ನೋವಿನಲ್ಲೂ ನಲಿವಿನಲ್ಲೂ ವೇದಿಕೆಯಲ್ಲೂ, ಮನೆಯಲ್ಲೂ ಹಾಗೂ ಆಸ್ಪತ್ರೆಯಲ್ಲೂ ಎಲ್ಲೇ ಇರಲಿ, ಗಾಯಕ ಸೋನು ನಿಗಮ್ ಅವರಿಗೆ ಸಂಗೀತವೇ ಉಸಿರು, ಸಂಗೀತವೇ ಬದುಕು. ಈ ವಿಡಿಯೋ ಮೂಲಕ ಜಗತ್ತು ಈ ಗಾಯಕನ ಬಗ್ಗೆ ಕಂಡುಕೊಂಡ ಸತ್ಯವೇನು? ಈ ಸ್ಟೋರಿ ನೋಡಿ..

Singer Sonu Nigam-Sonu Nigam surgery- Impromptu performance- Singing in pain: ಆಸ್ಪತ್ರೆಯ ಐಸಿಯು ಬೆಡ್‌ ಮೇಲೆ ಹಾಡಿದ ಸೋನು ನಿಗಮ್ ವಿಡಿಯೋ ವೈರಲ್!

ಭಾರತದ ಜಗತ್ಪ್ರಸಿದ್ಧ ಗಾಯಕ ಸೋನು ನಿಗಮ್ (Sonu Nigam) ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಹಾಡುತ್ತಿದ್ದಾರೆ. ಆದರೆ ಎಂಥಹ ಸಮಯದಲ್ಲಿ ಹಾಡುತ್ತಿದ್ದಾರೆ ಗೊತ್ತಾ? ಆಸ್ಪತ್ರೆಯ ಬೆಡ್ ಒಂದರಲ್ಲಿ ಮಲಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವಾಗ ಅವರು ಕಣ್ಣುಮುಚ್ಚಿಕೊಂಡು ತದೇಕಚಿತ್ತದಿಂದ ಹಾಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ವೈದ್ಯರು ಅವರ ಕೆಲಸವನ್ನು ಮಾಡುತ್ತಿರುವಾಗ ಈ ಗಾಯಕ ತಮ್ಮ ಕೆಲಸವನ್ನು, ಕೆಲಸ ಎನ್ನುವುದಕ್ಕಿಂತ ತಮ್ಮತನವನ್ನು ಪ್ರದರ್ಶಿಸುತ್ತಿದ್ದಾರೆ. ಅಂತಹ ನೋವಿನಲ್ಲೂ ಹಾಡುತ್ತಿರುವ ಸೋನು ನಿಗಂ ಅವರನ್ನು ನೋಡಿ ಮೆಚ್ಚಿಕೊಂಡಿರುವ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ.

'ನನ್ನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರೀತಿಯ ಡಾ. ನಿಲೇಶ್ ಸತ್ಭಾಯ್ ಮತ್ತು ಅವರ ತಂಡಕ್ಕಾಗಿ ನೀಡಿದ ಒಂದು ಅನಿರೀಕ್ಷಿತ ಪ್ರದರ್ಶನ. ನೋವಿನಲ್ಲೂ ಗಾಯನ.. ಸಂಗೀತದ ಆನಂದ..' ಎಂದು ಗಾಯಕ ಸೋನು ನಿಗಮ್ ಅವರು ಸ್ವತಃ ಬರೆಸಿ ಪೋಸ್ಟ್‌ ಮಾಡಿಸಿಕೊಂಡಿದ್ದಾರೆ. ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ.

