ಕಾಂಟ್ರೋವರ್ಸಿ ಕ್ರಿಯೇಟ್ ಮಾಡಿದ ಸಿನಿಮಾ ಯಾರು ನೋಡುತ್ತಾರೆ? ಅದರಲ್ಲೂ ಇವರಿಬ್ಬರೂ ಬರೀ ಕಿಸ್ಸಿಂಗ್ ಸೀನ್ ಗೆ ಹೈಪ್‌ ಕೊಟ್ಟಿದ್ದಾರೆ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದ ಜನರಿಗೆ ಸಿನಿಮಾ ಬಾಕ್ಸ್ ಆಫೀಸ್ ಮುಟ್ಟುವ ಮೂಲಕ ಜನರ ಬಾಯಿ ಮುಚ್ಚಿದೆ.

ಇನ್ನು ಚಿತ್ರ ಮಂದಿರಕ್ಕೆ ಭೇಟಿ ಮಾಡಿ ಅಭಿಮಾನಿಗಳನ್ನು ಮಾತನಾಡಿಸಿ ಸಿನಿಮಾ ಅಭಿಪ್ರಾಯ ತೆಗೆದುಕೊಳ್ಳುತ್ತಿರುವ ದೇವರಕೊಂಡನನ್ನು ಹುಡುಗಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಅಳುತ್ತಿದ್ದ ಹುಡುಗಿಯನ್ನು ತಬ್ಬಿಕೊಂಡು ತಲೆ ಸವರಿ ಪ್ರೀತಿ ತೋರಿಸಿದ ವಿಜಯ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 

ಇನ್ನು 'Rowdy' ಎಂದು ಬಟ್ಟೆಯ ಬ್ರ್ಯಾಂಡ್ ತೆಗೆದಿರುವ ದೇವರಕೊಂಡ ಇಷ್ಟು ದಿನ ಹುಡುಗರಿಗೆ ಮಾತ್ರ ಇದ್ದು ಈಗ ಹುಡುಗಿಯರಿಗೂ ತೆರೆಯುವ ನಿರ್ಧಾರ ಮಾಡಿದ್ದಾರೆ.

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ರಶ್ಮಿಕಾ ಮಂದಣ್ಣ ಕನ್ನಡ ಭಾಷೆ ಬಗ್ಗೆ ಕಾಮೆಂಟ್ ಮಾಡಿದ ಕಾರಣ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಕನ್ನಡ ಸಂಘಟನೆಗಳು ಅಡ್ಡಿ ಮಾಡಿದ್ದರೂ 5 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.