ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಜನ ಸಾಮಾನ್ಯರಿಗೆ ಸ್ಫೂರ್ತಿ ತುಂಬುವ ಕಾರ್ಯಕ್ರಮವಾಗಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಇನ್ಫೋಸಿಸ್ ಮಾಲಿಕರಾದ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿಯನ್ನು ಶನಿವಾರ-ಭಾನುವಾರ ಸಂಚಿಕೆಗೆ ಬಂದಿದ್ದರು.

ಜೀವನದ ಹಾದಿಯಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತು ಯಶಸ್ಸು ಕಂಡ ಜೋಡಿ ಬಗ್ಗೆ ಕುತೂಹಲ ಸಹಜ. ಇವರ ಪ್ರೀತಿ ಹುಟ್ಟಿದ್ದು ಹೇಗೆ? ಎಷ್ಟು ವರ್ಷದ ಲವ್ ? ಇದಕ್ಕೆಲ್ಲಾ ಅವರು ಕೊಟ್ಟ ಉತ್ತರ ಇಲ್ಲಿದೆ ನೋಡಿ.

ಅಬ್ಬಾ...! ರೋರಿಂಗ್ ಸ್ಟಾರ್ ಶೇಷಾದ್ರಿಪುರಂ ಕಾಲೇಜ್ ಲವ್ ಸ್ಟೋರಿ ಕೇಳಿದ್ದೀರಾ ?

ಎಂದೂ ಸಿಗರೇಟ್ ಸೇದುವ ಅಭ್ಯಾಸ ಇಲ್ಲದ ಮೂರ್ತಿಯವರು ಸ್ನೇಹಿತನೊಬ್ಬ ಕೊಟ್ಟ ಸಿಗರೇಟನ್ನು ಸೇದುವಾಗ ಸುಧಾ ನೋಡಿ ಶಾಕ್ ಆಗಿದ್ದರಂತೆ! ಇದು ಅವರು ಮೊದಲ ಭೇಟಿ ಮಾಡಿದ ಸಂದರ್ಭದಲ್ಲಿ ನಡೆದ ಘಟನೆ.

ಸ್ನೇಹಿತರಾಗಿ ಸಮಯ ಕಳೆಯುತ್ತಿದ್ದವರು ಒಮ್ಮೆ ಆಟೋ ರಿಕ್ಷಾದಲ್ಲಿ ಮನೆಗೆ ಹೋಗುವಾಗ ‘ಮದುವೆ ಆಗುತ್ತಿಯಾ’ ಎಂದು ಕೇಳಿದ್ರಂತೆ. ತಕ್ಷಣಕ್ಕೆ ಯಾವುದೇ ಉತ್ತರ ನೀಡದ ಸುಧಾ ನಕ್ಕು ಸುಮ್ಮನಾದರಂತೆ. ಬಟ್ ಸ್ವಲ್ಪ ದಿನಗಳ ನಂತರ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದರಂತೆ.

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!