ಅತ್ತೆ-ಸೊಸೆ, ಗಂಡ-ಹೆಂಡತಿ, ಅಣ್ಣ-ತಂಗಿ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡಿಸೋ ರಿಯಾಲಿಟಿ ಶೋ ನೋಡಿದ್ದೇವೆ. ಆದರೆ, ಈ ಶೋನಲ್ಲಿ ಎಲ್ಲವುಕ್ಕಿಂತ ತುಸು ಡಿಫರೆಂಟ್. ಕಟ್ಟಿಕೊಂಡವಳನ್ನು ಸಮಾಧಾನ ಮಾಡುವುದೋ, ತುತ್ತು ನೀಡಿದವಳಿಗೆ ಫೇವರ್ ಆಗಿರುವುದೋ ಎಂಬ ಗೊಂದಲು ಇಲ್ಲಿಯೂ ಗಂಡನನ್ನು ಕಾಡಲಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ 'ತುತ್ತಾ-ಮುತ್ತಾ' ರಿಯಾಲಿಟಿ ಶೋ ಹೆಸರು ಮಾಡುತ್ತಿದೆ. ಹಿರಿತೆರೆ ಹಾಗೂ ಕಿರುತೆರೆ ಸ್ಟಾರ್‌ಗಳು ಇದರಲ್ಲಿ ಮಿಂಚುತ್ತಿದ್ದಾರೆ. ಅಷ್ಟಕ್ಕೂ ಇದರಲ್ಲಿ ಪೈಪೋಟಿ ನಡೆಯುವುದು ಮಡದಿ ಹಾಗೂ ಅಮ್ಮನ ನಡುವೆ ಎಂಬುವುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಶೋ ಅನ್ನು ಟಾಕಿಂಗ್ ಅ್ಯಂಡ್ ರಾಕಿಂಗ್ ನಿರಂಜನ್ ದೇಶಪಾಂಡೆ ನಿರೂಪಿಸುತ್ತಿದ್ದಾರೆ. ಒಂದು ಕಡೆ ಅಮ್ಮಂದಿರು ನಿಂತು ಉತ್ತರಿಸಿದರೆ, ಮತ್ತೊಂದೆಡೆ ಮಡದಿಯರು ನಿಂತು ಉತ್ತರಿಸುತ್ತಾರೆ. ಈ ಇಬ್ಬರ ನಡುವೆ ಗಂಡನಿರುತ್ತಾನೆ. 12 ಪ್ರಶ್ನೆಗಳಿದ್ದು, ಅವಕ್ಕೆ ಉತ್ತರಿಸಿದರೆ 12 ಲಕ್ಷ ರೂ. ಗೆಲ್ಲಬಹುದು. ಆದರೆ, ಅಪ್ಪಿ ತಪ್ಪಿ ತಪ್ಪು ಉತ್ತರಿಸಿದರೋ ನೆಗಟಿವ್ ಮಾರ್ಕ್ಸ್ ಇರಲಿದೆ. ಉತ್ತರ ತಪ್ಪಾದರೆ ಹಣ ಕಟ್ ಆಗುತ್ತದೆ.

ಈಗಾಗಲೇ ಇದರಲ್ಲಿ ಸಂಗೀತ ನಿರ್ದೇಶಕ ಗುರುಕಿರಣ, ಮಜಾ ಟಾಕೀಸ್ ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಈಗಾಗಲೇ ಈ ಶೋನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಆರಂಭವಾಗಿ, ಮೂರು ವಾರದೊಳಗೆ ಎಲ್ಲರ ಬಾಯಲ್ಲಿ ಇದರದ್ದೇ ಮಾತು. 

View post on Instagram