'ರಾಧ ರಮಣ'ದ ರಾಧಾ ಮಿಸ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ವಿಭಿನ್ನ ಕಥೆಯುಳ್ಳ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ರಾಧಾ ಅಲಿಯಾಸ್ ಶ್ವೇತಾ ಅವರು ನಿಜ ಜೀವನದಲ್ಲಿಯೂ ಬಿಂದಾಸ್ ಆಗಿರ್ತಾರೆ. ಅವರಿಗೆ ಪತಿ ಮೇಲಿರುವ ಪ್ರೀತಿಯನ್ನು ಪಬ್ಲಿಕ್‌ ಆಗಿ ಅಭಿವ್ಯಕ್ತಗೊಳಿಸಿದ್ದು, ಅವರ ಮೇಲಿನ ಪ್ರೀತಿ, ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

'ತುತ್ತಾ-ಮುತ್ತಾ' ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರೋ ರಿಯಾಲಿಟಿ ಶೋ. ಪತ್ನಿ ಹಾಗೂ ಅಮ್ಮನೊಂದಿಗೆ ಪಾಲ್ಗೊಳ್ಳುವ ಈ ಶೋ ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿದೆ. ಈ ಕಾರ್ಯಕ್ರಮದಲ್ಲಿ ಶ್ವೇತಾ ಪ್ರಸಾದ್ ತಮ್ಮ ಪತಿ ಆರ್‌ಜೆ ಪ್ರದೀಪ್ ಹಾಗೂ ಅತ್ತೆಯೊಂದಿಗೆ ಪಾಲ್ಗೊಂಡಿದ್ದರು.

ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಪ್ರದೀಪ್-ಶ್ವೇತಾ ಜೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬುವುದು ಪ್ರೋಮೋದಲ್ಲಿಯೇ ಅರ್ಥವಾಗುತ್ತದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ನಟನೆಯ 'ಎಕ್ಸ್‌ಕ್ಯೂಸ್ ಮೀ' ಚಿತ್ರದ ‘ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರೊ...?’ಹಾಡಿ ಪ್ರದೀಪ್ ಮೊಗದಲ್ಲಿ ನಗು ತಂದಿದ್ದಾರೆ. ಗಂಡನ ಮುಖದಲ್ಲಿ ಕಂಡ ಸಂತಸಕ್ಕೆ ಪಿಂಕ್ ಲಿಪ್‌ಸ್ಟಿಕ್ ಹಚ್ಕೊಂಡಿದ್ದ ಶ್ವೇತಾ ಎಲ್ಲರೆದುರೇ ಪತಿ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಮುತ್ತಿನ ಮಾರ್ಕ್ ಹಾಗೆಯೇ ಉಳಿದುಕೊಂಡಿದ್ದು, ಮತ್ತಷ್ಟು ರೊಮ್ಯಾಂಟಿಕ್ ಅನ್ಸುತ್ತೆ ಈ ಜೋಡಿ.

'ತುತ್ತಾ ಮುತ್ತಾ' ಶೋ ಗಂಡಸರಿಗೆ ಕಷ್ಟ ಬಿಡಿ!

ಅತ್ತೆ ಮುಂದೆಯೇ ಪತಿಗೆ 'ಮತ್ತೊಂದು ಹನಿಮೂನಿಗೆ ಹೋಗೋಣ..' ಎಂಬ ಬೇಡಿಕೆ ಇಡೋ ಮೂಲಕ 'ಅಬ್ಬಾ ಗಟ್ಟಿಗಿತ್ತಿ...' ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ತಕ್ಷಣವೇ ಪ್ರದೀಪ್, ಅಲ್ಲಿಯೇ ಕೂತಿದ್ದ ತಾಯಿ, ತಂಗಿಯನ್ನು ತೋರಿಸಿದ್ದಾರೆ. ಆದರೂ, 'ಇದಕ್ಕಿಂತ ಇನ್ನೇನು ಬೇಕು..' ಎಂದು ಪತಿ ದೇವರನ್ನು ತಬ್ಬಿ ಕೊಂಡಿದ್ದು, ಚೆಂದ ಎನಿಸುವಂತೆ ಮಾಡಿದೆ.

ಈ ಕಾರ್ಯಕ್ರಮ ಇದೇ ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.