‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

ಪುರಿ ಜಗನ್ನಾಥ್ ಜನಗಣಮನ ಸಿನಿಮಾಕ್ಕಾಗಿ ಯಶ್ ರನ್ನು ಸಂಪರ್ಕಿಸಿದ್ದರು. ಚಿತ್ರದ ಬಗ್ಗೆ ಮಾತನಾಡಿದ್ದರು. ಜನಗಣಮನ ದಲ್ಲಿ ಯಶ್ ನಟಿಸುತ್ತಾರೆ ಎಂಬ ಮಾತೂ ಕೇಳಿ ಬಂದಿತ್ತು. ಆದರೆ ಈಗ ಅದು ಬದಲಾಗಿದೆ. ಯಶ್ ಬದಲು ವಿಜಯ್ ನಟಿಸುವುದು ಪಕ್ಕಾ ಆಗಿದೆ. 

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ಈ ಬಗ್ಗೆ ನಟಿ ಕಮ್ ಚಿತ್ರ ನಿರ್ಮಾಪಕಿ ಚಾರ್ಮಿ ಕೌರ್ ಈ ಬಗ್ಗೆ ಟ್ವಿಟ್ ಮಾಡಿ, ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಜೊತೆ ನಮ್ಮ ಮುಂದಿನ ಪ್ರಾಜೆಕ್ಟ್ ಮಾಡುತ್ತಿದ್ದೇವೆ. ಪುರಿ ಕನೆಕ್ಟ್ಸ್, ಪುರಿ ಜಗನ್ನಾಥ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದೇವೆ ಎಂದಿದ್ದಾರೆ.