ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಪಾಕಿಸ್ತಾನಕ್ಕೆ ಕೆರಳಿದ್ದ, ಕವಿ, ಲೇಖಕ ಜಾವೇದ್‌ ಅಖ್ತರ್‌ ಪಾಕ್‌ ನೆಲದಲ್ಲಿಯೇ ನಿಂತು, ಮುಂಬೈ ದಾಳಿಗೆ ಕಾರಣವಾದ ಪಾಕಿಸ್ತಾನವನ್ನು ಟೀಕೆ ಮಾಡಿದ್ದರು. ಈ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಪ್ರತಿಕ್ರಿಯೆ ನೀಡಿದ್ದಾರೆ. 

ನವದೆಹಲಿ (ಏ.13): ಕೆಲ ತಿಂಗಳ ಹಿಂದೆ ಪಾಕಿಸ್ತಾನದಲ್ಲಿ ಸಾಹಿತ್ಸ ಉತ್ಸವಕ್ಕೆ ತೆರಳಿದ್ದ ಕವಿ, ಲೇಖಕ ಜಾವೇದ್‌ ಅಖ್ತರ್‌, ಮುಂಬೈ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ. ಪಾಕಿಸ್ತಾನದಲ್ಲಿ ಅವರು ಆರಾಮವಾಗಿ ತಿರುಗಾಡುತ್ತಿರುವಾಗ ಈ ಎಲ್ಲದಕ್ಕೂ ಪಾಕಿಸ್ತಾನವೇ ಕಾರಣ ಎಂದು ಭಾರತೀಯರು ಹೇಳುವುದನ್ನು ಪಾಕ್‌ ಕೇಳಲೇಬೇಕಾಗುತ್ತದೆ ಎಂದು ಹೇಳಿದ್ದರು. ಲಾಹೋರ್‌ನಲ್ಲಿ ನಿಂತು ಅವರು ಆಡಿದ್ದ ಮಾತುಗಳು ಕ್ಷಣಮಾತ್ರದಲ್ಲಿ ವೈರಲ್‌ ಆಗಿ ಬಿಟ್ಟಿದ್ದವು. ಈಗ ಜಾವೇದ್‌ ಅಖ್ತರ್‌ ಅವರ ಕಾಮೆಂಟ್‌ಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ವಿಶ್ವ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ವಾಸಿಂ ಅಕ್ರಮ್‌ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಚಿತ್ರ 'ಮನಿ ಬ್ಯಾಕ್‌ ಗ್ಯಾರಂಟಿ' ಪ್ರಚಾರದಲ್ಲಿರುವ ವಾಸಿಂಗ್‌ ಅಕ್ರಂ, ಹಿಂದುಸ್ತಾನ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ವಾಸಿಂ ಅಕ್ರಂ ತನ್ನ ಪತ್ನಿ ಶನೀರಾ ಅಕ್ರಂ ಜೊತೆ ನಟಿಸಿದ್ದಾರೆ. ಸಂದರ್ಶನದಲ್ಲಿ ವಾಸಿಂ ಅಕ್ರಂಗೆ ಜಾವೇದ್‌ ಅಖ್ತರ್‌ ಅವರ ಬಗ್ಗೆ ಪ್ರಶ್ನೆ ಕೇಳಲಾಯಿತು. 'ಇತ್ತೀಚೆಗೆ ಲಾಹೋರ್‌ನಲ್ಲಿ ಜಾವೇದ್‌ ಅಖ್ತರ್‌ 26/11 ದಾಳಿಯ ಬಗ್ಗೆ ಮಾತನಾಡಿದ್ದರು. ಇದನ್ನು ಭಾರತ ಹಾಗೂ ಪಾಕಿಸ್ತಾನದಲ್ಲಿ ಬಹಳ ಭಿನ್ನವಾಗಿ ತೆಗೆದುಕೊಳ್ಳಲಾಯಿತು. ಈ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನೆ ಕೇಳಲಾಯಿತು.

ರಾಜಕೀಯ ವಿಚಾರಗಳ ಬಗ್ಗೆ ನಾನು ಈ ವೇದಿಕೆಯಲ್ಲಿ ಮಾತನಾಡೋದಿಲ್ಲ. ಚಿತ್ರ ಪ್ರಮೋಟ್‌ ಮಾಡುವ ಸಲುವಾಗಿ ನಾನು ಇಲ್ಲಿದ್ದೇನೆ. ಹಾಗೇನಾದರೂ ನನಗೆ ಇನ್ನೊಂದು ದೇಶ ಆಹ್ವಾನ ನೀಡಿದ್ದರೆ, ನಾನು ಆ ದೇಶದ ಧನಾತ್ಮಕ ಅಂಶಗಳನ್ನು ಗುರುತಿಸಿ ಅದರ ಬಗ್ಗೆ ಮಾತನಾಡುತ್ತಿದ್ದೆ ಎಂದು ಹೇಳುವ ಮೂಲಕ ಜಾವೇದ್‌ ಅಖ್ತರ್‌ ಟೀಕೆಯ ಬಗ್ಗೆ ಕಿಡಿಕಾರಿದ್ದಾರೆ. ಇದೇ ವೇಳೆ ಆಸ್ಕರ್‌ನಲ್ಲಿ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿಗೆ ಆರ್‌ಆರ್‌ಆರ್‌ ಚಿತ್ರವನ್ನು ನೋಡಿದ್ದೀರಾ ಎನ್ನುವ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು ಇಲ್ಲ, ಇನ್ನೂ ನೋಡಿಲ್ಲ. ನಾನು ಆ ಚಿತ್ರ ವೀಕ್ಷಿಸುತ್ತೇನೆ ಎಂದು ಉತ್ತರ ನೀಡಿದರು.

