Asianet Suvarna News Asianet Suvarna News

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ಹಿಂದಿಯಲ್ಲೂ ಬರಲಿದೆ ‘ಡಿಯರ್ ಕಾಮ್ರೆಡ್’ | 6 ಕೋಟಿ ಮೊತ್ತಕ್ಕೆ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್ | ಸದ್ಯದಲ್ಲೇ ಸೆಟ್ಟೇರಲಿದೆ ‘ಡಿಯರ್ ಕಾಮ್ರೆಡ್’ 

Karan Johar shells out record breaking amount for Dear Comrade Hindi rights
Author
Bengaluru, First Published Jul 28, 2019, 12:55 PM IST
  • Facebook
  • Twitter
  • Whatsapp

ರಶ್ಮಿಕಾ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಕ್ಸಸ್ ಆಗಿದೆ. ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಕರಣ್  ಜೋಹರ್ ಹೇಳಿದ್ದರು. ಇದೀಗ ಕರಣ್ ಜೋಹರ್ 6 ಕೋಟಿಗೆ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು ಸೌತ್ ಇಂಡಸ್ಟ್ರಿಯಲ್ಲೇ ಹೈಯೆಸ್ಟ್ ಪೇಯ್ಡ್ ಸಿನಿಮಾವಾಗಿದೆ. 

‘ಡಿಯರ್ ಕಾಮ್ರೆಡ್’ ಮೊದಲ ದಿನವೇ ಭರ್ಜರಿ ಕಲೆಕ್ಷನ್

ತೆಲುಗಿನ ಅರ್ಜುನ್ ರೆಡ್ಡಿಯನ್ನು ಹಿಂದಿಗೆ ಕಬೀರ್ ಸಿಂಗ್ ಆಗಿ ರಿಮೇಕ್ ಮಾಡಿ ಸಕ್ಸಸ್ ಕಂಡಿದ್ದರು. ಇದರಿಂದ ಇನ್ನಷ್ಟು ಸ್ಫೂರ್ತಿ ಪಡೆದು ಡಿಯರ್ ಕಾಮ್ರೆಡನ್ನು ಖರೀದಿಸಿದ್ದಾರೆ. 

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ರೊಮ್ಯಾಂಟಿಕ್ ಫೋಟೋಗಳಿವು

ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯನ್ನು ಕರಣ್ ಶ್ಲಾಘಿಸಿದ್ದರು.  ಸ್ಟನ್ನಿಂಗ್ ಹಾಗೂ ಪವರ್ ಫುಲ್ ಲವ್ ಸ್ಟೋರಿ! ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆ ಕೂಡಾ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಹಿಂದಿಗೂ ಕೂಡಾ ಡಿಯರ್ ಕಾಮ್ರೆಡನ್ನು ರಿಮೇಕ್ ಮಾಡುವುದಾಗಿ ಹೇಳಿದ್ದರು’ 

 

Follow Us:
Download App:
  • android
  • ios