Asianet Suvarna News Asianet Suvarna News

ಪುನೀತ್ ಅಭಿಮಾನಿಗಳಲ್ಲಿ ನಾನು ದೊಡ್ಡ ಅಭಿಮಾನಿ: ರಾಜ್‌ ಬಿ. ಶೆಟ್ಟಿ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಟೋಬಿ ಚಿತ್ರ ತಂಡ ಭರ್ಜರಿ ಪ್ರಮೋಷನ್‌ ನಡೆಸಿತು. ನಟ ರಾಜ್‌ ಬಿ. ಶೆಟ್ಟಿ ಅವರಿಗೆ ಬೈಕ್‌ ರಾರ‍ಯಲಿ ಮೂಲಕ ಸ್ವಾಗತ ಕೋರಲಾಯಿತು. ನಗರದ ಕಾಲೇಜು ರಸ್ತೆಯಿಂದ ಡಾ. ಪುನೀತ್‌ ರಾಜಕುಮಾರ್‌ ವೃತ್ತದ ವರೆಗೆ ಬೈಕ್‌ ರಾರ‍ಯಲಿ ನಡೆಯಿತು.

Toby Starrer Raj B Shetty Talks Over Puneeth Rajkumar gvd
Author
First Published Aug 21, 2023, 5:59 PM IST

ಹೊಸಪೇಟೆ (ಆ.21): ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಟೋಬಿ ಚಿತ್ರ ತಂಡ ಭರ್ಜರಿ ಪ್ರಮೋಷನ್‌ ನಡೆಸಿತು. ನಟ ರಾಜ್‌ ಬಿ. ಶೆಟ್ಟಿ ಅವರಿಗೆ ಬೈಕ್‌ ರಾರ‍ಯಲಿ ಮೂಲಕ ಸ್ವಾಗತ ಕೋರಲಾಯಿತು. ನಗರದ ಕಾಲೇಜು ರಸ್ತೆಯಿಂದ ಡಾ. ಪುನೀತ್‌ ರಾಜಕುಮಾರ್‌ ವೃತ್ತದ ವರೆಗೆ ಬೈಕ್‌ ರಾರ‍ಯಲಿ ನಡೆಯಿತು. ಡಾ. ಪುನೀತ್‌ ರಾಜಕುಮಾರ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಅದ್ಧೂರಿ ಸ್ವಾಗತವನ್ನು ಅಭಿಮಾನಿಗಳು ಕೋರಿದರು. ನಗರದಲ್ಲಿರುವ ಡಾ. ಪುನೀತ್‌ ರಾಜಕುಮಾರ್‌ ಪುತ್ಥಳಿಗೆ ನಟ ರಾಜ್‌ ಬಿ. ಶೆಟ್ಟಿ ಮಾಲಾರ್ಪಣೆ ಮಾಡಿದರು. ಕೇಸರಿ, ಬಿಳಿ, ಹಸಿರು ಬಣ್ಣದ ಮಾಲೆ ಮಾಲಾರ್ಪಣೆ ಮಾಡಿದರು. ಈ ವೇಳೆ ಡಾ. ಪುನೀತ್‌ ರಾಜಕುಮಾರ್‌ ಜತೆ ಇರುವ ಫೋಟೋವನ್ನು ಅಭಿಮಾನಿಗಳು ನೀಡಿದರು.

ಪುನೀತ್‌ ಅಭಿಮಾನಿಗಳಲ್ಲಿ ನಾನು ಒಬ್ಬ: ಈ ವೇಳೆ ಮಾತನಾಡಿದ ನಟ ರಾಜ್‌ ಬಿ. ಶೆಟ್ಟಿ, ಹೊಸಪೇಟೆ ಜನಕ್ಕೆ ನಾನು ಅಭಾರಿಯಾಗಿದ್ದೇನೆ. ಡಾ. ಪುನೀತ್‌ ರಾಜಕುಮಾರ್‌ ಅವರ ಅಚ್ಚುಮೆಚ್ಚಿನ ಊರಿದು, ಅವರ ಎಲ್ಲ ಚಿತ್ರಗಳನ್ನು ಬೆಳೆಸಿದವರು ನೀವು. ಯಾರು ಕೈ ಬಿಟ್ಟರೂ ಹೊಸಪೇಟೆ ಜನ ಕೈ ಬಿಡಲ್ಲ ಅಂದಿದ್ದರು. ಹೊಸಪೇಟೆ ಜನರಿಗೆ ನಾವು ಅಭಾರಿಯಾಗಿದ್ದೇವೆ ಎಂದರು. ಪುನೀತ್‌ ರಾಜಕುಮಾರ್‌ ಅವರ ಪುತ್ಥಳಿಯ ಕೈ ಹಿಡಿದರೆ ಇನ್ನೂ ಹಾಗೆ ಹಿಡಿದ ನೆನಪು ಬರುತ್ತಿದೆ. ನನ್ನ ಕೈ ಹಿಡಿದಿದ್ದು ನೆನಪಾಗುತ್ತದೆ. ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ನಮಗೆ ನೆನಪು ಇನ್ನೂ ಹಾಗೆ ಇದೆ ಎಂದರು.

