ಬೆಂಗಳೂರು[ಸೆ. 18]  ಮೆಗಾ ಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಪೈಲ್ವಾನ್ ಕಿಚ್ಚ ಸುದೀಪ್ ಕಾಣಿಸಿಕೊಳ್ಳುತ್ತಿರುವುದು ಗೊತ್ತೆ ಇದೆ. ಚಿತ್ರದ ಟ್ರೇಲರ್ ಈಗಾಗಲೇ ಸದ್ದು ಮಾಡುತ್ತಿದೆ. ಅಕ್ಟೋಬರ್ 2 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ.

ಸಂದರ್ಶನವೊಂದರ ಸಮಯದಲ್ಲಿ ಪತ್ರಕರ್ತರೊಬ್ಬರು  ನೀವು ಚಿರಂಜೀವಿ ಅವರಿಂದ ಏನನ್ನು ಕಲಿತುಕೊಂಡಿರಿ ಎಂಬ ಒಂದು ವಿಚಾರ ರಿವೀಲ್ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್, ರಾಜಕಾರಣಕ್ಕೆ ಯಾವ ಕಾರಣಕ್ಕೂ ಪ್ರವೇಶ ಮಾಡಬಾರದು, ಆದ್ದರಿಂದ ನಾನು ಯಾವ ಕಾರಣಕ್ಕೂ ಪಾಲಿಟಿಕ್ಸ್ ಗೆ ಬರುವುದಿಲ್ಲ ಎಂದು ಹೇಳಿದರು.

ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು

ಮೆಗಾಸ್ಟಾರ್ ಚಿರಂಜೀವಿ ಅವರ ಅಮೂಲ್ಯ 10 ವರ್ಷಗಳನ್ನು ಹಾಳು ಮಾಡಿಕೊಂಡರು.  ಇದರಿಂದ ಸಹಜವಾಗಿ ಅವರ ಅಭಿಮಾನಿಗಳಿಗೂ ನಿರಾಸೆಯಾಯಿತು ಎಂದು ಸುದೀಪ್ ಹೇಳಿದ್ದಾರೆ.

ನಿಮ್ಮನ್ನು ಇಲ್ಲಿಯವರೆಗೆ ಯಾವುದಾದರೂ ರಾಜಕೀಯ ಪಕ್ಷಗಳು ಸಂಪರ್ಕಿಸಿದ್ದವೆ ಎಂಬ ಪ್ರಶ್ನೆಗೆ, ಹೌದು.. ರಾಜಕಾರಣ ಯಾವಾಗಲೂ ನನ್ನ ಸುತ್ತಲೇ ಇದೆ..ಸಿನಿಮಾ ರಂಗ ಅನ್ನುವುದು ಒಂದರ್ಥದಲ್ಲಿ ರಾಜಕಾರಣವೇ, ಎಲ್ಲರೂ ನಿಮ್ಮ ಸ್ನೇಹಿತರಂತೆಯೇ ಕಾಣುತ್ತಾರೆ. ಇದ್ದಕ್ಕಿದ್ದಂತೆ ನೀವು ಒಬ್ಬ ಅಪರಿಚಿತರಾಗಿ ಬಿಡುತ್ತೀರಿ.. ಯಾರು ಏನು ಮಾಡಿದರು ಎಂಬುದೇ ಗೊತ್ತಾಗುವುದಿಲ್ಲ ಎಂದು ಒಗಟಾಗಿ ಮಾತನಾಡಿದರು.