ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ನಟ ಉಪೇಂದ್ರ ಅವರು ಹುಟ್ಟು ಹಬ್ಬವನ್ನು ಬುಧವಾರ ಆಚರಿಸಿಕೊಂಡರು. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಅಭಿಮಾನಿಗಳು ಉಪೇಂದ್ರ ಅವರ ನಿವಾಸಕ್ಕೆ ತೆರಳಿ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದರು. ಉಪ್ಪಿ ಅವರ ಮನವಿಯಂತೆ ಸಾಕಷ್ಟುಮಂದಿ ಅಭಿಮಾನಿಗಳು ಗಿಡಗಳನ್ನು ತಂದು ಕೊಡುವ ಮೂಲಕ ಪರಿಸರ ಪ್ರೀತಿಯನ್ನು ತೋರಿದ್ದು, ಈ ಬಾರಿ ಉಪ್ಪಿ ಅವರ ಹುಟ್ಟು ಹಬ್ಬದ ವಿಶೇಷ ಎನ್ನಬಹುದು.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ಬುಧವಾರ ಬೆಳಗ್ಗಿನಿಂದಲೇ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ಅವರ ನಿವಾಸದ ಮುಂದೆ ಅಭಿಮಾನಿಗಳ ಜಾತ್ರೆಯಂತೆ ಕಂಡಿತು. ನಿರ್ಮಾರ್‍ಪಕರ ಸಂಘದ ಅಧ್ಯಕ್ಷ ಮುನಿರತ್ನ, ಟಿ ಆರ್‌ ಚಂದ್ರಶೇಖರ್‌, ತರುಣ್‌ ಶಿವಪ್ಪ ಹಾಗೂ ಸೌಂದರ್ಯ ಜಗದೀಶ್‌ ಹಾಗೂ ಅವರ ಪುತ್ರ ಮಾ.ಸ್ನೇಹಿತ್‌, ನಿರ್ದೇಶಕರಾದ ನವನೀತ್‌, ಜಯರಾಂ, ಆರ್‌ ಚಂದ್ರು ಸೇರಿದಂತೆ ಹಲವರು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ನಟ ಸುದೀಪ್‌, ತರುಣ್‌ ಸುಧೀರ್‌, ಸಂತೋಷ್‌ ಆನಂದ್‌ ರಾಮ್‌ ಸೇರಿದಂತೆ ಹಲವರು ಟ್ವಿಟ್ಟರ್‌ ಮೂಲಕ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ವಿಶೇಷ ಅಂದರೆ ಉಪೇಂದ್ರ ಅಭಿಮಾನಿ ಭದ್ರಾವತಿ ನಾಗ ಎಂಬುವವರು ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರುಪಾಯಿ ಚೆಕ್‌ ನೀಡುವ ಮೂಲಕ ವಿಶೇಷವಾಗಿ ಶುಭ ಕೋರಿದರು. ಕೆಲ ಅಭಿಮಾನಿಗಳು ಉಪೇಂದ್ರ ಅವರ ಹಳೆಯ ಚಿತ್ರಗಳ ಪೋಸ್ಟರ್‌, ಫೋಟೋಗಳನ್ನು ತಂದು ನೀಡುವ ಮೂಲಕ ಅಭಿಮಾನ ಮರೆದರು. ಅಭಿಮಾನಿಗಳು ತಂದಿದ್ದ ಗಿಡಗಳನ್ನು ತಾವೇ ಮುಂದೆ ನಿಂತು ಸ್ವೀಕರಿಸುವ ಮೂಲಕ ಉಪೇಂದ್ರ ಅವರು ಸಂಭ್ರಮಿಸಿದರು. ನಿರ್ದೇಶಕ ಲೋಕಿ, ನಟಿ ಪ್ರಿಯಾಂಕ ಉಪೇಂದ್ರ, ಉಪ್ಪಿ ಅಣ್ಣನ ಮಗ ನಟ ನಿರಂಜನ್‌ ಮುಂತಾದವರು ರಿಯಲ್‌ ಸ್ಟಾರ್‌ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.