ಪ್ರಸಿದ್ಧ ಗಾಯಕ ಸೋನು ನಿಗಮ್ ಅವರಿಗೆ ಯಾವುದೇ ಗಂಭೀರವಾದ ಶಸ್ತ್ರಚಿಕಿತ್ಸೆ (Surgery) ನಡೆದಿಲ್ಲ. ಇತ್ತೀಚೆಗೆ ಅವರು ನರಗಳ ದೌರ್ಬಲ್ಯ ಅಥವಾ ಸೆಣಿತದ ಸಮಸ್ಯೆಯಿಂದ (Pinched Nerves) ಬಳಲುತ್ತಿದ್ದು, ಎಂಆರ್‌ಐ ಸ್ಕ್ಯಾನ್, ಔಷಧಿಗಳು ಹಾಗೂ ಫಿಸಿಯೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಸ್ವತಃ ಅವರೇ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಅವರ ಕಾಲುಗಳಿಗೆ ಸಂಬಂಧಿಸಿದಂತೆ ಅಥವಾ ಇತ್ತೀಚಿನ ನರಗಳ ನೋವಿನ ಚಿಕಿತ್ಸೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ಹರಿದಾಡಿದ್ದರೂ, ಪ್ರಸ್ತುತ ಅವರು ಯಾವುದೇ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಅದೇನಿದ್ದರೂ ಸಣ್ಣಪುಟ್ಟ ಸಮಸ್ಯೆಗೆ ತೆಗೆದುಕೊಂಡ ಟ್ರೀಟ್‌ಮೆಂಟ್ ಅಷ್ಟೇ.. ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆ ನಡೆದಿದ್ದರೆ, ಅವರಿಗೆ ಅನಸ್ತೇಶಿಯಾ ಕೊಟ್ಟಿರುತ್ತಿದ್ದರು. ಆಗ ಪ್ರಜ್ಞೆ ಕಳೆದುಕೊಂಡಿರುತ್ತಿದ್ದ ಗಾಯಕ ಹಾಡುವುದಾದರೂ ಹೇಗೆ?

ಗಾಯಕ ಸೋನು ನಿಗಮ್ ಅವರಿಗೆ ಇರುವ ಆರೋಗ್ಯದ ಪ್ರಮುಖ ವಿವರಗಳು:-

ಸಮಸ್ಯೆ: ನರಗಳ ಸೆಣಿತ (Pinched Nerves)

ಚಿಕಿತ್ಸೆ: ಎಂಆರ್‌ಐ, ಸಿಟಿ ಸ್ಕ್ಯಾನ್, ನೋವು ನಿವಾರಕ ಔಷಧಿಗಳು ಮತ್ತು ಫಿಸಿಯೋಥೆರಪಿ

ಪರಿಣಾಮ: ಚಿಕಿತ್ಸೆಯ ಸಮಯದಲ್ಲಿ ತೆಗೆದುಕೊಂಡ ಔಷಧಿಗಳಿಂದ ಗಂಟಲು ಸ್ವಲ್ಪ ಭಾರವಾಗಿದೆ

ಈ ಎಲ್ಲಾ ಸಂಗತಿಗಳನ್ನು ಸ್ವತಃ ಸೋನು ನಿಗಮ್ ಅವರೇ ಒಮ್ಮೆ ಸ್ಪಷ್ಟಪಡಿಸಿದ್ದರು.

ಒಟ್ಟಿನಲ್ಲಿ, ನೋವಿನಲ್ಲೂ ನಲಿವಿನಲ್ಲೂ ವೇದಿಕೆಯಲ್ಲೂ, ಮನೆಯಲ್ಲೂ ಹಾಗೂ ಆಸ್ಪತ್ರೆಯಲ್ಲೂ ಎಲ್ಲೇ ಇರಲಿ, ಗಾಯಕ ಸೋನು ನಿಗಮ್ ಅವರಿಗೆ ಸಂಗೀತವೇ ಉಸಿರು, ಸಂಗೀತವೇ ಬದುಕು. ಈ ವಿಡಿಯೋ ಮೂಲಕ ಜಗತ್ತು ಈ ಸಂಗತಿಯನ್ನು ಮನವರಿಕೆ ಮಾಡಿಕೊಂಡಂತಾಗಿದೆ ಎನ್ನಬಹುದು.