ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದ ಶಿವರಾಜ್‌ಕುಮಾರ್ ಅಭಿನಯದ 'ಓಂ' ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಬಾರಿ ಮರು ಬಿಡುಗಡೆಯಾದ ದಾಖಲೆ ಹೊಂದಿದೆ. 550ಕ್ಕೂ ಹೆಚ್ಚು ಬಾರಿ ಬಿಡುಗಡೆಯಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಈ ಚಿತ್ರದಲ್ಲಿ ನಿಜವಾದ ರೌಡಿಗಳು ನಟಿಸಿದ್ದರು.
ಬೆಂಗಳೂರು: ಎಲ್ಲಾ ಭಾಷೆಗಳ ಸಿನಿಮಾಗಳನ್ನು ಹಿಂದಕ್ಕಿ ಸ್ಯಾಂಡಲ್ವುಡ್ ಸಿನಿಮಾ ಇದಾಗಲೇ ಹಲವು ಕ್ಷೇತ್ರಗಳಲ್ಲಿ ದಾಖಲೆ ಮಾಡಿರುವುದು ಗೊತ್ತೇ ಇದೆ. ಕೆಲವೊಂದು ವಿಷಯದಲ್ಲಿ ಬಾಲಿವುಡ್ ಸಿನಿಮಾವನ್ನೂ ಮೀರಿ ದಾಖಲೆ ಮಾಡಿದ ಹೆಮ್ಮೆ ನಮ್ಮ ಕನ್ನಡದ್ದು. ಆದರೆ ಇಲ್ಲಿ ಹೇಳ್ತಿರೋದು ಒಂದು ವಿಶೇಷ ಸಿನಿಮಾ ಸ್ಟೋರಿ. ಇದು ದೇಶದ ಸಿನಿ ಇತಿಹಾಸದಲ್ಲೇ ಅತಿ ಹೆಚ್ಚು ಮರು ಬಿಡುಗಡೆಯ ದಾಖಲೆ ಬರೆದ ಸಿನಿಮಾ ಎನ್ನಿಸಿದೆ. ಇದು ಯಾವುದು ಎಂದು ಊಹಿಸಬಲ್ಲಿರಾ? ಒಂದು ಚಿಕ್ಕ ಕ್ಲೂ ಕೊಡುವುದಾದರೆ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ನಟ ಉಪೇಂದ್ರ. ಸಿನಿಮಾದಲ್ಲಿ ನಾಯಕನಾಗಿ ಶಿವರಾಜ್‌ಕುಮಾರ್ ಹಾಗೂ ನಾಯಕಿಯಾಗಿ ಪ್ರೇಮಾ ನಟಿಸಿದ್ದಾರೆ.
ನಿಜವಾದ ರೌಡಿಗಳಿಂದ ನಟನೆ
ಹೌದು. ಇಷ್ಟು ಹೇಳುತ್ತಿದ್ದಂತೆಯೇ ಸಿನಿ ಪ್ರಿಯರಿಗೆ ಇದ್ಯಾವ ಸಿನಿಮಾ ಎಂದು ತಿಳಿದೇ ಹೋಗಿರುತ್ತದೆ. ಅದೇ 1995ರಲ್ಲಿ ಬಿಡುಗಡೆಗೊಂಡ ಓಂ ಸಿನಿಮಾ. ಈ ಸಿನಿಮಾದ ವಿಶೇಷತೆಯೆಂದರೆ, ಕಥೆಯಲ್ಲಿ ನಟಿಸಲು ಕಾಲ್ಪನಿಕ ಪಾತ್ರಗಳಷ್ಟೇ ಅಲ್ಲದೆ ಬೆಂಗಳೂರಿನ ನಿಜಜೀವನದ ಅಂದಿನ ಭೂಗತ ಲೋಕದ ರೌಡಿಗಳನ್ನು ನೇರವಾಗಿ ನಟಿಸುವಂತೆ ಮಾಡಲಾಗಿತ್ತು, ಇದು ಈ ಸಿನಿಮಾದ ತಾಕತ್ತು!
