ಹೆರಾಯಿನ್ ಹೆಚ್ಚಾಗಿ ಆಸ್ಪತ್ರೆ ಸೇರಿದ ಮಾಡೆಲ್ ಕಂ ಗಾಯಕಿ

First Published 25, Jul 2018, 1:45 PM IST
Singer Demi Lovato hospitalised due to drug overdose
Highlights

ಈಕೆ ಕೇವಲ ಗಾಯಕಿ ಮಾತ್ರ ಅಲ್ಲ. ಮಾಡೆಲ್ ಆಗಿಯೂ ಗುರುತಿಸಿಕೊಂಡವಳು.. ಹಾಡಲು ನಿಂತರೂ ಇವಳನ್ನು ಹಿಂದೆ ಹಾಕಲು ಸಾಧ್ಯವಿಲ್ಲ. ಇನ್ನು ಫೋಸ್ ಕೊಡುವುದಕ್ಕೆ ಮುಂದಾದರೂ ಯಾವುದಕ್ಕೂ ಕ್ಯಾರೇ ಅನ್ನಲ್ಲ. ಆದರೆ ಈ ಗಾಯಕಿ ಕಂ ಮಾಡೆಲ್ ಇದೀಗ ಆಸ್ಪತ್ರೆ ಸೇರಿದ್ದಾರೆ.

ಲಾಸ್ ಎಂಜಲೀಸ್[ಜು.25] ಪಾಪ್ ಗಾಯಕಿ ಡೆಮಿ ಲೊವಾಟೋ ಆಸ್ಪತ್ರೆ ಸೇರಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹೆರಾಯನ್ ಸೇವಿಸಿದ ಗಾಯಕಿಯನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಮನೆಯಲ್ಲಿಯೇ ಅಮಲು ಹೆಚ್ಚಾಗಿ ಬಿದ್ದಿದ್ದ ಗಾಯಕಿಯ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದು ತಿಳಿದು ಬಂದಿಲ್ಲ. ಲಾಸ್ ಎಂಜಲೀಸ್ ನ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

ಡಿಸ್ನೆ ಚಾನಲ್ ಮೂಲಕ ಜನಪ್ರಿಯತೆ ಗಳಿಸಿದ್ದ ಗಾಯಕಿ ಖಿನ್ನತೆಯಿಂದ ಬಳಲುತ್ತಿದ್ದರು. 2011ರಲ್ಲಿಯೂ ಸಹ ಇದೇ ರೀತಿಯಲ್ಲಿ ಆಸ್ಪತ್ರೆ ಸೇರಿದ್ದರು. 2018 ರ ಜುನ್ ನಲ್ಲಿ ಆಕೆ ಬಿಡುಗಡೆ ಮಾಡಿದ್ದ ‘ಮಮ್ಮಾ ಆ ಯಾಮ್ ಸಾರಿ’ ಹಾಡು ಹಾಲಿವುಡ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು.

ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು

loader