ಟೋಬಿ ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡ ಕೆವಿಎನ್‌ ಪ್ರೊಡಕ್ಷನ್

ಟೋಬಿ 25ಕ್ಕೆ ತೆರೆಗೆ: ಕನ್ನಡ ಸಿನಿ ಲೋಕದಲ್ಲಿ ಹೊಸ ಛಾಪು ಮೂಡಿಸಿದ, ಗರುಡ ಗಮನ, ಒಂದು ಮೊಟ್ಟೆಯ ಕತೆ ಮೂಲಕ ಸಿನೆಮಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ರಾಜ್‌ ಬಿ.ಶೆಟ್ಟಿಅವರ ಹೊಸ ಚಲನಚಿತ್ರ ‘ಟೋಬಿ’ ಆ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೂಲಕ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಿನೆಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್‌ ಬಿ. ಶೆಟ್ಟಿ, ಗರುಡ ಗಮನ ಸಿನೆಮಾಕ್ಕೆ ಹೋಲಿಸಿದರೆ ‘ಟೋಬಿ’ ಚಿತ್ರಕ್ಕೆ ಹತ್ತು ಪಟ್ಟು ಹೆಚ್ಚು ಶ್ರಮ, ವೆಚ್ಚ ಮಾಡಿದ್ದೇವೆ. 40 ದಿನದ ಶೂಟಿಂಗ್‌ ನಡೆಸಿದ್ದೇವೆ. ಆದರೆ ಗರುಡ ಗಮನಕ್ಕೂ ಟೋಬಿ ಚಿತ್ರಕ್ಕೂ ಯಾವುದೇ ಸಾಮ್ಯತೆ ಇಲ್ಲ. ಲುಂಗಿ ಉಟ್ಟುಕೊಂಡಿರುವುದೊಂದು ಸಾಮ್ಯತೆ ಇದೆ ಎಂದರು.

ಟೋಬಿ ಒಂದು ಕೌಟುಂಬಿಕ ಬಾಂಧವ್ಯ ಇರುವ ಚಿತ್ರ ಎಂದಷ್ಟೇ ಸುಳಿವು ನೀಡಿದ ರಾಜ್‌ ಶೆಟ್ಟಿ, ಟೋಬಿ ಟ್ರೇಲರ್‌ ನೋಡಿದ ತೆಲುಗು, ತಮಿಳು ಚಿತ್ರ ವಿತರಕರು ಆ ಭಾಷೆಗಳಿಗೂ ಡಬ್‌ ಮಾಡುವಂತೆ ಕೋರಿದ್ದಾರೆ. ಕನ್ನಡಿಗರ ಪ್ರತಿಕ್ರಿಯೆ ಹೇಗಿಗೆ ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ನಿರ್ಮಾಪಕ ರವಿ ರೈ ಕಳಸ ಮಾತನಾಡಿ, ಟೋಬಿ ಸಿನೆಮಾ ಅತ್ಯಂತ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಜನರು ಸ್ವೀಕರಿಸುವ ನಂಬಿಕೆಯಿದೆ ಎಂದರು. ಇನ್ನೋರ್ವ ನಟ ರಾಜ್‌ ದೀಪಕ್‌ ರೈ ಮಾತನಾಡಿ, ಹೆಚ್ಚಿನ ಚಿತ್ರಗಳಲ್ಲಿ ಒಂದೇ ರೀತಿಯ ಪಾತ್ರಗಳು ಸಿಗುತ್ತಿದ್ದವು. ಟೋಬಿಯಲ್ಲಿ ಸಿಕ್ಕ ಪಾತ್ರ ಅತ್ಯಂತ ಖುಷಿ ನೀಡಿದೆ, ಡಿಫರೆಂಟ್‌ ಆಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ 'ಟೋಬಿ'ಯ ರಕ್ತ- ಸಿಕ್ತ ಅವತಾರ ಫುಲ್ ವೈರಲ್: ಪಾತ್ರದ ಬಗ್ಗೆ ರಾಜ್.ಬಿ.ಶೆಟ್ಟಿ ಹೇಳಿದ್ದೇನು?

ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ ದೊಡ್ಡ ಅಭಿಮಾನಿ. ಬರೀ ಕರಾವಳಿ ಹುಡುಗರು ಅಷ್ಟೇ ಅಲ್ಲ, ಹೊಸಪೇಟೆ, ಬಳ್ಳಾರಿ ಹುಡುಗರು ಕೂಡ ಬಂದು ಸಿನಿಮಾ ಮಾಡಬೇಕು. ಈ ಭಾಗದ ಕಥೆಗಳನ್ನು ಸಿನಿಮಾ ಮಾಡಬೇಕಿದೆ. ಆ. 25ಕ್ಕೆ ನಮ್ಮ ಸಿನಿಮಾ ರಿಲೀಸ್‌ ಆಗುತ್ತದೆ. ನೋಡಿ ಪ್ರೋತ್ಸಾಹಿಸಿ.
ರಾಜ್‌ ಬಿ. ಶೆಟ್ಟಿ, ನಟ

Follow Us:
Download App:
  • android
  • ios