ಬೆಂಗಳೂರು[ಜೂ.11]: ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲವಾಗುತ್ತಿದ್ದು ಮತ್ತಿಬ್ಬರು ನಟಿಯರು ಫಿಟ್ನೆಸ್ ಸಾಭೀತು ಮಾಡಿದ್ದಾರೆ. ’ಮಫ್ತಿ’, ಶ್ರೀಮನ್ ನಾರಾಯಣ ಚಿತ್ರದ ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಸವಾಲು ಸ್ವೀಕರಿಸಿ ಜೈ ಎಂದಿದ್ದಾರೆ.

ಹೌದು, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ದೇಶದ ಅಸಂಖ್ಯಾತ ಮಂದಿ ಫಿಟ್ನೆಸ್ ಸಾಭೀತು ಪಡಿಸುತ್ತಿದ್ದಾರೆ.

ಇದೀಗ ಶಾನ್ವಿ ಶ್ರೀವಾತ್ಸವ್ ಫಿಟ್ನೆಸ್ ಸಾಭೀತು ಪಡಿಸಿ ರಶ್ಮಿಕ ಮಂದಣ್ಣ, ಮನೋಜ್ ರವಿಚಂದ್ರನ್ ಅವರಿಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ.

ಇನ್ನು ಮತ್ತೋರ್ವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಸಾಭೀತು ಪಡಿಸಿದ್ದು ಹೀಗೆ...