ಬಾಗಲಕೋಟೆಯ ಜಿಲ್ಲೆ ಕಡಪಹಳ್ಳಿಯ ರೈತನ ಮಗಳಾಗಿ ಹುಟ್ಟಿ ಟಿವಿ ಪರದೆ ಮೇಲೆ ತಮ್ಮದೇ ಶೈಲಿಯಲ್ಲಿ ಮಿಂಚು ಹರಿಸಿದ್ದ ಸೋನು ಪಾಟೀಲ್, ಈ ವಾರದ ಎಲಿಮಿನೇಟ್ ನಲ್ಲಿ ಸೋನು ಪಾಟೀಲ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.

 ಈ ಮೂಲಕ ಬಿಗ್​ ಬಾಸ್​ ಸೀಜನ್ -6ನ 7ನೇ ವಿಕೆಟ್ ಪತನವಾಗಿದೆ. ಬಿಗ್ ಬಾಸ್​​ ಸಿಜನ್-6ರಲ್ಲಿ ಮೊದಲ ಕಂಟೆಸ್ಟೆಂಟ್​​ ಆಗಿ ಪ್ರವೇಶ ಮಾಡಿದ್ದರು.

'ಬಿಗ್ ಬಾಸ್' ಸ್ಪರ್ಧಿ ಸೋನು ಪಾಟೀಲ್ ಯಾರು?

‘ಕಿತ್ತೂರು ರಾಣಿ ಚೆನ್ನಮ್ಮ’, ‘ಒನಕೆ ಓಬವ್ವ’, ‘ಆಟಂ ಬಾಂಬು’ ಅಂತೆಲ್ಲಾ ಹೇಳಿಕೊಂಡು ಬಿಗ್ ಬಾಸ್ ಮನೆಯೊಳಗೆ ಸೋನು ಕಾಲಿಟ್ಟಿದ್ದರು. ವೀಕ್ಷಕರನ್ನ ಹಾಗೂ ಸಹ ಸ್ಪರ್ಧಿಗಳನ್ನ ಭಾವನಾತ್ಮಕವಾಗಿ ಸೆಳೆಯಲು ಯತ್ನಿಸುತ್ತಿದ್ದ ಸೋನು ಪಾಟೀಲ್​ಗೆ ಬಿಗ್​ ಬಾಸ್​ ಮನೆಯಲ್ಲಿಯೇ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದರು. 

ಗಾಂಧಾರಿ, ಅಮೃತ ವರ್ಷಿಣಿ, ಶ್ರೀಮಾನ್ ಶ್ರೀಮತಿ, ಮೊಗ್ಗಿನ ಮನಸ್ಸು ಮುಂತಾದ ಧಾರಾವಾಹಿಗಳಲ್ಲಿ ಪಾತ್ರ ಮಾಡಿಯೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಂಚಾರಿ ವಿಜಯ್ ಜೊತೆ 'ಕೊಟ್ಟೂರೇಶ್ವರ ಮಹಾತ್ಮೆ' ಚಿತ್ರದಲ್ಲಿಯೂ ನಟಿಸಿದ್ದಾರೆ.

ಒಟ್ಟಿನಲ್ಲಿ ಧಾರವಾಹಿಗಳ ಮೂಲಕ ಪರಿಚಿರಾಗಿದ್ದ ಸೋನು ಈಗ ಬಿಗ್ ಬಾಸ್ ಮೂಲಕ ಚಿರಪರಿಚಿತರಾಗಿರುವುದಂತೂ ನಿಜ.