ಮುಂಬೈ(ಏ. 30)   ವೀರ್ ದಿ ವೆಡ್ಡಿಂಗ್​' ಚಿತ್ರದಲ್ಲಿಯ ನಟಿ ಸ್ವರಾ ಭಾಸ್ಕರ್​ ಅವರ ಹಸ್ತಮೈಥುನದ ವಿಚಾರ ಈಗ ಮತಜಾಗೃತಿಗೆ ಬಳಕೆಯಾಗಿದೆ. 'ಚುನಾವಣೆ ಸ್ವರಾ ಭಾಸ್ಕರ್ ರೀತಿಯಲ್ಲ. ನಿಮ್ಮ ಬೆರಳನ್ನು ಬುದ್ಧಿವಂತಿಕೆಯಿಂದ ಬಳಸಿ, ವೋಟ್​ ಹಾಕಿ' ಎಂದು ಬರೆದ ಪ್ಲೇಕಾರ್ಡ್ಸ್ ಗಳು ರಾರಾಜಿಸಿವೆ.

ಬಾಲಿವುಡ್ ನಲ್ಲಿ ಸದ್ದು ಮಾಡಿದ್ದ ಚಿತ್ರದಲ್ಲಿ ಸ್ವರಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬ ವಿಚಾರವನ್ನೇ ಒಪ್ಪಿಕೊಳ್ಳಲು ಹಿಂಜರಿಯುವ ಕಾಲದಲ್ಲಿ ಅದನ್ನು ತೆರೆಯ ಮೇಲೆ ತೋರಿಸುವ ಸಾಹಸವನ್ನು ನಿರ್ದೇಶಕರು ಮಾಡಿದ್ದರು.

 ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

ಟ್ರೋಲ್ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವರಾ, ನನ್ನ ಹೆಸರು ಪ್ರಖ್ಯಾತಿಗೊಳಿಸಲು ತುಂಬಾ ಶ್ರಮ ವಹಿಸುತ್ತಿದ್ದಾರೆ ಎಂದು ಹಾರ್ಟ್​ ಸಿಂಬಲ್​ಗಳನ್ನು ನೀಡಿದ್ದಾರೆ.  ಒಟ್ಟಿನಲ್ಲಿ ಸ್ವರಾ ಭಾಸ್ಕರ್ ಹಸ್ತಮೈಥುನದ ವಿಚಾರ ಮತದಾನ ಜಾಗೃತಿ ಹೆಸರಿನಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ.