ಕಿರುತೆರೆ ಮೂಲಕ ಎಲ್ಲರ ಮನೆ ಮಂದಿಗೆ ಡ್ರೀಮ್ ಬಾಯ್ ಐಡಿಯಾ ಕೊಟ್ಟ ರಮಣ್ ತನ್ನ ರಿಯಲ್ ಲೈಫ್ ರಾಧಾ ಮಿಸ್ ಯಾರೆಂದು ಹೇಳಿಕೊಂಡಿದ್ದಾರೆ

ಪಾತ್ರದಲ್ಲಿ ಪರಕಾಯ ಪ್ರವೇಷ ಮಾಡಿದರೆ ಮಾತ್ರ ಈ ಗುಣನಾ ಅಥವಾ ನಿಜ ಜೀವನದಲ್ಲೂ ಹೀಗೆನಾ ಎಂದು ಯೋಚನೆ ಮಾಡುವವರು ತಪ್ಪದೆ ಉದಯ ಟಿವಿಯಲ್ಲಿ ಬರುವ ತುತ್ತಾಮುತ್ತಾ ಕಾರ್ಯಕ್ರಮ ನೋಡಲೇಬೇಕು.

ರೀಲ್ ಲೈಫ್ ರಮಣನ ಸ್ಕಂದ ಕತೆ ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸಿಂಗಲ್ ಲೈಫ್ ಗೆ ಗುಡ್ ಬೈ ಹೇಳಿದ ಸ್ಕಂದ ಮದುವೆಯಾಗಿದ್ದು ತನ್ನ ನೆಚ್ಚಿನ ಹುಡುಗಿಯನ್ನು. ಇವರಿಬ್ಬರ ನಡುವೆ ಹೇಗಪ್ಪಾ ಲವ್ ಆಯ್ತು ಅಂತಾನಾ?

ಎಷ್ಟೋ ಹೆಣ್ಣು ಮಕ್ಕಳ ಮನಸ್ಸು ಕದ್ದ ಈ ಪೋರ ಲವ್ ನಲ್ಲಿ ಬಿದ್ದಿದ್ದು ಮೌಂಟ್ ಕಾರ್ಮೆಲ್ ಕಾಲೇಜು ಹುಡುಗಿ ಶಿಕಾ ಜೊತೆ. ಇದು ನೆನ್ನೆ ಮೊನ್ನೆ ಲವ್ ಅಲ್ಲಾ. 5 ವರ್ಷದ ಕ್ಯೂಟ್ ಲವ್ ಸ್ಟೋರಿ. ಈ ಲವ್ ಮದುವೆವರೆಗೂ ಹೇಗೆ ಬಂತು ಅನ್ನೂದು ಶಿಕಾ ಅವರೆ ಹಂಚಿಕೊಂಡಿದ್ದಾರೆ

View post on Instagram

ಹುಡುಗರಿಗೆ ವಾಚ್ ಕೊಟ್ಟರೆ ಸದಾ ತನ್ನ ಕೈಯಲ್ಲಿ ಹಾಕಿಕೊಂಡಿರುತ್ತಾರೆ ಎಂದು ಶಿಕಾ ಕೊಡಾ ರಮಣಗೆ ವಾಚ್ ಗಿಫ್ಟ್ ಕೊಟಿದ್ದರು. ಆದ್ರೆ ಅದನ್ನು ಒಮ್ಮೆ ರಮಣ್ ಕಳೆದುಕೊಂಡಿದ್ರು. ಆದ್ರೆ ಅದು ಮತ್ತೆ ರಮಣ್ ಕೈ ಸೇರಿತು. ಅದು ಅವರ ಜೇಬಿನಲ್ಲೇ ಮರಳಿ ದೊರಕಿತು. ರಮಣ ಜೊತೆ ಕೆಲಸ ಮಾಡುತ್ತಿದ್ದ ಡೈರೆಕ್ಟರ್ ‘ಇದು ರುಣಾ ನೋಡಿ, ಮೇಡ್ ಫಾರ್ ಈಚ್ ಅದರ್’ ಎಂದರು ಎಂದು ರಮಣ್ ಹೇಳಿಕೊಂಡಿದ್ದಾರೆ. ಇದಕ್ಕೆ ನಿರಂಜನ್ ದೇಶಪಾಂಡೆ ಕಾಲೆಳೆದಿದ್ದು, ಇದೇ ನೋಡಿ ಗಂಡಸರಿಗೆ ತಾಳಿ ಕಟ್ಟೋದು ಅಂದ್ರೆ ಎಂದು ಹೇಳಿದ್ದಾರೆ.

'ತುತ್ತಾ ಮುತ್ತಾ' ಶೋ ಗಂಡಸರಿಗೆ ಕಷ್ಟ ಬಿಡಿ!

View post on Instagram