ನಟಿ ಮತ್ತು ರಾಜಕಾರಣಿ ಸುಮಲತಾ ಅಂಬರೀಷ್ ಅವರ ತಂದೆ ವಿ ಮದನ್ ಮೋಹನ್ ಅವರು ಆಗಿನ ಕಾಲದ ಖ್ಯಾತ ಸ್ಪೆಷಲ್ ಎಫೆಕ್ಟ್ಸ್ ಪರಿಣತರಾಗಿದ್ದರು. ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆದಿದ್ದ ಇವರು ಅನೇಕ ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಆಸಕ್ತಿದಾಯಕ ವಿಚಾರ ಇದೀಗ ವೈರಲ್ ಆಗುತ್ತಿದೆ.

ಬೆಂಗಳೂರು: ಬಹುಭಾಷಾ ನಟಿ ಸುಲಮತಾ ಅಂಬರೀಷ್​ ಸದ್ಯ ನಟನೆಯಿಂದ ದೂರವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತೆಲುಗು , ಮಲಯಾಳಂ ಮತ್ತು ಕನ್ನಡದಲ್ಲಿ , ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಸ್ಯಾಂಡಲ್​ವುಡ್​ ತಾರೆ ಎಂದೇ. ಅದರಲ್ಲಿಯೂ ಇವರು ಮತ್ತು ನಟ ಅಂಬರೀಷ್​ ಅವರ ಜೋಡಿಯ ಚಿತ್ರಗಳು ಸೂಪರ್​ಹಿಟ್​ ಎನ್ನಿಸಿಕೊಂಡಿದ್ದು ಇದೆ. 63 ವರ್ಷವಾದರೂ ಇಂದಿಗೂ ಸಕತ್​ ಆ್ಯಕ್ಟೀವ್​ ಆಗಿರುವ ಸುಮಲತಾ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ನಿರ್ಮಿಸಿದ ತಾರೆ. ಆದರೂ ಅವರ ಹೆಸರು ಬಂದಾಗಲೆಲ್ಲಾ ಹೆಚ್ಚಾಗಿ ಜನ ಗುರುತಿಸುವುದು ನಟಿಯೆಂದೇ.

ಅಷ್ಟಕ್ಕೂ ಹಲವರಿಗೆ ತಿಳಿಯದ ಕುತೂಹಲದ ಅಂಶವೊಂದಿದೆ. ಅದೇನೆಂದರೆ, ಸುಮಲತಾ ಅವರಿಗೆ ನಟನೆ ಬಂದದ್ದು ರಕ್ತಗತವಾಗಿ. ಅವರ ತಂದೆ ಖ್ಯಾತ ನಟರಾಗಿದ್ದರು. ಹೀಗೆ ಹೇಳಿದಾಗ ಹಲವರಿಗೆ ಅಚ್ಚರಿಯಾಗಬಹುದು. ಸದ್ಯ ಇವರ ಮಗ ಅಭಿಷೇಕ್​ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ, ಸುಮಲತಾ ಅವರ ತಂದೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅಷ್ಟಕ್ಕೂ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿರೋ ಸುಮಲತಾ ಅವರ ಮೂಲ ಆಂಧ್ರಪ್ರದೇಶ. ಅಂದರೆ ಅವರ ಅಪ್ಪ-ಅಮ್ಮ ಆಂಧ್ರ ಪ್ರದೇಶದವರು. ಕೆಲ ವರ್ಷಗಳ ಹಿಂದೆ ಸುಮಲತಾ ಅವರು ತಮ್ಮ ಫ್ಯಾಮಿಲಿಯ ಬಗ್ಗೆ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಫ್ಯಾಮಿಲಿ ವಿಷಯವನ್ನು ಹೇಳಿದ್ದರು. ಅದರ ಬಗ್ಗೆ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ವಿಎಫ್​ಎಕ್ಸ್​ ಕಲಿತ ಮೊದಲಿಗ

