್ರೂ ಸತ್ಯ!
ಕಪಿಲ್ ಶೋದಲ್ಲಿ ಸ್ವತಃ ನಟಿ ತ್ರಿಷಾ ಹೇಳಿಕೊಂಡಂತೆ. ಅವರನ್ನು ಬಹಳಷ್ಟು ಆಪ್ತರು ಟ್ರಾಷ್ (Trash) ಎಂದು ಕರೆಯುತ್ತಾರೆ. ಆ ಶೋದಲ್ಲಿ ಎಲ್ಲರೂ ತ್ರಿಷಾ ಮಾತನ್ನು ಕೇಳಿ ನಕ್ಕಿದ್ದು, ಅಲ್ಲೇ ಇದ್ದ ನಟಿ ವಿಕ್ರಮ್ ಅವರು ತ್ರಿಷಾರನ್ನು ಕಾಲೆಳೆದಿದ್ದೂ ಆಯ್ತು. ಆದರೂ ಕೂಡ, ತ್ರಿಷಾ ಅವರು ಯಾವುದೇ ಸಂಕೋಷ ಇಲ್ಲದೇ, ಹೌದು ಇತ್ತೀಚೆಗೆ ನನ್ನ ಕ್ಲೋಸ್ ಸರ್ಕಲ್ ನನ್ನನ್ನು ಟ್ರಾಷ್ ಎಂದೇ ಕರೆಯುತ್ತಾರೆ ಎಂದು ಹೇಳಿದ್ದಾರೆ.
ಹೌದು, ಈಗ ಮತ್ತೆ ಮೊದಲಿನ ವಿಷಯಕ್ಕೆ ಬರುವುದಾದರೆ.. ನಟಿ ತ್ರಿಷಾರನ್ನು 'ಹನಿ' ಎಂದು ಕರೆಯವುದು ಬೇರೆ ಯಾರೂ ಅಲ್ಲ, ಅವರ ಅಪ್ಪ (Father) ಅಂತ ಅವರೇ ಹೇಳಿದ್ದಾರೆ. ನನ್ನ ಅಪ್ಪ ನನ್ನನ್ನು ಹನಿ (Honey) ಎಂದೇ ಯಾವತ್ತೂ ಕರೆಯುತ್ತಿದ್ದರು ಎಂದಿದ್ದಾರೆ. ಇದು ನೀವು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿರಬಹುದು, ನಿಮಗೆ ಶಾಕ್ ಆಗಿರಬಹುದು. ಆದರೆ, ಇದೇ ಸತ್ಯ ಸಂಗತಿ. ತ್ರಿಷಾರನ್ನು ಹನಿ ಎಂದು ಕರೆಯುವುದು ಅವರ ಅಪ್ಪ ಮಾತ್ರ, ಬೇರೆ ಯಾರೂ ಅಲ್ಲ.


