ಸಾಮಾಜಿಕ ಜಾಲತಾಣದಲ್ಲಿ 'ಟೋಬಿ'ಯ ರಕ್ತ- ಸಿಕ್ತ ಅವತಾರ ಫುಲ್ ವೈರಲ್: ಪಾತ್ರದ ಬಗ್ಗೆ ರಾಜ್.ಬಿ.ಶೆಟ್ಟಿ ಹೇಳಿದ್ದೇನು?
ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾದ ಹವಾ ಜೋರಾಗಿದೆ. ಬಹು ಕೋಟಿ ವೆಚ್ಚದ ಈ ಚಿತ್ರದ ನಾಯಕನ ಫಸ್ಟ್ ಲುಕ್ ವೈರಲ್ ಆಗಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾ ತುಂಬ ಧೂಳೆಬ್ಬಿಸುತ್ತಿದೆ.
ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾದ ಹವಾ ಜೋರಾಗಿದೆ. ಬಹು ಕೋಟಿ ವೆಚ್ಚದ ಈ ಚಿತ್ರದ ನಾಯಕನ ಫಸ್ಟ್ ಲುಕ್ ವೈರಲ್ ಆಗಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾ ತುಂಬ ಧೂಳೆಬ್ಬಿಸುತ್ತಿದೆ. ಪೋಸ್ಟರ್‌ನಲ್ಲಿ ರಾಜ್ ಬಿ ಶೆಟ್ಟಿಯವರು ಮೂಗುತಿ ಹಾಕಿಕೊಂಡು, ಕೂದಲು ಹಾಗೂ ಗಡ್ಡಧಾರಿಯ ಭಯಂಕರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ನ ಹಿಂದೆ ಮಿಸ್ಸಿಂಗ್ ಎಂಬ tagline ಸಹ ಇದೆ. ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಜೂನ್ 29ರ ಸಂಜೆ, ಬೆಂಗಳೂರಿನ ರಾಜಾಜಿನಗರದಲ್ಲಿರುವ ಲುಲು ಮಾಲ್‌ನಲ್ಲಿ ರಿಲೀಸ್ ಮಾಡಲಾಯಿತು.
ಚಿತ್ರದ ನಾಯಕ ನಟ ಹಾಗೂ ಕಥೆಗಾರ ರಾಜ್ ಬಿ ಶೆಟ್ಟಿ ಮಾತನಾಡಿ, ಸಿನಿಮಾವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ನಿರ್ಮಾಣ ಮಾಡಿದ್ದೇವೆ. ತಾಂತ್ರಿಕವಾಗಿ ಅತ್ಯಂತ ಇಷ್ಟವಾದ ಸಿನಿಮಾ ಇದು. ಚಿತ್ರದ ಪೋಸ್ಟರ್‌ಗೆ ಈಗಾಗಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಮ್ಮ ಪ್ರೀತಿ ಧನ್ಯವಾದ. ನನ್ನ ಪಾತ್ರ, ಟೋಬಿ, ಚಿತ್ರದ ಮಧ್ಯದಲ್ಲಿ ಬರುವ ಪಾತ್ರ ಎಂದು ಹೇಳಿ ಮುಗಿಸಿದರು.
ರುದ್ರ ಭಯಂಕರ ರಾಜ್ ಬಿ ಶೆಟ್ಟಿ: ಟೋಬಿ ಫಸ್ಟ್ ಲುಕ್
ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ, ಈ ಸಿನಿಮಾ, ತಾಂತ್ರಿಕವಾಗಿ ಅತ್ಯದ್ಭುತವಾಗಿ ನಿರ್ಮಾಣಗೊಂಡಿದೆ. ಚಿತ್ರತಂಡಕ್ಕೆ ಹಾಗೂ ರಾಜ್ ಬಿ ಶೆಟ್ಟಿಯವರಿಗೆ ನನ್ನನ್ನು ಆರಿಸಿದ್ದಕ್ಕೆ ಚಿರಋಣಿ ಎಂದು ಚೈತ್ರಾ ಆಚಾರ್ ತಿಳಿಸಿದರು. ಸಂಯುಕ್ತಾ ಹೊರನಾಡ್ ಮಾತನಾಡಿ, ನನ್ನ ಪಾತ್ರದ ಹೆಸರು ಸಾವಿತ್ರಿ , ಸಿನಿಮಾದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾ ಒಂದು ಮೈಲಿಗಲ್ಲು ನಿರ್ಮಾಣ ಮಾಡುವುದರಲ್ಲಿ ಸಂದೇಹ ಇಲ್ಲ ಎಂದು ಹೇಳಿದರು.
ಚಿತ್ರದ ಸಂಭಾಷಣೆ ಬರೆದಿರುವ, ದಯಾನಂದ್ ಮಾತನಾಡಿ ಆಗಸ್ಟ್ 25 ರಂದು ಟೋಬೀ ಎಂಬ ಮನುಷ್ಯ, ಜಗತ್ತನ್ನು ಹೀಗೆ ಕಾಡ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ ಎಂದು ಹೇಳಿದರು. ಸಮಾರಂಭದಲ್ಲಿ ಚಿತ್ರ ತಂಡದ ಕಲಾವಿದರಾದ ಚೈತ್ರಾ ಆಚಾರ್, ಗೋಪಿಕೃಷ್ಣ ದೇಶಪಾಂಡೆ, ಸಂಯುಕ್ತಾ ಹೊರನಾಡ್, ನಿರ್ದೇಶಕರಾದ ಬೇಸಿಲ್ alchalkal ಜೊತೆಗೆ, ಸಂಗೀತ ನಿರ್ದೇಶಕರಾದ ಮಿ ಮುಕುಂದನ್ ಮತ್ತಿತರರು ಉಪ್ಥಿತರಿದ್ದರು.
Toby: ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ 'ಟೋಬಿ', ನಟನೆ ಜೊತೆಗೆ ನಿರ್ದೇಶನ
ಗೋಪಿಕೃಷ್ಣ ದೇಶಪಾಂಡೆ ಮಾತನಾಡಿ, ಈ ಚಿತ್ರದಲ್ಲಿನ ಎರಡು ಪಾತ್ರಗಳು, ಬಹುಶಃ ನಿಮಗೆ ಮುಂದಿನ 10 ವರ್ಷಗಳ ತನಕ ನೆನಪಿನಲ್ಲಿ ಉಳಿಯುತ್ತವೆ ಎಂದು ಪ್ರೇಕ್ಷಕರ ಕುತೂಹಲ ಕೆರಳಿಸಿದರು. ರಾಜ್ ಬಿ ಶೆಟ್ರ ಈ ಚಿತ್ರಕ್ಕೆ ದೊಡ್ಡ ಬಂಡವಾಳವೇ ಹೂಡಲಾಗಿದೆ.10 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿದೆ. ಇದೇ ಆಗಸ್ಟ್-25 ರಂದು ಸಿನಿಮಾ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ಇದರ ಹೊರತಾಗಿ 29 ರಂದು ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿದೆ.