ಹೊಮ್ಲಿ ಹುಡುಗಿ ಸಾಯಿ ಪಲ್ಲವಿ, ಧನುಷ್ ಅಭಿನಯದ ಚಿತ್ರ ಮಾರಿ- 2 ಹಾಡು ಎಲ್ಲೆಡೆ ವೈರಲ್ ಆಗಿ 105 ಮಿಲಿಯನ್ ದಾಖಲೆ ಮಾಡಿದೆ.

ಮಾರಿ ಚಿತ್ರದಲ್ಲಿ ಧನುಷ್ ಹಾಗು ಕಾಜಲ್ ಅಗರ್ವಾಲ್ ಸಿಕ್ಕಾಪಟ್ಟೆ ಮೋಡಿ ಮಾಡಿದರು. ಇದೆ ನಿರೀಕ್ಷೆಯಲ್ಲಿ ಮಾರಿ 2 ಚಿತ್ರ ಅದಕ್ಕಿಂತ ಹಿಟ್ ತಂದು ಕೊಟ್ಟಿದೆ. ಮಾರಿ 2 ಚಿತ್ರ ಫೇಮಸ್ ಆಗಲು ಪ್ರಭುದೇವ್ ಡ್ಯಾನ್ಸ್ ಕೊರಿಯೊಗ್ರಫಿಯಲ್ಲಿ ಮೂಡಿ ಬಂದ ಸಾಂಗ್ 'ರೌಡಿ ಬೇಬಿ' ಕಾರಣ. ಪ್ರೇಮಮ್ ಚಿತ್ರದಲ್ಲಿ ಮಲರ್ ಪಾತ್ರ ಮಾಡಿದ ಸಾಯಿ ಪಲ್ಲವಿ ಹಾಡೊಂದಕ್ಕೆ ಫಾಸ್ಟ್ ಸ್ಟೆಪ್ ಹಾಕಿದ್ರು. ಅದೆ ರೀತಿ ಮತ್ತೆ ಕಮಾಲ್ ಮಾಡಿರುವುದು ರೌಡಿ ಬೇಬಿ ಸಾಂಗ್ ನಲ್ಲಿ.

ಚಿತ್ರ ಫ್ಲಾಪ್: ಅರ್ಧ ಸಂಭಾವನೆ ಮರಳಿಸಿದ ಮೊದಲ ನಟಿ!

ಸಾಯಿ ಪಲ್ಲವಿ ಎಲ್ಲಾ ಚಿತ್ರಗಳಲ್ಲೂ ಒಂದಾದ್ರೂ ಹಾಡು ಹಿಟ್ ಆಗುತ್ತೆ. ರಂಗಸ್ತಲಮ್ ಚಿತ್ರದಿಂದ ' ರಂಗಮ್ಮ ಮಂಗಮ್ಮ' , ಫಿದಾ ಚಿತ್ರದಿಂದ 'ವಚ್ಚಿಂದೇ' ಹಾಗು ಮಾರಿ-2 ಚಿತ್ರದಿಂದ 'ರೌಡಿ ಬೇಬಿ' ಹಿಟ್ ಹಾಡು ಎನಿಸಿಕೊಂಡಿವೆ.

ಈ ಸಂತಸವನ್ನು ನಟ ಧನುಷ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. " ಇದೊಂದು ಸ್ಪೆಷಲ್ ಫೀಲಿಂಗ್! ತುಂಬಾ ಹೆಮ್ಮ ಆಗುತ್ತಿದೆ, ಥ್ಯಾಂಕ್ಸ್ ಸಾಯಿ ಪಲ್ಲವಿ, ಪ್ರಭುದೇವ್ , ನಿರ್ದೇಶಕ ಬಾಲಾಜಿ" ಎಂದು ಎಂದು ಹಂಚಿಕೊಂಡಿದ್ದಾರೆ.

Scroll to load tweet…