ಡಾ ರಾಜ್ ಕುಟುಂಬದ, ಪಾರ್ವತಮ್ಮ ರಾಜ್‌ಕುಮಾರ್ ನೇತೃತ್ವದ 'ವಜ್ರೇಶ್ವರಿ' ಕಂಬೈನ್ಸ್' ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾ ಕೆಲವು ದಾಖಲೆ ಬರೆದಿದೆ. ಈ ಸಿನಿಮಾ ಸಿನಿ ವೀಕ್ಷಕರಲ್ಲಿ ಅದ್ಯಾವ ಪರಿಯಲ್ಲಿ ಹುಚ್ಚು ಹಿಡಿಸಿತ್ತು ಎಂದರೆ, ನಿರಂತರ ಅಭಿಮಾನಿಗಳ ಬೇಡಿಕೆಯಿಂದಾಗಿ ಬೆಂಗಳೂರಿನ ಕಪಾಲಿ ಸಿನಿಮಾದಂತಹ ಸ್ಥಳಗಳಲ್ಲಿ ಸತತವಾಗಿ ಡಜನ್‌ಗಟ್ಟಲೆ ಮರು ಪ್ರಸಾರಗಳು ನಡೆದವು. ದಶಕಗಳಲ್ಲಿ 550–650 ಕ್ಕೂ ಹೆಚ್ಚು ಬಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವಿವಿಧ ಚಲನಚಿತ್ರ ಸಂಗ್ರಹಗಳಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಸಿನಿಮಾ ಸ್ಟೋರಿ
ಐತಿಹಾಸಿಕ ಗ್ಯಾಂಗ್‌ಸ್ಟರ್ ಆಕ್ಷನ್ ಕ್ರೈಮ್ ಡ್ರಾಮಾ ಚಲನಚಿತ್ರ ಇದಾಗಿದೆ. ಕಥೆಯು ಒಬ್ಬ ಪತ್ರಕರ್ತೆ ಭೂಗತ ಲೋಕದ ರೌಡಿಗಳನ್ನು ಭೇಟಿ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಕಥೆಯ ಮುಖ್ಯಪಾತ್ರ ಸತ್ಯ (ಶಿವರಾಜ್‌ಕುಮಾರ್) ಒಬ್ಬ ದೇವಸ್ಥಾನದ ಅರ್ಚಕರ ಮಗ. ತನಗಾಯಿತು ತನ್ನ ಓದಾಯಿತು ಎಂದು ಪ್ರಾಮಾಣಿಕವಾಗಿ ಬದುಕುತ್ತಿದ್ದವನು. ಸತ್ಯ ಕಾಲೇಜಿನಲ್ಲಿ ಮಧು (ಪ್ರೇಮಾ) ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಮಧುಳ ಅಹಂಕಾರ ಮತ್ತು ಕೆಲವು ಅನಿರೀಕ್ಷಿತ ಘಟನೆಗಳಿಂದಾಗಿ ಸತ್ಯನ ಜೀವನ ಸಂಪೂರ್ಣ ತಿರುವು ಪಡೆಯುತ್ತದೆ. ಪ್ರೇಮಕ್ಕಾಗಿ ಮತ್ತು ಕೆಲವು ಸನ್ನಿವೇಶಗಳಿಂದಾಗಿ ಸತ್ಯ ರೌಡಿಯಾಗಿ ಮಾರ್ಪಟ್ಟು ಬೆಂಗಳೂರಿನ ಭೂಗತ ಜಗತ್ತಿಗೆ (ಅಂಡರ್‌ವರ್ಲ್ಡ್) ಕಾಲಿಡುತ್ತಾನೆ. ಅತ್ಯಂತ ಪ್ರಭಾವಶಾಲಿ ರೌಡಿಯಾಗಿ ಬೆಳೆಯುತ್ತಾನೆ.ಮುಂದೇನು ಎನ್ನುವುದು ರೋಚಕ ಟ್ವಿಸ್ಟ್.
ಈ ಸಿನಿಮಾದ ವಿಶೇಷತೆಯೆಂದರೆ, ಕಥೆಯಲ್ಲಿ ನಟಿಸಲು ಕಾಲ್ಪನಿಕ ಪಾತ್ರಗಳಷ್ಟೇ ಅಲ್ಲದೆ ಬೆಂಗಳೂರಿನ ನಿಜಜೀವನದ ಅಂದಿನ ಭೂಗತ ಲೋಕದ ರೌಡಿಗಳನ್ನು ನೇರವಾಗಿ ನಟಿಸುವಂತೆ ಮಾಡಲಾಗಿತ್ತು. ತಿ ಮತ್ತು ಹಿಂಸೆಯ ಹಾದಿ ಮನುಷ್ಯನ ಬದುಕನ್ನು ಹೇಗೆಲ್ಲಾ ಬದಲಾಯಿಸುತ್ತದೆ ಹಾಗೂ ರೌಡಿಸಂನಿಂದ ಹೊರಬರಲು ಸಾಧ್ಯವೇ ಎಂಬ ಭಾವನಾತ್ಮಕ ಹಾಗೂ ರಕ್ತಸಿಕ್ತಯತ್ತ ಸಾಗುವ ಕಥೆ ಈ ಚಿತ್ರದಲ್ಲಿದೆ.














