ನಿರ್ದೇಶಕ ಪ್ರೇಮ್ ತನ್ನ ಹೊಸ ಚಿತ್ರದ ಪ್ರಾಜೆಕ್ಟ್‌ಗೆ ಟಾಲಿವುಡ್‌ ಬಬ್ಲಿ ಗರ್ಲ್‌ ಸಾಯಿ ಪಲ್ಲವಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆ ತರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Add Asianetnews Kannada as a Preferred SourcegooglePreferred

ಬೇರೆ ಭಾಷೆಯ ಸಿನಿಮಾ ನಟ- ನಟಿಯರನ್ನು ಸ್ಯಾಂಡಲ್‌ವುಡ್‌ಗೆ ಕರೆ ತರುವುದರಲ್ಲಿ ಡೈರೆಕ್ಟರ್ ಪ್ರೇಮ್ ಫೇಮಸ್. ಯಾರನ್ನು ಮಿಸ್ ಮಾಡಿದ್ದೀರಾ ಪ್ರೇಮ್ ಅಂದ್ರೆ ಯಾರನ್ನ ಹೇಳುತ್ತಾರೋ ಎಂದು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ .

ಅದುವೇ 'ಪ್ರೇಮಂ' ಖ್ಯಾತಿಯ ನಟಿ ಸಾಯಿ ಪಲ್ಲವಿ. ಪ್ರೇಮ್ ಹೊಸದೊಂದು ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಅಂತೆ. ಸದ್ಯಕ್ಕೆ ನಟಿ ರಕ್ಷಿತಾ ಸಹೋದರನ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ.

105 ಮಿಲಿಯನ್ ಮುಟ್ಟಿದ ಸಾಯಿ ಪಲ್ಲವಿಯ 'ರೌಡಿ ಬೇಬಿ'!

ಪ್ರೇಮ್ ಬ್ಲಾಕ್ ಬಸ್ಟರ್ ಚಿತ್ರ ’ವಿಲನ್’ ನಲ್ಲಿ ನಟಿ ಆ್ಯಮಿ ಜ್ಯಾಕ್ಸನ್ ನನ್ನು ಕರೆ ತಂದಿದ್ದರು. ಅಷ್ಟೇ ಏಕೆ 'ಡಿಕೆ' ಚಿತ್ರದ ಐಟಂ ಹಾಡಿಗೆ ಸನ್ನಿ ಲಿಯೋನ್ ರನ್ನು ಕರೆ ತಂದಿದ್ದರು. ಇದೀಗ ಸಾಯಿ ಪಲ್ಲವಿಯನ್ನು ಕರೆ ತರಲಿದ್ದಾರೆ ಎನ್ನಲಾಗುತ್ತಿದೆ.