ಪ್ರಸ್ತುತ ಭಾರತೀಯ ಕ್ರಿಕೆಟ್‌ ತಂಡದಲ್ಲಿ ನಿಮ್ಮ ಫೇವರಿಟ್‌ ಕ್ರಿಕೆಟಿಗ ಯಾರು ಎಂದು ಕೇಳಲಾದ ಪ್ರಶ್ನೆಗೆ, ವಾಸಿಂ ಅಕ್ರಂ ಒಂಚೂರು ಯೋಚನೆ ಮಾಡದೆ ವಿರಾಟ್‌ ಕೊಹ್ಲಿ ಎಂದು ಹೇಳಿದರು. ಆತ ಅದ್ಬುತ ಆಟಗಾರ. ಅವರ ನಾಯಕತ್ವ ಗುಣಗಳು ನನಗೆ ಮೆಚ್ಚುಗೆ ಆಗುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್

ನಿಮಗೆ ಹಾಗೂ ನಿಮ್ಮ ಪತ್ನಿ ಶಾನಿರಾಗೆ ದೇಶದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಯಾವಾಗ ನೀವು ದೇಶಕ್ಕೆ ಬರಬಹುದು ಎನ್ನುವ ಪ್ರಶ್ನೆಗೆ, 'ನಾನು ಭಾರತವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ನಮ್ಮ ಮದುವೆಯಾದ ಬಳಿಕ ನಾಲ್ಕು ವರ್ಷಗಳ ಕಾಲ ಭಾರತದಲ್ಲಿಯೇ ಇದ್ದೆವು. ಆಸ್ಟ್ರೇಲಿಯಾಕ್ಕಿಂತ ಹೆಚ್ಚಿನ ಸಮಯವನ್ನು ಭಾರತದಲ್ಲಿ ಕಳೆದಿದ್ದೇವೆ' ಎಂದು ಶನೀರಾ ಹೇಳಿದ್ದಾರೆ. ನಾನೂ ಕೂಡ ಭಾರತಕ್ಕೆ ಬರೋದನ್ನು ಆನಂದಿಸುತ್ತೇನೆ. ವರ್ಷದಲ್ಲಿ 7-8 ತಿಂಗಳ ಕಾಲ ಭಾರತದಲ್ಲಿ ಇರಬೇಕು ಎಂದು ಆಸೆ ಪಡುತ್ತೇನೆ. ನನ್ನ ಸ್ನೇಹಿತರು, ನನ್ನ ಜನ ಮತ್ತು ಆಹಾರವನ್ನು ಮಿಸ್‌ ಮಾಡಿಕೊಳ್ತೇನೆ. ಅದರಲ್ಲೂ ದೋಸೆಯನ್ನು ಬಹಳ ಮಿಸ್‌ ಮಾಡುತ್ತೇನೆ. ಪಾಕಿಸ್ತಾನದಲ್ಲಿ ಇದನ್ನು ಮಾಡೋದಿಲ್ಲ ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

ಪಾಕ್‌ಗೆ ಖಡಕ್ ಉತ್ತರ ಕೊಟ್ಟಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ಬಹಿರಂಗ ಪಡಿಸಿದ ಜವೇದ್ ಅಖ್ತರ್

ನನಗೆ ವಾಸಿಂ ಅಕ್ರಂ ಅನ್ನು ಭಾರತದ ಜನರು ಪ್ರೀತಿ ಮಾಡೋದು ನೋಡೋಕೆ ಇಷ್ಟ. ಅವರ ಭಾರತದ ಪರವಾಗಿ ಆಡಿಲ್ಲ. ಆದರೂ ಜನ ವಾಸಿಂ ಭಾಯಿ ಎನ್ನುತ್ತಾರೆ. ಇದು ನನಗೆ ಇಷ್ಟ ಎಂದು ಶನೀರಾ ಹೇಳಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಮನಿ ಬ್ಯಾಕ್ ಗ್ಯಾರಂಟಿ ಬಿಡುಗಡೆಯೊಂದಿಗೆ ಕ್ರಿಕೆಟ್‌ ಮೈದಾನದಿಂದ ಸಿನಿಮಾ ರಂಗಕ್ಕೆ ಏರಲು ಸಜ್ಜಾಗಿದ್ದಾರೆ. ಈ ಚಿತ್ರವು ಸುಲ್ತಾನ್ ಆಫ್ ಸ್ವಿಂಗ್ ಅವರ ಪತ್ನಿ, ಸಮಾಜ ಸೇವಕಿ ಶಾನೀರಾ ಅಕ್ರಂ ಅವರ ಮೊದಲ ಚಿತ್ರವಾಗಿದೆ. ಏಪ್ರಿಲ್ 21 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.