ಸುಮಲತಾ ಅಂಬರೀಷ್​ ಅವರಿಗೆ ಸಹೋದರ ಮತ್ತು ಸಹೋದರಿ ಇದ್ದಾರೆ. ಅವರ ತಂದೆ ಹೆಸರು ವಿ ಮದನ್ ಮೋಹನ್. ಅವರು, ಆಗಿನ ಕಾಲಕ್ಕೆ ಸಿನಿಮಾದಲ್ಲಿನ ದೊಡ್ಡ ಎಂದು ಗುರುತಿಸಿಕೊಂಡವರು. ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಲನಚಿತ್ರ ತಂತ್ರಜ್ಞರಾಗಿದ್ದರು. ಆಗಿನ ಕಾಲದಲ್ಲಿ ಸಿನಿಮಾದಲ್ಲಿ ಬಳಕೆಯಾಗುವ ಸ್ಪೆಷಲ್ ಎಫೆಕ್ಟ್ಸ್ ಪರಿಣತರಾಗಿದ್ದರು ಮದನ್​ ಮೋಹನ್​. ಇಂದಿನ ವಿಎಫ್ಎಕ್ಸ್, ಸಿ.ಜಿ ಕೆಲಸಗಳನ್ನ ಆಗ ಸ್ಪೆಷಲ್ ಎಫೆಕ್ಟ್ ಎನ್ನುತ್ತಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್​ನಲ್ಲಿ ತರಬೇತಿ ಪಡೆದು ಬಂದಿದ್ದ ಭಾರತದ ಏಕೈಕ ವ್ಯಕ್ತಿಯಾಗಿದ್ದರು ಸುಮಲತಾ ತಂದೆ! ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡ್ತಿದ್ದರು. ಹಿಂದಿ, ತಮಿಳು ಅನೇಕ ಚಿತ್ರಗಳಲ್ಲಿ ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ ಮಾಡಿದ್ದಾರೆ ಇವರು.

ಸುಮಲತಾ ಅವರಿಗೆ ಏಳು ವರ್ಷ ಇದ್ದಾಗ ಅವರ ತಂದೆ ತೀರಿಕೊಂಡರು. ಮಕ್ಕಳನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮದನ್ ಅವರು, ಕುಟುಂಬಕ್ಕೆ ಮತ್ತು ಮಕ್ಕಳಿಗೆ ಹೆಚ್ಚು ಸಮಯ ಕೊಡುತ್ತಿದ್ದ ಬಗ್ಗೆ ನಟಿ ಹೇಳಿಕೊಂಡಿದ್ದರು. ಸಂಗೀತ ಎಂದರೆ ತುಂಬಾ ಇಷ್ಟ. ಫೋಟೋಗ್ರಫಿ ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಸುಮಲತಾ ಹೇಳಿದ್ದರು. ಆರ್.ಕೆ ಸ್ಟುಡಿಯೋ ಪಕ್ಕದಲ್ಲಿ ಇದ್ದಿದ್ದು ಬಾಂಬೆಯಲ್ಲಿ ನೆಲೆಸಿದ್ದಾಗ ಪ್ರಸಾದ್ ಲ್ಯಾಬ್ ನಲ್ಲಿ ಮದನ್ ಮೋಹನ್ ಕೆಲಸ ಮಾಡುತ್ತಿದ್ದರು. ಆರ್.ಕೆ ಸ್ಟುಡಿಯೋ ಪಕ್ಕದಲ್ಲೇ ಕಾಲೋನಿ ಇದ್ದ ಕಾರಣ ಬಾಲಿವುಡ್ ನಟರಾದ ರಿಷಿ ಕಪೂರ್, ಅನೀಲ್ ಕಪೂರ್ ಪಕ್ಕದಲ್ಲಿ ಕ್ರಿಕೆಟ್ ಆಡ್ತಿದ್ರು. ಸುಮಲತಾ ಅವರ ಮನೆಗೂ ಬಾಲಿವುಡ್ ನ ಕೆಲವು ಸಂಗೀತ ನಿರ್ದೇಶಕರು, ಇಂಡಸ್ಟ್ರಿಯವರು ಹೋಗುತ್ತಿದ್ದ ಬಗ್ಗೆ ಹೇಳಿದ್ದಾರೆ.