ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್ 4' ಮುಕ್ತಾಯದ ಹಂತಕ್ಕೆ ಬಂದಿದೆ.

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ! 

ಈಗ ತಾನೆ ಸೀಸನ್ 4 ಶುರುವಾಗಿದೆ ಅನಿಸ್ತು. ಧರ್ಮಾಸ್ಥಳದ ಧರ್ಮಾಧಿಕಾರಿಗಳು ಈ ಸೀಟ್ ನಲ್ಲಿ ಕುಳಿತಿದ್ದರು. ಆಗಲೇ ಮುಗಿಯುವ ಹಂತಕ್ಕೆ ಬಂದಿದೆ. i hope you are enjoying the show ಎಂದು ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Hope you are enjoying the show:)

A post shared by Ramesh Aravind (@ramesh.aravind.official) on Jul 1, 2019 at 3:27am PDT

ಈ ಸೀಸನ್ ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಂದಿದ್ದರು. ಇವರಿಂದ ಮೊದಲು ಆರಂಭವಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಸುಧಾಮೂರ್ತಿ ದಂಪತಿ, ಶ್ರೀ ಮುರಳಿ, ವಿನಯಾ ಪ್ರಕಾಶ್, ಟೈಗರ್ ಅಶೋಕ್. ಶಂಕರ್ ಬಿದರಿ ಎಪಿಸೋಡ್ ಗಳು ಹೆಚ್ಚು ಗಮನ ಸೆಳೆದಿವೆ. 

ಅಬ್ಬಾ...! ರೋರಿಂಗ್ ಸ್ಟಾರ್ ಶೇಷಾದ್ರಿಪುರಂ ಕಾಲೇಜ್ ಲವ್ ಸ್ಟೋರಿ ಕೇಳಿದ್ದೀರಾ ?

ರಮೇಶ್ ಅರವಿಂದ್ ವಿಭಿನ್ನ ನಿರೂಪಣೆ, ಅವರ ವಿಧೇಯತೆ, ಅತಿಥಿಗಳನ್ನು ಪರಿಚಯಿಸಿಕೊಡುವ ರೀತಿ ಎಲ್ಲರಿಗೂ ಇಷ್ಟವಾಗುವಂತಿದೆ.

ಸೀಸನ್ 3 ನಂತರ ಕೆಲಕಾಲ ವಿರಾಮದ ನಂತರ ಸೀಸನ್ 4 ಶುರುವಾಗಿದ್ದು ಪ್ರೇಕ್ಷಕರಿಗೆ ಖುಷಿ ಕೊಟ್ಟಿತ್ತು. ಪ್ರತಿ ವಾರವೂ ಈ ವಾರದ ಅತಿಥಿ ಯಾರಿರಬಹುದು ಎಂಬ ಕುತೂಹಲ ಮೂಡಿಸುತ್ತಿತ್ತು. ಕೆಲವರನ್ನು ಈ ಸೀಟಿನಲ್ಲಿ ಕುಳಿಸಿದ್ದಕ್ಕೆ ಪ್ರೇಕ್ಷಕರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಇಷ್ಟು ಬೇಗನೇ ಮುಕ್ತಾಯವಾಗುತ್ತಿರುವುದಕ್ಕೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.